ಐಪಿಎಲ್ : ಪರ್ಪಲ್ ಕ್ಯಾಪ್ ಪೈಪೋಟಿಯಲ್ಲಿ ಕಾರ್ತಿಕ್ ತ್ಯಾಗಿ ಐದನೇ ಸ್ಥಾನಕ್ಕೆ
ನವದೆಹಲಿ, 21 ಮೇ (ಹಿ.ಸ.) : ಆ್ಯಂಕರ್ : ಭಾರತೀಯ ಪ್ರೀಮಿಯರ್ ಲೀಗ್ 2026ರ ಟೂರ್ನಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವೇಗಿ ಕಾರ್ತಿಕ್ ತ್ಯಾಗಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನದ ಮೂಲಕ ಪರ್ಪಲ್ ಕ್ಯಾಪ್ ಪೈಪೋಟಿಯಲ್ಲಿ ಐದನೇ ಸ್ಥಾನಕ್ಕೇರಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ
IPL


ನವದೆಹಲಿ, 21 ಮೇ (ಹಿ.ಸ.) :

ಆ್ಯಂಕರ್ : ಭಾರತೀಯ ಪ್ರೀಮಿಯರ್ ಲೀಗ್ 2026ರ ಟೂರ್ನಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವೇಗಿ ಕಾರ್ತಿಕ್ ತ್ಯಾಗಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನದ ಮೂಲಕ ಪರ್ಪಲ್ ಕ್ಯಾಪ್ ಪೈಪೋಟಿಯಲ್ಲಿ ಐದನೇ ಸ್ಥಾನಕ್ಕೇರಿದ್ದಾರೆ.

ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಎರಡು ವಿಕೆಟ್ ಕಬಳಿಸಿದ ತ್ಯಾಗಿ, ಒಟ್ಟು 18 ವಿಕೆಟ್ಗಳನ್ನು ಪಡೆದು ಅಗ್ರ ಬೌಲರ್ಗಳ ಪಟ್ಟಿಯಲ್ಲಿ ಮಹತ್ವದ ಏರಿಕೆ ಕಂಡಿದ್ದಾರೆ. ಮುಂಬೈ ತಂಡದ ತಿಲಕ್ ವರ್ಮಾ ಅವರನ್ನು ಔಟ್ ಮಾಡಿದ ತ್ಯಾಗಿ, ಇನ್ನಿಂಗ್ಸ್ನ ಕೊನೆಯ ಎಸೆತದಲ್ಲಿ ದೀಪಕ್ ಚಹರ್ ವಿಕೆಟ್ ಪಡೆದು ತಮ್ಮ ಖಾತೆಗೆ ಮತ್ತೆರಡು ವಿಕೆಟ್ ಸೇರಿಸಿಕೊಂಡರು.

ಟೂರ್ನಿಯ ಆರಂಭದಲ್ಲಿ ಸಾಧಾರಣ ಪ್ರದರ್ಶನ ನೀಡಿದ್ದ ತ್ಯಾಗಿ, ಇದೀಗ ಕೋಲ್ಕತ್ತಾ ತಂಡದ ಗೆಲುವುಗಳಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಕಳೆದ ಏಳು ಪಂದ್ಯಗಳಲ್ಲಿ ಆರು ಜಯಗಳಿಸಿರುವ ಕೋಲ್ಕತ್ತಾ ತಂಡದ ಪ್ಲೇಆಫ್ ಕನಸಿಗೆ ಅವರ ಬೌಲಿಂಗ್ ಬಲ ತುಂಬಿದೆ.

ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ಭುವನೇಶ್ವರ್ ಅಗ್ರಸ್ಥಾನ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅನುಭವಿ ವೇಗಿ ಭುವನೇಶ್ವರ್ ಕುಮಾರ್ 24 ವಿಕೆಟ್ಗಳೊಂದಿಗೆ ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿದ್ದಾರೆ.

ಗುಜರಾತ್ ಟೈಟನ್ಸ್ ತಂಡದ ಕಗಿಸೊ ರಬಾಡಾ 21 ವಿಕೆಟ್ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಂಶುಲ್ ಕಂಬೋಜ್ 20 ವಿಕೆಟ್ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

ರಾಜಸ್ಥಾನ್ ರಾಯಲ್ಸ್ ತಂಡದ ಜೋಫ್ರಾ ಆರ್ಚರ್ ಮತ್ತು ಕಾರ್ತಿಕ್ ತ್ಯಾಗಿ ಇಬ್ಬರೂ ತಲಾ 18 ವಿಕೆಟ್ ಪಡೆದಿದ್ದರೂ, ಉತ್ತಮ ಎಕಾನಮಿ ದರದ ಆಧಾರದ ಮೇಲೆ ಆರ್ಚರ್ ನಾಲ್ಕನೇ ಸ್ಥಾನದಲ್ಲಿದ್ದು, ತ್ಯಾಗಿ ಐದನೇ ಸ್ಥಾನದಲ್ಲಿದ್ದಾರೆ.

ಇನ್ನೊಂದೆಡೆ, ಕೋಲ್ಕತ್ತಾ ತಂಡದ ಅನುಭವಿ ಸ್ಪಿನ್ನರ್ ಸುನೀಲ್ ನಾರೈನ್ ಮುಂಬೈ ವಿರುದ್ಧದ ಪಂದ್ಯದಲ್ಲಿ 13 ರನ್ ನೀಡಿ ಒಂದು ವಿಕೆಟ್ ಪಡೆದರು. ಈ ಋತುವಿನಲ್ಲಿ ಅವರು 14 ವಿಕೆಟ್ ಕಬಳಿಸಿದ್ದು, 6.40 ಎಕಾನಮಿ ದರದೊಂದಿಗೆ ಅತ್ಯಂತ ಮಿತವ್ಯಯಿ ಬೌಲರ್ ಎನಿಸಿಕೊಂಡಿದ್ದಾರೆ.

ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ವೈಭವ್ ಸೂರ್ಯವಂಶಿ ಮುನ್ನಡೆ

ಆರೆಂಜ್ ಕ್ಯಾಪ್ ಪೈಪೋಟಿಯಲ್ಲಿ ದೊಡ್ಡ ಬದಲಾವಣೆ ಕಂಡುಬಂದಿಲ್ಲ. ಕೋಲ್ಕತ್ತಾ ತಂಡದ ಅಂಗಕೃಷ್ ರಘುವಂಶಿ ಫೀಲ್ಡಿಂಗ್ ವೇಳೆ ಗಾಯಗೊಂಡ ಕಾರಣ ಬ್ಯಾಟಿಂಗ್ಗೆ ಬರಲಿಲ್ಲ. ಮುಂಬೈ ಇಂಡಿಯನ್ಸ್ ಆಟಗಾರ ರಿಯಾನ್ ರಿಕಲ್ಟನ್ ಕೇವಲ 6 ರನ್ಗಳಿಗೆ ಔಟಾದರು.

ರಾಜಸ್ಥಾನ್ ರಾಯಲ್ಸ್ ತಂಡದ ವೈಭವ್ ಸೂರ್ಯವಂಶಿ 579 ರನ್ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಲಖನೌ ಸೂಪರ್ ಜೈಂಟ್ಸ್ ತಂಡದ ಮಿಚೆಲ್ ಮಾರ್ಷ್ 563 ರನ್ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

ಸನ್ರೈಸರ್ಸ್ ಹೈದರಾಬಾದ್ ತಂಡದ ಹೆನ್ರಿಕ್ ಕ್ಲಾಸೆನ್ 555 ರನ್ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ಗುಜರಾತ್ ಟೈಟನ್ಸ್ ತಂಡದ ಬಿ. ಸಾಯಿ ಸುಧರ್ಶನ್ 554 ಹಾಗೂ ಶುಭಮನ್ ಗಿಲ್ 552 ರನ್ಗಳೊಂದಿಗೆ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande