ನಿವೃತ್ತ ಪೊಲೀಸ್ ಸಬ್ಇನ್ಸ್ಪೆಕ್ಟರ್ ಗೆ ಬೀಳ್ಕೊಡುಗೆ
ನಿವೃತ್ತ ಪೊಲೀಸ್ ಸಬ್ಇನ್ಸ್ಪೆಕ್ಟರ್ಗೆ ಬೀಳ್ಕೊಡುಗೆ
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ಗ್ರಾಮಾಂತರ ಇನ್ಸ್ಪೆಕ್ಟರ್ ನಾರಾಯಣಸ್ವಾಮಿ ರವರು ನಿವೃತ್ತಿ ಹೊಂದಿದ್ದು, ಅವರನ್ನು ಎಸ್.ಪಿ. ಕಛೇರಿಯಲ್ಲಿ ಸನ್ಮಾನಿಸಲಾಯಿತು.


ಕೋಲಾರ, ೩೦ ಏಪ್ರಿಲ್ (ಹಿ.ಸ) :

ಆ್ಯಂಕರ್ : ಪೊಲೀಸ್ ಇಲಾಖೆ ಸೇವೆಯಲ್ಲಿ ಕರ್ತವ್ಯನಿಷ್ಠೆಯೊಂದಿಗೆ ಕಾರ್ಯನಿರ್ವಹಿಸಿ ಸರಳ ವ್ಯಕ್ತಿತ್ವದಲ್ಲಿ ಸಾರ್ಥಕತೆ ಕಂಡುಕೊ0ಡು ಸೇವಾ ನಿವೃತ್ತಿ ಹೊಂದಿದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸಿ.ನಾರಾಯಣಸ್ವಾಮಿ ಅವರ ವಿಶ್ರಾಂತಿ ಜೀವನ ಸುಖಮಯವಾಗಿರಲಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಆಡಳಿತಾಧಿಕಾರಿ ಎಸ್.ಅಶೋಕ್ ತಿಳಿಸಿದರು.

ಅವರು ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಸಿ.ನಾರಾಯಸ್ವಾಮಿ ಸೇವಾ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಬಿಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಲಾಖೆಯಲ್ಲಿ ಸೇವೆ ಸಲ್ಲಿಸಿದವರನ್ನು ಇಲಾಖೆಯು ಎಂದೂ ಮರೆಯುವುದಿಲ್ಲ. ತಮಗೆ ವಹಿಸಿದ ಕೆಲಸವನ್ನು ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ನಿರ್ವಹಿಸಿ ಅಧಿಕಾರಿಗಳು ಮತ್ತು ಸಾರ್ವಜನಿಕರ ಪ್ರೀತಿ-ವಿಶ್ವಾಸ ಗಳಿಸಿರುವ ಸಿ. ನಾರಾಯಣಸ್ವಾಮಿ ಅವರು ವೃತ್ತಿಯಲ್ಲಿ ಕರ್ತವ್ಯ ನಿಷ್ಠೆ ತೋರಿ ಇಲಾಖೆಗೂ ಒಳ್ಳೆಯ ಹೆಸರು ತಂದುಕೊಟ್ಟಿದ್ದಾರೆ ಅವರ ವಿಶ್ರಾಂತಿ ಜೀವನ ಸುಖಕರವಾಗಿ ಹಾಗೂ ಆರೋಗ್ಯದಾಯಕವಾಗಿರಲಿ ಎಂದು ಅವರು ಶುಭ ಹಾರೈಸಿದರು.

ಇದೆ ವೇಳೆ ಸೇವಾ ನಿವೃತ್ತಿ ಹೊಂದಿದ ಸಬ್ ಇನ್ಸ್ಪೆಕ್ಟರ್ ಸಿ. ನಾರಾಯಣಸ್ವಾಮಿ ಇಲಾಖೆಯಿಂದ ನೀಡಿದ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿ ನನ್ನ ಸೇವಾ ಅವಧಿಯಲ್ಲಿ ಯಾವುದೇ ಕಪ್ಪು ಚುಕ್ಕೆ ಬಾರದಂತೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಉತ್ತಮ ಕಾರ್ಯನಿರ್ವಹಿಸಿದ್ದೇನೆ. ಆತ್ಮತೃಪ್ತಿ ನನಗಿದ್ದು ನನ್ನ ಸೇವಾ ಅವಧಿಯಲ್ಲಿ ನನ್ನೊಂದಿಗೆ ಕರ್ತವ್ಯ ನಿರ್ವಹಿಸಿದ ಎಲ್ಲಾ ನನ್ನ ವೃತ್ತಿಪರ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರ ಸಹಕಾರವನ್ನು ನಾನು ಎಂದು ಮರೆಯುವುದಿಲ್ಲ. ಪೋಲಿಸ್ ಇಲಾಖೆಗೆ ಸೇರ್ಪಡೆಗೊಂಡ ನಂತರ ನನ್ನ ಮನೆಯ ಹಿತಕ್ಕಿಂತ ನನ್ನ ಕರ್ತವ್ಯವೇ ಮುಖ್ಯ ಎಂದು ಭಾವಿಸಿ ಮನೆಯ ಶುಭ ಕಾರ್ಯಗಳಲ್ಲೂ ಸಹ ನಾನು ಭಾಗಿಯಾಗದೆ ಇದ್ದದ್ದು ನನಗೆ ಬೇಸರ ತಂದಿದೆ. ಅದು ಬಿಟ್ಟರೆ ಇಲಾಖೆಯಿಂದ ವಹಿಸಿದ ಎಲ್ಲಾ ಕೆಲಸಗಳನ್ನ ಪ್ರಾಮಾಣಿಕ ಹಾಗೂ ನಿಷ್ಠೆಯಿಂದ ಮಾಡಿದ್ದೇನೆ. ಇದು ನನಗೆ ತೃಪ್ತಿ ತಂದಿದೆ ಎಂದ ಅವರು ನನ್ನ ಜೀವನೋಪಾಯಕ್ಕೆ ಆದಾರ ನೀಡಿದ ಪೊಲೀಸ್ ಇಲಾಖೆಗೆ ಕೃತಜ್ಞತೆ ಹೇಳಿ ಪೊಲೀಸ್ ಇಲಾಖೆಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲು ಹಿರಿಯ ಅಧಿಕಾರಿಗಳ ಪ್ರೋತ್ಸಾಹ ಹಾಗೂ ಸಹದ್ಯೋಗಿಗಳ ಸಹಕಾರವನ್ನು ಮರೆಯಲಾರೆ ಎಂದು ಪುನರುಚ್ಚರಿಸಿದರು.

ಸೇವಾ ನಿವೃತ್ತಿ ಹೊಂದಿದ ಸಿ. ನಾರಾಯಣಸ್ವಾಮಿ ಅವರು ಕೋಲಾರ ತಾಲ್ಲೂಕಿನ ವೇಮಗಲ್ ಹೋಬಳಿಯ ಪುರಹಳ್ಳಿ ಗ್ರಾಮದವರಾಗಿದ್ದು, ೧೯೮೯ರಲ್ಲಿ ತಮ್ಮ ವೃತ್ತಿಜೀವನವನ್ನು ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಾರಂಭಿಸಿ ಜಿಲ್ಲೆಯ ಬಾಗೇಪಲ್ಲಿ, ಚಿಕ್ಕಬಳ್ಳಾಪುರ ಗ್ರಾಮಾಂತರ, ಶಿಡ್ಲಘಟ್ಟ ನಗರ, ಮಂಚೇನಹಳ್ಳಿ ಹಾಗೂ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ೩೬ ವರ್ಷಕ್ಕೂ ಅಧಿಕ ಕಾಲ ಸುದೀರ್ಘ ಸೇವೆ ಮಾಡಿದ್ದರ ಬಗ್ಗೆ ಇದೇ ವೇಳೆ ಮನನ ಮಾಡಿಕೊಂಡರು.

ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಸಿ.ನಾರಾಯಣಸ್ವಾಮಿ ಅವರನ್ನು ಇಲಾಖೆಯಿಂದ ಆತ್ಮೀಯ ಬೀಳ್ಕೊಡುಗೆ ಮಾಡಲಾಯಿತಲ್ಲದೆ ಪೊಲೀಸ್ ಇಲಾಖೆಯಿಂದ ಶಾಲು ಹೊದಿಸಿ, ಹಣ್ಣು-ಹಂಪಲು, ಸ್ಮರಣಿಕೆ ಮತ್ತು ಸೇವಾ ಪ್ರಮಾಣಪತ್ರ ನೀಡಿ ಸನ್ಮಾನಿಸಿ, ಅವರ ನಿವೃತ್ತಿ ಜೀವನ ಸುಖಕರವಾಗಿರಲೆಂದು ಆಡಳಿತಾಧಿಕಾರಿ ಅಶೋಕ್ ಶುಭ ಹಾರೈಸಿದರು.

ಬೀಳ್ಕೊಡುಗೆ ಸಮಾರಂಭದಲ್ಲಿ ನಾರಾಯಣಸ್ವಾಮಿ ಅವರ ಪತ್ನಿ ಲಕ್ಷ್ಮಿನಾರಾಯಣಸ್ವಾಮಿ, ಪುತ್ರರಾದ ಎನ್.ಮಂಜುನಾಥ್, ಎನ್.ಚಂದನ್ ಸೇರಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಶಾಖಾ ಅಧೀಕ್ಷಕರಾದ ಶ್ರೀನಿವಾಸರೆಡ್ಡಿ, ಮಹದೇವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಆಪ್ತ ಸಹಾಯಕಿ ಶಹತಾಜ್, ಸಿಬ್ಬಂದಿ ರವಿಶಂಕರ್ ನಾಯಕ್, ಹಾಗೂ ರವಿಶಂಕರ್ ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande