ಭಾನುವಾರದ ಸ್ಪೆಷಲ್ “ಮಟನ್ ಚಾಪ್ಸ್” ರೆಸಿಪಿ
ಬೆಂಗಳೂರು, 31 ಮೇ (ಹಿ.ಸ.) : ಆ್ಯಂಕರ್ : ವಾರಾಂತ್ಯದ ವಿಶೇಷ ಊಟಕ್ಕೆ ಮಾಂಸಾಹಾರ ಪ್ರಿಯರು ಹೆಚ್ಚಾಗಿ ಹುಡುಕುವ ಖಾದ್ಯಗಳಲ್ಲಿ ಮಟನ್ ಚಾಪ್ಸ್ ಪ್ರಮುಖ ಸ್ಥಾನ ಪಡೆದಿದೆ. ಮೃದುವಾಗಿ ಬೇಯಿಸಿದ ಮಟನ್ಗೆ ಖಾರದ ಮಸಾಲೆ ಹಚ್ಚಿ ರೋಸ್ಟ್ ಮಾಡುವ ಈ ಖಾದ್ಯ, ಹೋಟೆಲ್ಗಳಲ್ಲಿ ಮಾತ್ರವಲ್ಲದೆ ಮನೆಯಲ್ಲಿಯೂ ಸುಲಭವಾಗಿ
ಮಟನ್ ಚಾಪ್ಸ್


ಬೆಂಗಳೂರು, 31 ಮೇ (ಹಿ.ಸ.) :

ಆ್ಯಂಕರ್ : ವಾರಾಂತ್ಯದ ವಿಶೇಷ ಊಟಕ್ಕೆ ಮಾಂಸಾಹಾರ ಪ್ರಿಯರು ಹೆಚ್ಚಾಗಿ ಹುಡುಕುವ ಖಾದ್ಯಗಳಲ್ಲಿ ಮಟನ್ ಚಾಪ್ಸ್ ಪ್ರಮುಖ ಸ್ಥಾನ ಪಡೆದಿದೆ. ಮೃದುವಾಗಿ ಬೇಯಿಸಿದ ಮಟನ್ಗೆ ಖಾರದ ಮಸಾಲೆ ಹಚ್ಚಿ ರೋಸ್ಟ್ ಮಾಡುವ ಈ ಖಾದ್ಯ, ಹೋಟೆಲ್ಗಳಲ್ಲಿ ಮಾತ್ರವಲ್ಲದೆ ಮನೆಯಲ್ಲಿಯೂ ಸುಲಭವಾಗಿ ತಯಾರಿಸಬಹುದಾಗಿದೆ. ಸಾಂಪ್ರದಾಯಿಕ ಮಸಾಲೆಗಳ ಸುವಾಸನೆ ಮತ್ತು ರುಚಿಯ ಸಂಯೋಜನೆಯಿಂದ ಈ ಪದಾರ್ಥ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ.

ಬೇಕಾಗುವ ಸಾಮಗ್ರಿಗಳು

ಮಟನ್ ಚಾಪ್ಸ್ – 500 ಗ್ರಾಂ

ಈರುಳ್ಳಿ – 2 (ಸಣ್ಣವಾಗಿ ಕತ್ತರಿಸಿದ)

ಟೊಮ್ಯಾಟೊ – 2

ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 2 ಟೀ ಸ್ಪೂನ್

ಕೆಂಪು ಮೆಣಸಿನ ಪುಡಿ – 2 ಟೀ ಸ್ಪೂನ್

ಧನಿಯಾ ಪುಡಿ – 1 ಟೀ ಸ್ಪೂನ್

ಅರಿಶಿನ ಪುಡಿ – ಅರ್ಧ ಟೀ ಸ್ಪೂನ್

ಗರಂ ಮಸಾಲೆ – 1 ಟೀ ಸ್ಪೂನ್

ಉಪ್ಪು – ರುಚಿಗೆ ತಕ್ಕಷ್ಟು

ಕರಿಬೇವು – ಸ್ವಲ್ಪ

ಕೊತ್ತಂಬರಿ ಸೊಪ್ಪು – ಸ್ವಲ್ಪ

ಎಣ್ಣೆ – ಅಗತ್ಯವಷ್ಟು

ನಿಂಬೆ ರಸ – 1 ಟೀ ಸ್ಪೂನ್

ತಯಾರಿಸುವ ವಿಧಾನ

ಮೊದಲಿಗೆ ಮಟನ್ ಚಾಪ್ಸ್ಗಳನ್ನು ಚೆನ್ನಾಗಿ ತೊಳೆದು ಉಪ್ಪು ಮತ್ತು ಅರಿಶಿನ ಹಾಕಿ ಕುಕ್ಕರ್ನಲ್ಲಿ ಮೃದುವಾಗುವವರೆಗೆ ಬೇಯಿಸಿಕೊಳ್ಳಬೇಕು.

ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಣ್ಣವಾಗಿ ಕತ್ತರಿಸಿದ ಈರುಳ್ಳಿಯನ್ನು ಹಾಕಿ ಬಂಗಾರದ ಬಣ್ಣ ಬರುವವರೆಗೆ ಹುರಿಯಬೇಕು. ಆ ಬಳಿಕ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಕಲಸಬೇಕು.

ಇದಕ್ಕೆ ಟೊಮ್ಯಾಟೊ ಸೇರಿಸಿ ಚೆನ್ನಾಗಿ ಬೇಯಿಸಿದ ನಂತರ ಕೆಂಪು ಮೆಣಸಿನ ಪುಡಿ, ಧನಿಯಾ ಪುಡಿ, ಅರಿಶಿನ ಹಾಗೂ ಗರಂ ಮಸಾಲೆ ಸೇರಿಸಿ ಎಣ್ಣೆ ಬಿಡುವವರೆಗೆ ಫ್ರೈ ಮಾಡಬೇಕು.

ಈಗ ಬೇಯಿಸಿಕೊಂಡಿರುವ ಮಟನ್ ಚಾಪ್ಸ್ಗಳನ್ನು ಸೇರಿಸಿ ಮಸಾಲೆ ಚೆನ್ನಾಗಿ ಹಚ್ಚಿಕೊಳ್ಳುವಂತೆ ನಿಧಾನ ಉರಿಯಲ್ಲಿ ಕಲಸಬೇಕು.

ಕೊನೆಯಲ್ಲಿ ಕರಿಬೇವು, ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ರಸ ಸೇರಿಸಿ ಸುಮಾರು ಐದು ನಿಮಿಷಗಳ ಕಾಲ ರೋಸ್ಟ್ ಮಾಡಿದರೆ ರುಚಿಕರವಾದ ಮಟನ್ ಚಾಪ್ಸ್ ಸವಿಯಲು ಸಿದ್ಧವಾಗುತ್ತದೆ.

ಈ ಮಟನ್ ಚಾಪ್ಸ್ನ್ನು ಬಿಸಿ ಬಿಸಿ ರಾಗಿ ಮುದ್ದೆ, ಚಪಾತಿ, ಪರೋಟಾ ಅಥವಾ ಬಿರಿಯಾನಿಯೊಂದಿಗೆ ಸವಿದರೆ ಇನ್ನಷ್ಟು ರುಚಿಕರವಾಗಿರುತ್ತದೆ. ಕುಟುಂಬದೊಂದಿಗೆ ಭಾನುವಾರದ ವಿಶೇಷ ಊಟಕ್ಕೆ ಅಥವಾ ಸ್ನೇಹಿತರ ಕೂಟಗಳಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande