ಯಶಸ್ವಿಯಾಗಿ ನಡೆದ ಸಂಗೀತ ನೃತ್ಯ ಮತ್ತು ತಾಳವಾದ್ಯಗಳ ಪರೀಕ್ಷೆಗಳು
ಬಳ್ಳಾರಿ, 14 ಮೇ (ಹಿ.ಸ.) : ಆ್ಯಂಕರ್ : ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯ ಏರ್ಪಡಿಸಿರುವ ಎರೆಡು ದಿನಗಳ ಪ್ರಾಯೋಗಿಕ ಪರೀಕ್ಷೆಗಳು ಶ್ರೀಮೇಧಾ ಕಾಲೇಜಿನಲ್ಲಿ ಯಶಸ್ವಿಯಾಗಿ ನೆರವೇರಿವೆ. ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್
ಯಶಸ್ವಿಯಾಗಿ ನಡೆದ ಸಂಗೀತ ನೃತ್ಯ ಮತ್ತು ತಾಳವಾದ್ಯಗಳ ಪರೀಕ್ಷೆಗಳು


ಯಶಸ್ವಿಯಾಗಿ ನಡೆದ ಸಂಗೀತ ನೃತ್ಯ ಮತ್ತು ತಾಳವಾದ್ಯಗಳ ಪರೀಕ್ಷೆಗಳು


ಬಳ್ಳಾರಿ, 14 ಮೇ (ಹಿ.ಸ.) :

ಆ್ಯಂಕರ್ : ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯ ಏರ್ಪಡಿಸಿರುವ ಎರೆಡು ದಿನಗಳ ಪ್ರಾಯೋಗಿಕ ಪರೀಕ್ಷೆಗಳು ಶ್ರೀಮೇಧಾ ಕಾಲೇಜಿನಲ್ಲಿ ಯಶಸ್ವಿಯಾಗಿ ನೆರವೇರಿವೆ.

ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪೆÇ್ರ. ಕೆ. ರಾಮಕೃಷ್ಣಯ್ಯ ಅವರು, ಕಲ್ಯಾಣ ಕರ್ನಾಟಕದಲ್ಲಿ ಸಂಗೀತ, ನೃತ್ಯ ಮತ್ತು ನಾಟಕಗಳಿಗೆ ಕೊಡುಗೆಯನ್ನು ನೀಡಿದವರು ಬಹಳಷ್ಟು ಮಹನೀಯರಿದ್ದಾರೆ. ಅವರ ಪರಂಪರೆಯೇ ಈ ವಿಶೇಷ ಪರೀಕ್ಷೆಗಳನ್ನು ಗುರುಕುಲ ಪದ್ಧತಿಯಲ್ಲಿ ನಡೆಸಿಕೊಂಡು ಹೋಗಲಾಗುತ್ತದೆ ಎಂದರು.

ಶ್ರೀಮೇಧಾ ಪದವಿ ಕಾಲೇಜಿನಲ್ಲಿ ಮೈಸೂರಿನ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದಿಂದ 2025-26ನೇ ಸಾಲಿನ ವಿಶೇಷ ಸಂಗೀತ ನೃತ್ಯ ಹಾಗೂ ತಾಳವಾದ್ಯಗಳ ಲಿಖಿತ - ಪ್ರಾಯೋಗಿಕ ಪರೀಕ್ಷೆಗಳು ನಡೆದವು.

ಶ್ರೀಮೇಧಾ ಸಂಗೀತ ಮತ್ತು ಪ್ರದರ್ಶಕ ಕಲೆಗಳ ಕಾಲೇಜಿನ ಪ್ರಾಂಶುಪಾಲರಾದ ಕೆ. ರಾಂಕಿರಣ್ ಅವರು, ಭವಿಷ್ಯದಲ್ಲಿ ಸಂಗೀತ, ನೃತ್ಯ ಮತ್ತು ನಾಟಕಗಳ ಪ್ರಾದೇಶಿಕ ಕಛೇರಿಯನ್ನು ಬಳ್ಳಾರಿಯಲ್ಲಿ ಆರಂಭಿಸಿದರೆ ಇಲ್ಲಿಯ ಸಾಂಸ್ಕøತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಲು ಅನುಕೂಲವಾಗುತ್ತದೆ ಎಂದರು.

ರಾಜ್ಯ ಪ್ರಶಸ್ತಿ ಪುರಸ್ಕೃತರಾದ ನೃತ್ಯ ಶಿಕ್ಷಕರಾದ ಜಿಲಾನ್ ಭಾಷ, ಸಂಗೀತ ಶಿಕ್ಷಕರಾದ ಮಲ್ಲಿಕಾರ್ಜುನ ತೂರ್ನುರು, ನೃತ್ಯ ಶಿಕ್ಷಕಿ ಅಂಜಲಿ, ನೃತ್ಯ ಶಿಕ್ಷಕರಾದ ಅಲ್ತಾಫ್, ಮಾಸ್ಟರ್ ಅಭಿಷೇಕ್, ಸಂಗೀತ ಶಿಕ್ಷಕರಾದ ಶ್ರೀಮತಿ ರಾಜೇಶ್ವರಿ, ರೇಣುಕಾ, ದೊಡ್ಡಯ್ಯ ಗವಾಯಿಗಳು ಹಾಗೂ ವಿಶ್ವವಿದ್ಯಾಲಯದ ಸಂಯೋಜಕರಾದ ಡಾ. ಅಣ್ಣಾಜಿ ಕೃಷ್ಣಾರೆಡ್ಡಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande