
ಕೋಲಾರ, ೩೦ ಏಪ್ರಿಲ್ (ಹಿ.ಸ) :
ಆ್ಯಂಕರ್ : ನಗರದ ಪಿಸಿ ಬಡಾವಣೆಯ ರೇಣುಕಾಯಲ್ಲಮ್ಮ ದೇವಿಯ ಹಸಿ ಕರಗ ಮಹೋತ್ಸವ ಶನಿವಾರ ರಾತ್ರಿ ವೈಭವದಿಂದ ನಡೆದಿದ್ದು, ಮೂವರು ಕರಗವನ್ನು ತಟ್ಟೆಯೊಂದರಲ್ಲಿಟ್ಟು ಕೈಯಲ್ಲೇ ಕುಣಿಸುವುದರ ವಿಶಿಷ್ಟತೆ ಎಲ್ಲರ ಮನಸೂರೆಗೊಂಡಿತಲ್ಲದೇ ಸಹಸ್ರಾರು ಮಂದಿ ವೀಕ್ಷಿಸಿದರು. ರೇಣುಕಾಯಲ್ಲಮ್ಮ ದೇವಾಲಯ ಸೇವಾ ಸಮಿತಿ ಅಧ್ಯಕ್ಷ ಕೆ.ಗಣೇಶ್ ನೇತೃತ್ವದಲ್ಲಿ ನಗರದ ಟೇಕಲ್ ರಸ್ತೆಯ ಗೋಪಾಲಗೌಡರ ನಿವಾಸದ ಆವರಣದಲ್ಲಿ ಗಂಗಾಪೂಜೆ ಮುಗಿಸಿದ ನಂತರ ಹಸಿ ಕರಗವನ್ನು ಕರಗದ ಪೂಜಾರಿ ಬಿ.ವಿ.ಮಂಜುನಾಥ್, ಸ0ತೋಷ್,ಕಿರಣ್ ಜತೆಗೂಡಿ, ಕೈಯಲ್ಲೇ ಹೊತ್ತು ತರುತ್ತಿದ್ದಂತೆ ವೀರಕುಮಾರರ ಗೋವಿಂದ, ಗೋವಿಂದ ಘೋಷಣೆ ಮುಗಿಲುಮುಟ್ಟಿತ್ತು.
ಹಸಿ ಕರಗವನ್ನು ಕರಗದ ಪೂಜಾರಿ ಮಂಜುನಾಥ್ ಸೇರಿದಂತೆ ಮೂವರು ಕೈಗಳಲ್ಲಿ ಕುಣಿಸುತ್ತಾ ಬದಲಿಸುತ್ತಾ ಸಾಗುತ್ತಿದ್ದು, ನೋಡುಗರಲ್ಲಿ ಭಕ್ತಿಯ ಭಾವನೆ ಇಮ್ಮಡಿಗೊಳ್ಳಲು ಕಾರಣವಾಗಿತ್ತು. ಹಸಿ ಕರಗಕ್ಕೆ ಮೊದಲು ಗೋಪಾಲಗೌಡರ ಕುಟುಂಬದಿ0ದ ಪೂಜೆ ಸಲ್ಲಿಸಿದ ನಂತರ ನೇರವಾಗಿ ನಗರದ ಚೌಡೇಶ್ವರಿ ಬಡಾವಣೆಯ ಚೌಡೇಶ್ವರಿ ದೇವಾಲಯಕ್ಕೆ ಕರಗ ಆಗಮಿಸಿ ಅಲ್ಲಿ ಕರಗ ಕೈಯಲ್ಲಿಡಿದ ಮೂವರ ನೃತ್ಯ ಮನಸೂರೆಗೊಂಡಿತು.
