ಅಸ್ಸಾಂ ಜನತೆಗೆ ಕಾಂಗ್ರೆಸ್ ಖಾತರಿ ನೆನಪಿಸಿದ ಮಲ್ಲಿಕಾರ್ಜುನ ಖರ್ಗೆ
ನವದೆಹಲಿ, 07 ಏಪ್ರಿಲ್ (ಹಿ.ಸ.) : ಆ್ಯಂಕರ್ : ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಸ್ಸಾಂ ರಾಜ್ಯದ ಜನರಿಗೆ ಪಕ್ಷದ ಪ್ರಣಾಳಿಕೆಯಲ್ಲಿ ನೀಡಿರುವ ಖಾತರಿಗಳನ್ನು ಮತ್ತೊಮ್ಮೆ ನೆನಪಿಸಿದ್ದಾರೆ. ಈ ಭರವಸೆಗಳು ರೈತರು, ಯುವಕರು, ಮಹಿಳೆಯರು, ಸಣ್ಣ ಉದ್ಯಮಿಗಳು ಹಾಗೂ ಚಹಾ ತೋಟ ಕಾರ್ಮಿಕರು ಸೇರಿ
Kharge


ನವದೆಹಲಿ, 07 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಸ್ಸಾಂ ರಾಜ್ಯದ ಜನರಿಗೆ ಪಕ್ಷದ ಪ್ರಣಾಳಿಕೆಯಲ್ಲಿ ನೀಡಿರುವ ಖಾತರಿಗಳನ್ನು ಮತ್ತೊಮ್ಮೆ ನೆನಪಿಸಿದ್ದಾರೆ. ಈ ಭರವಸೆಗಳು ರೈತರು, ಯುವಕರು, ಮಹಿಳೆಯರು, ಸಣ್ಣ ಉದ್ಯಮಿಗಳು ಹಾಗೂ ಚಹಾ ತೋಟ ಕಾರ್ಮಿಕರು ಸೇರಿದಂತೆ ಸಮಾಜದ ಎಲ್ಲಾ ವರ್ಗಗಳಿಗೆ ಪ್ರಯೋಜನಕಾರಿಯಾಗಲಿವೆ ಎಂದು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸನಲ್ಲಿ 5 ಪ್ರತಿಶ್ರುತಿ ಅಭಿಯಾನ ಹಂಚಿಕೊಂಡ ಖರ್ಗೆ, ಅಸ್ಸಾಂನಲ್ಲಿ ನ್ಯಾಯ ಮತ್ತು ಆರ್ಥಿಕ ಭದ್ರತೆ ಒದಗಿಸಲು ಕಾಂಗ್ರೆಸ್ ದೃಢನಿಶ್ಚಯ ಹೊಂದಿದೆ ಎಂದು ಹೇಳಿದ್ದಾರೆ.

ಮುಖ್ಯ ಭರವಸೆಗಳು :

100 ದಿನಗಳಲ್ಲಿ ಜುಬಿನ್ ಗಾರ್ಗ್ ಅವರಿಗೆ ನ್ಯಾಯ ಒದಗಿಸುವ ಭರವಸೆ, ಮಹಿಳೆಯರಿಗೆ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ, ಸಣ್ಣ ಉದ್ಯಮಗಳಿಗೆ ₹50,000 ವರೆಗೆ ಆರ್ಥಿಕ ಸಹಾಯ, ಪ್ರತಿ ಕುಟುಂಬಕ್ಕೆ ₹25 ಲಕ್ಷದವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ, 10 ಲಕ್ಷ ಭೂಮಾಲೀಕರಿಗೆ ಶಾಶ್ವತ ಭೂ ಗುತ್ತಿಗೆ, ಹಿರಿಯ ನಾಗರಿಕರಿಗೆ ₹1,250 ಮಾಸಿಕ ಪಿಂಚಣಿ

ಈ ಖಾತರಿಗಳು ಅಸ್ಸಾಂ ರಾಜ್ಯದ ಸಾಮಾಜಿಕ ಹಾಗೂ ಆರ್ಥಿಕ ಮೂಲಸೌಕರ್ಯವನ್ನು ಬಲಪಡಿಸುವುದರ ಜೊತೆಗೆ, ಜನರ ಜೀವನಮಟ್ಟವನ್ನು ಸುಧಾರಿಸಲು ನೆರವಾಗಲಿವೆ ಎಂದು ಖರ್ಗೆ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande