
ಬೆಂಗಳೂರು, 14 ಮೇ (ಹಿ.ಸ.) :
ಆ್ಯಂಕರ್ : ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಯೋಜನೆ ಮತ್ತು ಇಂಟಿಗ್ರೇಟೆಡ್ ಟೌನ್ಶಿಪ್ ಘೋಷಣೆಯ ಹಿಂದೆ “ರಿಯಲ್ ಎಸ್ಟೇಟ್ ಆಸಕ್ತಿಗಳು” ಇರುವುದಾಗಿ ಆರೋಪಿಸಿದ್ದಾರೆ.
ಬಿಡದಿ ಭಾಗದ 8 ಹಳ್ಳಿಗಳನ್ನು ಸೇರಿಸುವ ಟೌನ್ಶಿಪ್ ಯೋಜನೆ ಕುರಿತು ಉಲ್ಲೇಖಿಸಿ, “ಇದು ರೈತರ ಭೂಮಿಯನ್ನು ಬಳಸಿಕೊಂಡು ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಭೂ ಕಬಳಿಕೆ ಯೋಜನೆ” ಎಂದು ಆರೋಪಿಸಿದರು.
ಇದೇ ವೇಳೆ ಈ ಯೋಜನೆಯನ್ನು ತಮ್ಮ ಹಿಂದಿನ ಆಡಳಿತದ ಯೋಜನೆಗಳಿಗೆ ಸಂಬಂಧಿಸಿ “ಇದು ಕುಮಾರಸ್ವಾಮಿ ಕೂಸು” ಎಂದು ಹೇಳಲಾಗುತ್ತಿದೆ ಎಂದೂ ವಾಗ್ದಾಳಿ ನಡೆಸಿದ್ದಾರೆ.
ಕುಮಾರಸ್ವಾಮಿ ಅವರು ಸರ್ಕಾರದ ವಿರುದ್ಧ ರಿಯಲ್ ಎಸ್ಟೇಟ್ ಮಾಫಿಯಾ ಆರೋಪ ಮಾಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಇದರ ಮಧ್ಯಸ್ಥಿಕೆದಾರರು ಎಂದು ಟೀಕೆ ಮಾಡಿದ್ದಾರೆ. “ಸಂಪುಟ ಸಭೆಯಲ್ಲಿ ನಿರ್ಧಾರಗಳು ಸರಿಯಾಗಿ ನಡೆಯುತ್ತಿಲ್ಲ, ಎಲ್ಲವೂ ರಾಜಕೀಯ ಪ್ರಭಾವದಿಂದ ಆಗುತ್ತಿದೆ” ಎಂದು ಆರೋಪಿಸಿದ್ದಾರೆ.
ಹಿಂದಿನ ಸರ್ಕಾರದ ಅವಧಿಯಲ್ಲಿ ಕೈಗೊಂಡ ಟೌನ್ಶಿಪ್ ಯೋಜನೆಗಳನ್ನು ನೆನಪಿಸಿದ ಕುಮಾರಸ್ವಾಮಿ, ರೈತ ವಿರೋಧಿ ಭೂಸ್ವಾಧೀನ ನೀತಿಗಳ ವಿರುದ್ಧ ತಮ್ಮ ವಿರೋಧ ಮುಂದುವರಿಸುವುದಾಗಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.