ನAತರ ಪಿಸಿಹಳ್ಳಿ ಮೂಲಕ ಜಯನಗರ ೭ನೇ ಕ್ರಾಸ್ನಲ್ಲಿನ ಸಫಲಮ್ಮ ದೇವಾಲಯಕ್ಕೆ ಆಗಮಿಸಿ ಅಲ್ಲಿಯೂ ಪೂಜೆ, ನೃತ್ಯ ಮುಗಿದ ನಂತರ ಹಾರೋಹಳ್ಳಿ ಬಡಾವಣೆಯಲ್ಲಿ ಹಸಿಕರಗ ಸಂಚರಿಸಿ ನಂತರ ನಗರದ ಪಿಸಿ ಬಡಾವಣೆಯ ಕೋದಂಡರಾಮಸ್ವಾಮಿ ದೇವಾಲಯಕ್ಕೆ ಹಾಗೂ ಹಾರೋಹಳ್ಳಿ ಆಂಜನೇಯಸ್ವಾಮಿ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸಿತು.
ನಂತರ ರೇಣುಕಾ ಯಲ್ಲಮ್ಮ ದೇವಾಲಯದ ಮುಂದೆ ನಡೆದ ಕರಗದ ನೃತ್ಯ ವೀಕ್ಷಿಸಲು ಸಾವಿರಾರು ಮಂದಿ ಪಾಲ್ಗೊಂಡಿದ್ದು, ಇದಾದ ನಂತರ ಹಸಿ ಕರಗ ದೇವಾಲಯ ಪ್ರವೇಶ ಮಾಡಿತು. ಈ ಬಾರಿಯ ವಿಶೇಷವೆಂದರೆ ಹಸಿಕರಗವನ್ನು ದೇವಾಲಯದ ಮುಂದೇ ಕರಗದ ಪೂಜಾರಿ ಬಿ.ವಿ.ಮಂಜುನಾಥ್ ಒಬ್ಬರೇ ಒಂದು ಕೈಯಲ್ಲಿ ತಬ್ಬಿ ಹಿಡಿದು ನೃತ್ಯ ನಡೆಸಿದ್ದು ಅಮೋಘವಾಗಿತ್ತು.
ಹೂವಿನ ಕರಗ ಮಹೋತ್ಸವ ಮೇ.೧ ರ ರಾತ್ರಿ ೮ ಗಂಟೆಗೆ ನಡೆಯಲಿದ್ದು,ಮೇ.೨ರ ಮಧ್ಯಾಹ್ನ ಅಗ್ನಿಕುಂಡ ಪ್ರವೇಶ ನಡೆಯಲಿದೆ.
ಹಸಿ ಕರಗ ಮಹೋತ್ಸವದಲ್ಲಿ ಅರ್ಚಕ ಸುರೇಶಾಚಾರ್ಯ ಪೂಜೆ ನಡೆಸಿಕೊಟ್ಟಿದ್ದು, ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಕೆ.ಜಯದೇವ್, ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, ಮಾರ್ಕೊಂಡಪ್ಪ, ಗೋಪಿ,ಮೂರ್ತಿ, ಸಂತೋಷ್, ದೇವಾಲಯ ಸಮಿತಿ ಉಪಾಧ್ಯಕ್ಷ ಚಂದ್ರಪ್ರಕಾಶ್, ದೇವಾಲಯ ಸಮಿತಿ ಖಜಾಂಚಿ ಕೆ.ಎಸ್.ಮಂಜುನಾಥ್, ಕರಗದ ಪೂಜಾರಿ ಬಿ.ವಿ.ಮಂಜುನಾಥ್, ಸಂತೋಷ್, ರ್ಮುಗಂ,ಉಪಕಾರ್ಯದರ್ಶಿ ವಿ.ಸುರೇಶ್,ಟಿ.ಸಂಪತ್ ಕುಮಾರ್,ಎ.ಮಹೇಶ್, ಮೇಸ್ತಿç ಕೃಷ್ಣಪ್ಪ, ಗೋವಿಂದರಾಜು, ಸಿ.ಶ್ರೀನಿವಾಸ್, ವೆಂಕಟೇಶಪ್ಪ, ಮುತ್ತಪ್ಪ, ಗಣೇಶ್ ಹಾಗೂ ರೇಣುಕಾ ಯಲ್ಲಮ್ಮ ಮಿತ್ರಬಳಗದ ಪದಾಧಿಕಾರಿಗಳುಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್