


ಕೂಡ್ಲಿಗಿ, 30 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಸ್ನೇಹಿತನ ಮದುವೆಗೆ ಬೆಂಗಳೂರಿನಿಂದ ಟಿಟಿಯಲ್ಲಿ ಸಂಡೂರಿಗೆ ಹೊರಟಿದ್ದ ವಾಹನಕ್ಕೆ ಲಾರಿಯು ಹಿಂಬದಿಯಿಂದ ಡಿಕ್ಕಿ ಹೊಡೆದ ಕಾರಣ ಹಾಸನ ಮೂಲದ ಯುವಕ ಮತ್ತು ಆಂಧ್ರದ ಯುವಕ ಸ್ಥಳದಲ್ಲೇ ಮೃತಪಟ್ಟು, 11 ಜನರು ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ - 50ರ ಕೂಡ್ಲಿಗಿ ಹೊರ ವಲಯದಲ್ಲಿ ಗುರುವಾರ ನಸುಕಿನಲ್ಲಿ ನಡೆದಿದೆ.
ಮೃತರು ಆಂಧ್ರಪ್ರದೇಶ ಮೂಲದ ಕುಂದರಪಿ ಮಂಡಲದ ಪದಿರಾಂಪಲ್ಲಿ ನಿವಾಸಿ ಟಿ.ಸಿ.ಎಲ್. ಮಧು (27) ಹಾಗೂ ಹಾಸನ ಮೂಲದ ಸಂದೀಪ್ (29) ಎಂದು ಪೊಲೀಸರು ತಿಳಿಸಿದ್ದಾರೆ.
ರಿಲಯನ್ಸ್ ಡಿಜಿಟಲ್ನಲ್ಲಿ ಕೆಲಸ ಮಾಡುತ್ತಿದ್ದ ತಮ್ಮ ಸಹದ್ಯೋಗಿಯ ವಿವಾಹದಲ್ಲಿ ಪಾಲ್ಗೊಳ್ಳಲು ಮೃತರಾದ ಟಿ.ಸಿ.ಎಲ್ ಮಧು, ಸಂದೀಪ್ ಹಾಗೂ ಇತರರು ಬೆಂಗಳೂರಿನಿಂದ ಟಿಟಿಯಲ್ಲಿ ಸಂಡೂರು ತಾಲೂಕಿನ ಹಿರೇಕೆರೆಯಾಗಿನ ಹಳ್ಳಿಗೆ ಹೋಗುತ್ತಿದ್ದರು. ನಸುಕಿನಲ್ಲಿ ರಸ್ತೆ ಮಾರ್ಗದ ಕುರಿತು ಮಾಹಿತಿ ಸಂಗ್ರಹ ಮಾಡುತ್ತಿದ್ದಾಗ ಲಾರಿಯು, ಟಿಟಿಯ ಹಿಂಬದಿಗೆ ಡಿಕ್ಕಿ ಹೊಡೆದ ಕಾರಣ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡವರನ್ನು ಕೂಡ್ಲಿಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಬಳ್ಳಾರಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕೂಡ್ಲಿಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್