ತಳಕಲ್ ಐ.ಟಿ.ಐ ಖಾಲಿ ಸ್ಥಾನಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ
ಕೊಪ್ಪಳ, 21 ಮೇ (ಹಿ.ಸ.) : ಆ್ಯಂಕರ್ : ತಳಕಲ್ ಗ್ರಾಮದಲ್ಲಿರುವ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ವಿವಿಧ ವೃತ್ತಿಗಳಲ್ಲಿ ಖಾಲಿ ಇರುವ ಸ್ಥಾನಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ತಳಕಲ್ ಗ್ರಾಮದಲ್ಲಿರುವ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2023-24ನೇ ಸಾಲಿನ ಎನ್.ಸಿ.ವಿ.ಟ
ತಳಕಲ್ ಐ.ಟಿ.ಐ ಖಾಲಿ ಸ್ಥಾನಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ


ಕೊಪ್ಪಳ, 21 ಮೇ (ಹಿ.ಸ.) :

ಆ್ಯಂಕರ್ : ತಳಕಲ್ ಗ್ರಾಮದಲ್ಲಿರುವ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ವಿವಿಧ ವೃತ್ತಿಗಳಲ್ಲಿ ಖಾಲಿ ಇರುವ ಸ್ಥಾನಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ತಳಕಲ್ ಗ್ರಾಮದಲ್ಲಿರುವ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2023-24ನೇ ಸಾಲಿನ ಎನ್.ಸಿ.ವಿ.ಟಿ ಸಂಯೋಜನೆ ಹೊಂದಿದ ಪಿ.ಪಿ.ಪಿ ಯೋಜನೆಯಡಿಯಲ್ಲಿನ ವಿವಿಧ ವೃತ್ತಿಗಳ ಸೀಟ್ಗಳು ಖಾಲಿ ಇದ್ದು, ಆಸಕ್ತ ಎಸ್.ಎಸ್.ಎಲ್.ಸಿ ಪಾಸಾದ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು. ಮೊದಲು ಬಂದವರಿಗೆ ಮೊದಲ ಆದ್ಯತೆ ಮೇರೆಗೆ ಮತ್ತು ಅರ್ಜಿಯನ್ನು ಸಲ್ಲಿಸಿ ನಿಗದಿತ ಶುಲ್ಕ ಪಾವತಿಸಿದವರಿಗೆ ಪ್ರವೇಶವನ್ನು ನೀಡಲಾಗುವುದು.

2023-24ನೇ ಸಾಲಿನ ಎನ್.ಸಿ.ವಿ.ಟಿ ಸಂಯೋಜನೆ ಹೊಂದಿದ ಪಿ.ಪಿ.ಪಿ ಯೋಜನೆಯಡಿಯಲ್ಲಿನ ವಿವಿಧ ವೃತ್ತಿಗಳಾದ Electrician, Fitter, Electronics Mechanic, Mechanic Electric Vehicle, Advance CNC Machining Technician, Basic Designer & Virtual Verifier, ಈ ಎಲ್ಲಾ ವೃತ್ತಿಗಳಲ್ಲಿ 4 ಸ್ಥಾನಗಳು ಖಾಲಿ ಇದ್ದು, ತರಬೇತಿ ಅವಧಿ 2 ವರ್ಷಗಳು. ಹಾಗೂ Artisan Using Advanced Tool, Manufacturing Process Control and Automation, Industrial Robotics and Digital Manufacturing, ಈ ಎಲ್ಲಾ ವೃತ್ತಿಗಳಲ್ಲಿ 4 ಸ್ಥಾನಗಳು ಖಾಲಿ ಇದ್ದು, ತರಬೇತಿ ಅವಧಿಯು 1 ವರ್ಷ ಆಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು, ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ತಳಕಲ್ ಇಲ್ಲಿಗೆ ಅಥವಾ ಮೊ.ಸಂ: 9741744109, 9945982260, 9902850748, 9538991007, 9035852362, 7353560098, 9844118812, 8317450950, 8147811887 ಹಾಗೂ 8951596076 ಗೆ ಸಂಪರ್ಕಿಸಬಹುದು ಎಂದು ತಳಕಲ್ ಸರಕಾರಿ ಕೈಗಾರಿಕ ತರಬೇತಿ ಸಂಸ್ಥೆಯ ಪ್ರಾಚಾರ್ಯರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande