ಬುದ್ಧ ಪೂರ್ಣಿಮೆ ; ಪ್ರಧಾನಿ ಶುಭಾಶಯ
ನವದೆಹಲಿ, 01 ಮೇ (ಹಿ.ಸ.) : ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಬುದ್ಧ ಪೂರ್ಣಿಮೆ ಅಂಗವಾಗಿ ದೇಶದ ಜನತೆಗೆ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ. ಪ್ರಧಾನ ಮಂತ್ರಿಗಳು ತಮ್ಮ ಸಂದೇಶದಲ್ಲಿ ಶಾಂತಿ, ಕರುಣೆ ಹಾಗೂ ಸದ್ಭಾವನೆಯ ಮಾರ್ಗವನ್ನು ಅನುಸರಿಸುವಂತೆ ಕರೆ ನೀಡಿದ್ದು, ಗೌತಮ ಬುದ್ಧ ಅವರ ಜೀವ
Pm


ನವದೆಹಲಿ, 01 ಮೇ (ಹಿ.ಸ.) :

ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಬುದ್ಧ ಪೂರ್ಣಿಮೆ ಅಂಗವಾಗಿ ದೇಶದ ಜನತೆಗೆ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ.

ಪ್ರಧಾನ ಮಂತ್ರಿಗಳು ತಮ್ಮ ಸಂದೇಶದಲ್ಲಿ ಶಾಂತಿ, ಕರುಣೆ ಹಾಗೂ ಸದ್ಭಾವನೆಯ ಮಾರ್ಗವನ್ನು ಅನುಸರಿಸುವಂತೆ ಕರೆ ನೀಡಿದ್ದು, ಗೌತಮ ಬುದ್ಧ ಅವರ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಸಂಕಲ್ಪವನ್ನು ಪುನರುಚ್ಚರಿಸಬೇಕು ಎಂದು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸನಲ್ಲಿ ಹಂಚಿಕೊಂಡ ಸಂದೇಶದಲ್ಲಿ, “ಎಲ್ಲಾ ನಾಗರಿಕರಿಗೆ ಬುದ್ಧ ಪೂರ್ಣಿಮೆಯ ಶುಭಾಶಯಗಳು. ಶಾಂತಿ, ಕರುಣೆ ಮತ್ತು ಸದ್ಭಾವನೆಯ ಮಾರ್ಗವನ್ನು ಅನುಸರಿಸಲು ನಮಗೆ ಸ್ಫೂರ್ತಿ ನೀಡುವ ಈ ಶುಭ ಸಂದರ್ಭದಲ್ಲಿ, ಭಗವಾನ್ ಬುದ್ಧನ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ನಮ್ಮ ಸಂಕಲ್ಪವನ್ನು ಪುನರುಚ್ಚರಿಸುತ್ತೇವೆ,” ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಅವರು ಬೌದ್ಧ ತತ್ವದ ಮಹತ್ವವನ್ನು ಉಲ್ಲೇಖಿಸಿ, ಅಷ್ಟಾಂಗ ಮಾರ್ಗ—ಸಮ್ಯಕ ದೃಷ್ಟಿ, ಸಮ್ಯಕ ಸಂಕಲ್ಪ, ಸಮ್ಯಕ ವಚನ ಸೇರಿದಂತೆ ಬುದ್ಧನ ಉಪದೇಶಗಳನ್ನು ಅನುಸರಿಸಿದರೆ ಮಾನವ ಜೀವನದಲ್ಲಿನ ದುಃಖಗಳಿಂದ ಮುಕ್ತಿ ಹಾಗೂ ಶಾಶ್ವತ ಶಾಂತಿ ಸಾಧ್ಯವೆಂದು ವಿವರಿಸಿದರು.

ಸಮಾಜದಲ್ಲಿ ಶಾಂತಿ, ಏಕತೆ ಮತ್ತು ಸಹಾನುಭೂತಿಯ ಮೌಲ್ಯಗಳನ್ನು ಬಲಪಡಿಸಲು ಬುದ್ಧನ ಆಲೋಚನೆಗಳು ಇಂದು ಇನ್ನಷ್ಟು ಪ್ರಸ್ತುತವಾಗಿವೆ ಎಂದು ಪ್ರಧಾನಿ ಆಶಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande