
ಕೊಪ್ಪಳ, 15 ಮೇ (ಹಿ.ಸ.) :
ಆ್ಯಂಕರ್ : ಮಳೆ ಮತ್ತು ಸಿಡಿಲಿನ ಮುನ್ಸೂಚನೆಗಳಿಗಾಗಿ ನಾನಾ ಸೌಲಭ್ಯಗಳನ್ನು ಬಳಸಿಕೊಳ್ಳಬಹುದು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿಗಳಾದ ಡಾ.ಸುರೇಶ ಬಿ ಇಟ್ನಾಳ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಮಳೆ ಮತ್ತು ಸಿಡಿಲಿನ ಎಚ್ಚರಿಕೆಯ ಸಂದೇಶವನ್ನು ಪಡೆಯಲು https://www.ksndmc.org/MobileRegister_Kn.asp ಮೂಲಕ ಚಂದಾದಾರಿಕೆ ಸೌಲಭ್ಯ ಬಳಸಬಹುದು.
ಅದೆ ರೀತಿ, https://play.google.com/store/apps/details ಎನ್ನುವ ಸಿಡಿಲು ಆಂಡ್ರಾಯ್ಡ್ ಅಪ್ಲಿಕೇಶನ್ ಬಳಸಿ ಮಳೆ ಮತ್ತು ಸಿಡಿಲು ವಿವರಗಳನ್ನು ಪಡೆಯಬಹುದು.
ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ವೆಬ್ಸೈಟ್ https://www.ksndmc.org/ ಬಳಸಿ ಹವಾಮಾನದ ಬಗ್ಗೆ ಎಚ್ಚರಿಕೆಗಳಿಗಳನ್ನು ಪಡೆಯಬಹುದು.
ದೂರವಾಣಿ ಸಂಖ್ಯೆ 080-67355000 ಅಥವಾ ವರುಣ ಮಿತ್ರ 24x7 : 9243345433ಗು ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ಕೊಪ್ಪಳ ಜಿಲ್ಲಾಡಳಿತವು ಸಾರ್ವಜನಿಕರಲ್ಲಿ ಮನವಿ ಮಾಡಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್