
ಬಳ್ಳಾರಿ, 21 ಮೇ (ಹಿ.ಸ.) :
ಆ್ಯಂಕರ್ : ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಬೆಂಗಳೂರಿನ ಕೆಎಸ್ಬಿ ಶಾಖೆಯು ಇಪ್ಪತ್ತೈದಕ್ಕಿಂತಲೂ ಹೆಚ್ಚು ಸಲ ರಕ್ತದಾನ ಮಾಡಿರುವವರನ್ನು ಸನ್ಮಾನಿಸಿ - ಗೌರವಿಸಲಿದ್ದು, ಅರ್ಜಿ ಆಹ್ವಾನಿಸಿದೆ.
ಇಪ್ಪತ್ತೈದಕ್ಕಿಂತಲೂ ಹೆಚ್ಚುಸಲ ರಕ್ತದಾನ ಮಾಡಿರುವವರು ರಕ್ತದಾನ ಮಾಡಿರುವ ಪ್ರಮಾಣ ಪತ್ರಗಳ ಜೆರಾಕ್ಸ್ ಪ್ರತಿಯನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಬಳ್ಳಾರಿ ಶಾಖೆಗೆ ದಿನಾಂಕ: 26.05.2026ರ ಸಂಜೆ: 05:00ರ ಒಳಗಾಗಿ ನೀಡಲು ಕೋರಲಾಗಿದೆ. ಈಗಾಗಲೇ ಸನ್ಮಾನಿತರು ಅರ್ಜಿ ಸಲ್ಲಿಸುವ ಅಗತ್ಯವಿಲ್ಲ.
ಸಂಪರ್ಕಿಸುವ ವಿಳಾಸ : ಎಂ.ಎ. ಷಕೀಬ್, ಜಿಲ್ಲಾ ಕಾರ್ಯದರ್ಶಿಗಳು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಹಳೆ ನ್ಯಾಯಾಲಯ ರಸ್ತೆ, ಬಳ್ಳಾರಿ. 583101. ದೂರವಾಣಿ ಸಂಖ್ಯೆ : 9886173411ಗೆ ಸಂಪರ್ಕಿಸಿರಿ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್