
ಬೆಂಗಳೂರು, 01 ಮೇ (ಹಿ.ಸ.) :
ಆ್ಯಂಕರ್ : ಕಾರ್ಮಿಕ ದಿನದ ಅಂಗವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ರಾಜ್ಯದ ಸಮಸ್ತ ಶ್ರಮಿಕ ಹಾಗೂ ಕಾರ್ಮಿಕರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಹಂಚಿಕೊಂಡ ಸಂದೇಶದಲ್ಲಿ, “ನಾಡಿನ ಸಮಸ್ತ ಶ್ರಮಿಕ, ಕಾರ್ಮಿಕ ಬಂಧುಗಳಿಗೆ ಕಾರ್ಮಿಕ ದಿನದ ಹಾರ್ದಿಕ ಶುಭಾಶಯಗಳು. ರಾಷ್ಟ್ರದ ಪ್ರಗತಿಯ ಚಕ್ರ ತಿರುಗಲು ಕಾರ್ಮಿಕರ ನಿರಂತರ ಶ್ರಮವೇ ಕಾರಣ” ಎಂದು ತಿಳಿಸಿದ್ದಾರೆ.
“ಕಟ್ಟಡ ನಿರ್ಮಾಣದಿಂದ ಹಿಡಿದು ಕೈಗಾರಿಕಾ ಕ್ಷೇತ್ರದವರೆಗೆ ಪ್ರತಿಯೊಬ್ಬ ಶ್ರಮಿಕನ ಕೊಡುಗೆಯೂ ಅನನ್ಯವಾಗಿದೆ. ಕಾರ್ಮಿಕರ ಕಲ್ಯಾಣ, ಸಾಮಾಜಿಕ ಭದ್ರತೆ ಹಾಗೂ ಶ್ರಮಿಕ ವರ್ಗದವರ ಸುಭದ್ರ ಭವಿಷ್ಯ ನಮ್ಮ ಬದ್ಧತೆ” ಎಂದು ಹೇಳಿದ್ದಾರೆ.
“ಕಾಯಕ ಯೋಗಿಗಳ ಗೌರವವನ್ನು ಎತ್ತಿಹಿಡಿಯುತ್ತಾ, ಸಮೃದ್ಧ ನಾಡಿನ ನಿರ್ಮಾಣದ ನಿಟ್ಟಿನಲ್ಲಿ ಎಲ್ಲರೂ ಒಂದಾಗಿ ಮುನ್ನಡೆಯೋಣ” ಎಂದು ಅವರು ಕರೆ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa