ಪ್ರಕಾಶ್ ಪರ್ವ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಗುರು ತೇಜ್ ಬಹದ್ದೂರ್ ಸ್ಮರಣೆ
ನವದೆಹಲಿ, 07 ಏಪ್ರಿಲ್ (ಹಿ.ಸ.) : ಆ್ಯಂಕರ್ : ಪ್ರಕಾಶ್ ಪರ್ವ್ ಅಂಗವಾಗಿ ಸಿಖ್ ಧರ್ಮದ ಮಹಾನ್ ಗುರುಗಳಾದ ಗುರು ತೇಜ್ ಬಹದ್ದೂರ್ ಅವರ ಜನ್ಮ ವಾರ್ಷಿಕೋತ್ಸವದಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ಹೃತ್ಪೂರ್ವಕ ನಮನ ಸಲ್ಲಿಸಿದರು. ಸಾಮಾಜಿಕ ಜಾಲತಾಣ ಎಕ್ಸ ಸಂದೇಶದಲ್ಲಿ ಪ್ರಧಾನಿ, ಗುರು ತ
Pm


ನವದೆಹಲಿ, 07 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಪ್ರಕಾಶ್ ಪರ್ವ್ ಅಂಗವಾಗಿ ಸಿಖ್ ಧರ್ಮದ ಮಹಾನ್ ಗುರುಗಳಾದ ಗುರು ತೇಜ್ ಬಹದ್ದೂರ್ ಅವರ ಜನ್ಮ ವಾರ್ಷಿಕೋತ್ಸವದಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ಹೃತ್ಪೂರ್ವಕ ನಮನ ಸಲ್ಲಿಸಿದರು.

ಸಾಮಾಜಿಕ ಜಾಲತಾಣ ಎಕ್ಸ ಸಂದೇಶದಲ್ಲಿ ಪ್ರಧಾನಿ, ಗುರು ತೇಜ್ ಬಹದ್ದೂರ್ ಅವರನ್ನು ಮಹಾನ್ ಆಧ್ಯಾತ್ಮಿಕ ವ್ಯಕ್ತಿತ್ವವೆಂದು ಬಣ್ಣಿಸಿ, ಅವರ ಜೀವನ ಧೈರ್ಯ, ತ್ಯಾಗ ಮತ್ತು ಮಾನವೀಯ ಮೌಲ್ಯಗಳ ಪ್ರತೀಕವಾಗಿದೆ ಎಂದು ಹೇಳಿದರು.

ಪ್ರತಿಕೂಲ ಪರಿಸ್ಥಿತಿಗಳಲ್ಲಿಯೂ ಸತ್ಯ, ಗೌರವ ಮತ್ತು ನಂಬಿಕೆಯನ್ನು ಕಾಪಾಡುವಲ್ಲಿ ಅವರು ತೋರಿದ ದೃಢತೆಯು ಸಮಾಜಕ್ಕೆ ಮಾರ್ಗದರ್ಶನ ನೀಡಿದೆ ಎಂದು ಪ್ರಶಂಸಿಸಿದರು.

ಅವರ ಶಾಶ್ವತ ಸಂದೇಶವು ಇಂದಿಗೂ ಪ್ರಸ್ತುತವಾಗಿದ್ದು, ನ್ಯಾಯಸಮ್ಮತ, ಸಹಾನುಭೂತಿ ಮತ್ತು ಸಾಮರಸ್ಯದ ಸಮಾಜ ನಿರ್ಮಾಣಕ್ಕೆ ಪ್ರೇರಣೆಯಾಗುತ್ತದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande