
ಕೊಪ್ಪಳ, 21 ಮೇ (ಹಿ.ಸ.) :
ಆ್ಯಂಕರ್ : ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ (ರಿ.), ಹಳಿಯಾಳ - ತರಬೇತಿ ಸಂಸ್ಥೆಯಲ್ಲಿ 18 ರಿಂದ 45 ವರ್ಷ ವಯೋಮಿತಿಯ ಗ್ರಾಮೀಣ ಭಾಗದ ಆಸಕ್ತಿ ಇರುವ ಅಭ್ಯರ್ಥಿಗಳಿಗಾಗಿ 2026ರ ಜೂನ್ 12ರಿಂದ ಆರಂಭವಾಗುವ ಹೈನುಗಾರಿಕೆ ಮತ್ತು ಎರೆಹುಳ ಗೊಬ್ಬರ ತಯಾರಿಕೆ ತರಬೇತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ತರಬೇತಿ ಊಟ ಹಾಗೂ ವಸತಿ ಸೌಲಭ್ಯಗಳೊಂದಿಗೆ ಸಂಪೂರ್ಣ ಉಚಿತವಾಗಿದ್ದು, ತರಬೇತಿ ಪೂರ್ಣಗೊಂಡ ನಂತರ ಸ್ವಯಂ ಉದ್ಯೋಗ ಆರಂಭಿಸಲು ಅನುಕೂಲವಾಗುತ್ತದೆ.
ಈ ತರಬೇತಿಯಲ್ಲಿ ಹೈನುಗಾರಿಕೆಯ ಮೂಲಭೂತ ಜ್ಞಾನ, ಹಸುಗಳ ಆರೈಕೆ, ಆಹಾರ ನಿರ್ವಹಣೆ, ಹಾಲು ಉತ್ಪಾದನೆ, ಪಶು ಆರೋಗ್ಯ ಸಂರಕ್ಷಣೆ, ಗೋಶಾಲೆ ನಿರ್ವಹಣೆ, ಎರೆಹುಳ ಗೊಬ್ಬರ ತಯಾರಿಕೆ ವಿಧಾನ, ಸಾವಯವ ಕೃಷಿಯ ಮಹತ್ವ ಹಾಗೂ ಸ್ವಯಂ ಉದ್ಯೋಗ ಆರಂಭಿಸುವ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ.
ಕರ್ನಾಟಕ ರಾಜ್ಯದ ಯಾವುದೇ ಜಿಲ್ಲೆಯ ಆಸಕ್ತ ಅಭ್ಯರ್ಥಿಗಳು ತರಬೇತಿಗೆ ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು ಬಿಳಿ ಹಾಳೆಯ ಮೇಲೆ ತಮ್ಮ ಹೆಸರು, ವಿಳಾಸ, ಜನ್ಮ ದಿನಾಂಕ ಮತ್ತು ಮೊಬೈಲ್ ಸಂಖ್ಯೆಯನ್ನು ಸ್ಪಷ್ಟವಾಗಿ ಬರೆದು, ಅದರ ಫೋಟೋ ತೆಗೆದು ಕೆಳಗಿನ ಮೊಬೈಲ್ ಸಂಖ್ಯೆ 9483485489 ಅಥವಾ 8970145354 ಗೆ ವಾಟ್ಸಾಪ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ಕರೆ ಮಾಡಿ ಹೆಸರು ನೋಂದಾಯಿಸಬಹುದು ಹಾಗೂ ವಾಟ್ಸಾಪ್ ಚಾನಲ್ ಲಿಂಕ್ CBD RSETI Haliyal
ಮೂಲಕವೂ ಅರ್ಜಿ ಸಲ್ಲಿಸಬಹುದು ಎಂದು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ (ರಿ.), ಹಳಿಯಾಳ ತರಬೇತಿ ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್