ಘನತ್ಯಾಜ್ಯ ನಿರ್ವಹಣೆ : ಕೊಪ್ಪಳ ನಗರಸಭೆ - ಹೊಸ ಮಾರ್ಗಸೂಚಿ ಪ್ರಕಟ
ಕೊಪ್ಪಳ, 14 ಮೇ (ಹಿ.ಸ.) : ಆ್ಯಂಕರ್ : ನಗರದ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಮತ್ತು ಕೇಂದ್ರ ಸರ್ಕಾರದ ಘನತ್ಯಾಜ್ಯ ವಸ್ತುಗಳ ನಿರ್ವಹಣೆ ನಿಯಮಗಳು-2026ರ ಅನ್ವಯ, ಕೊಪ್ಪಳ ನಗರಸಭೆಯು ಹೊಸ ಕಾರ್ಯಸೂಚಿಯನ್ನು ಪ್ರಕಟಿಸಿದೆ. ಕೊಪ್ಪಳ ನಗರಸಭೆ ವ್ಯಾಪ್ತಿಯ ಎಲ್ಲಾ ಸಾರ್ವಜನಿಕರು ತಮ್ಮ ಮನೆ ಅಥ
ಘನತ್ಯಾಜ್ಯ ನಿರ್ವಹಣೆ : ಕೊಪ್ಪಳ ನಗರಸಭೆ - ಹೊಸ ಮಾರ್ಗಸೂಚಿ ಪ್ರಕಟ


ಕೊಪ್ಪಳ, 14 ಮೇ (ಹಿ.ಸ.) :

ಆ್ಯಂಕರ್ : ನಗರದ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಮತ್ತು ಕೇಂದ್ರ ಸರ್ಕಾರದ ಘನತ್ಯಾಜ್ಯ ವಸ್ತುಗಳ ನಿರ್ವಹಣೆ ನಿಯಮಗಳು-2026ರ ಅನ್ವಯ, ಕೊಪ್ಪಳ ನಗರಸಭೆಯು ಹೊಸ ಕಾರ್ಯಸೂಚಿಯನ್ನು ಪ್ರಕಟಿಸಿದೆ.

ಕೊಪ್ಪಳ ನಗರಸಭೆ ವ್ಯಾಪ್ತಿಯ ಎಲ್ಲಾ ಸಾರ್ವಜನಿಕರು ತಮ್ಮ ಮನೆ ಅಥವಾ ವಾಣಿಜ್ಯ ಮಳಿಗೆಗಳಲ್ಲಿ ಉತ್ಪತ್ತಿಯಾಗುವ ಹಸಿ ತ್ಯಾಜ್ಯ, ಒಣ ತ್ಯಾಜ್ಯ, ಸ್ಯಾನಿಟರಿ ತ್ಯಾಜ್ಯ ಹಾಗೂ ಅಪಾಯಕಾರಿ ತ್ಯಾಜ್ಯಗಳನ್ನು (ಬಲ್ಸ್ ಗಳು, ಬ್ಯಾಟರಿಗಳು, ಅವಧಿ ಮುಗಿದ ಔಷಧಿಗಳು ಇತ್ಯಾದಿ ಕಡ್ಡಾಯವಾಗಿ ಪ್ರತ್ಯೇಕಿಸಿ ವಿಂಗಡಿಸಬೇಕು.

ದಿನಕ್ಕೆ 100 ಕೆ.ಜಿ ಗಿಂತ ಹೆಚ್ಚು ತ್ಯಾಜ್ಯ ಉತ್ಪಾದಿಸುವ ಅಥವಾ 40 ಸಾವಿರ ಲೀಟರ್ ನೀರು ಬಳಸುವ ಅಥವಾ 20 ಸಾವಿರ ಚದರ ಅಡಿಗಿಂತ ಹೆಚ್ಚಿನ ವಿಸ್ತೀರ್ಣ ಹೊಂದಿರುವ ಉದ್ಯಮಗಳು, ಕಲ್ಯಾಣ ಮಂಟಪಗಳು, ಹೋಟೆಲ್ ಮತ್ತು ರೆಸ್ಟೋರೆಂಟ್ಗಳನ್ನು 'ಬೃಹತ್ ತ್ಯಾಜ್ಯ ಉತ್ಪಾದಕರು' ಎಂದು ಗುರುತಿಸಲಾಗಿದೆ. ಇಂತಹ ಸಂಸ್ಥೆಗಳು ತಮ್ಮ ಆವರಣದಲ್ಲಿಯೇ (In-Situ) ತ್ಯಾಜ್ಯ ಸಂಸ್ಕರಣಾ ವ್ಯವಸ್ಥೆಯನ್ನು ಮಾಡಿಕೊಳ್ಳುವುದು ಕಡ್ಡಾಯ.

ಒಂದು ವೇಳೆ ಸ್ಥಳೀಯವಾಗಿ ಸಂಸ್ಕರಣೆ ಸಾಧ್ಯವಾಗದಿದ್ದಲ್ಲಿ, ನಗರಸಭೆಗೆ ವಿಂಗಡಿಸಿದ ತ್ಯಾಜ್ಯವನ್ನು ನೀಡಿ, ನಿಗದಿಪಡಿಸಿದ ಸಂಸ್ಕರಣಾ ಶುಲ್ಕವನ್ನು ಪಾವತಿಸಬೇಕು. ನಗರಸಭೆಯ ಈ ನಿಯಮಗಳನ್ನು ಉಲ್ಲಂಘಿಸುವ ಬೃಹತ್ ತ್ಯಾಜ್ಯ ಉತ್ಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಈ ಮೂಲಕ ಎಚ್ಚರಿಸಲಾಗಿದೆ.

ನಿಯಮ ಪಾಲಿಸದ ಸಂಸ್ಥೆಗಳ ನೀರು ಮತ್ತು ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತಹ ಕಾನೂನು ಕ್ರಮಗಳನ್ನು ಜರುಗಿಸಲಾಗುವುದು ಎಂದು ಕೊಪ್ಪಳ ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande