ಮುಳಬಾಗಿಲು ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ ಸಿಬ್ಬಂದಿ ನಾರಾಯಣಸ್ವಾಮಿಗೆ ಬೀಳ್ಕೊಡುಗೆ
ಮುಳಬಾಗಿಲು ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ ಸಿಬ್ಬಂದಿ ನಾರಾಯಣಸ್ವಾಮಿಗೆ ಬೀಳ್ಕೊಡುಗೆ
ಮುಳಬಾಗಿಲು ತಾಲ್ಲೂಕಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಿವೃತ್ತರಾದ ನಾರಾಯಣಸ್ವಾಮಿರನ್ನು ಬೀಳ್ಕೊಡಲಾಯಿತು.


ಕೋಲಾರ ಮೇ ೩೦ (ಹಿ.ಸ) :

ಆ್ಯಂಕರ್ : ಮುಳಬಾಗಿಲಿನ ಕಾಂತರಾಜು ಸರ್ಕಲ್ ಬಳಿ ಇರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರಥಮ ದರ್ಜೆ ಸಹಾಯಕರಾದ ಟಿ.ಸಿ. ನಾರಾಯಣಸ್ವಾಮಿ ಅವರ ವಯೋನಿವೃತ್ತಿ ಪ್ರಯುಕ್ತ ಗೌರವಪೂರ್ವಕ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಸಂಸ್ಥೆಯ ಪ್ರಾಚಾರ್ಯರಾದ ಬಿ. ಕವಿತಾ ಅವರು ಮಾತನಾಡಿ, ನಿವೃತ್ತಿ ಹೊಂದುತ್ತಿರುವ ಟಿ.ಸಿ. ನಾರಾಯಣಸ್ವಾಮಿ ಅವರ ಸುದೀರ್ಘ ಸೇವೆಯನ್ನು ಶ್ಲಾಘಿಸಿದರು ಹಾಗೂ ಅವರ ಮುಂದಿನ ನಿವೃತ್ತ ಜೀವನ ಸುಖಮಯವಾಗಿರಲಿ ಎಂದು ಶುಭ ಹಾರೈಸಿದರು.

ಸಮಾರಂಭದಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರುಗಳಾದ ಬಸವರಾಜ್, ಮಂಜುಳಾ, ನರೇಂದ್ರ, ಸುನೀತಾ, ರಿಜಿಸ್ಟ್ರಾರ್, ಉಪನ್ಯಾಸಕರುಗಳು, ಕಾರ್ಯಗಾರ ಸಿಬ್ಬಂದಿ ವರ್ಗದವರು ಹಾಗೂ ಕಚೇರಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು, ನಿವೃತ್ತ ನೌಕರರನ್ನು ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಟ್ಟರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande