
ಕೋಲಾರ, ೩೦ ಏಪ್ರಿಲ್ (ಹಿ.ಸ) :
ಆ್ಯಂಕರ್ : ಭಗವಾನ್ ಬುದ್ದ ಜಯಂತಿಯನ್ನು ರಾಜ್ಯ ಸರ್ಕಾರದ ಆದೇಶದಂತೆ ಎಲ್ಲಾ ಸರ್ಕಾರಿ ಕಛೇರಿ, ಶಾಲಾ, ಕಾಲೇಜುಗಳಲ್ಲಿ ಆಚರಿಸುವ ಸಂಬ0ಧ, ನಾಳೆ ಶುಕ್ರವಾರ ಬುದ್ದ ಜಯಂತಿಯ ಆಚರಣೆ ಕಾರ್ಯಕ್ರಮ ವಿಜೃಂಭಣೆಯಿ0ದ ಆಯೋಜಿಸುವಂತೆ ಅಶೋಕ ದಮ್ಮ ಧೂತ ಬುದ್ದ ಸಂಘದ ಸಂಚಾಲಕ ಡಾ. ಆರ್.ಪ್ರಭುರಾಂ ಅವರು ಜಿಲ್ಲಾ ಪೊಲೀಸ್ ಕಛೇರಿಗೆ ಬುದ್ದನ ಭಾವಚಿತ್ರವನ್ನು ಕೊಡುಗೆಯಾಗಿ ನೀಡಿ, ಮನವಿ ಮಾಡಿದರು.
ಭಗವಾನ್ ಬುದ್ದರ ಜಯಂತಿಯನ್ನು ರಾಜ್ಯ ಸರ್ಕಾರದ ಆದೇಶದಂತೆ ಪ್ರತಿ ವರ್ಷ ಬುದ್ದ ಪೌರ್ಣಿಮೆಯಂದು ಎಲ್ಲಾ ಸರ್ಕಾರಿ ಕಛೇರಿ, ಶಾಲಾ, ಕಾಲೇಜುಗಳಲ್ಲಿ ಆಚರಿಸುವ ಸಂಬ0ಧ ಜಿಲ್ಲಾ ಪೊಲೀಸ್ ಕಛೇರಿಯಲ್ಲೂ ಆಚರಿಸುವಂತೆ ಅಶೋಕ ದಮ್ಮ ಧೂತ ಬುದ್ದ ಸಂಘದ ಸಂಚಾಲಕ ಡಾ. ಆರ್.ಪ್ರಭುರಾಂ ಅವರು ಜಿಲ್ಲಾ ಪೊಲೀಸ್ ಕಛೇರಿಗೆ ಬುದ್ದನ ಭಾವಚಿತ್ರವನ್ನು ಕೊಡುಗೆಯಾಗಿ ನೀಡಿ, ಸಹಾಯಕ ಆಡಳಿತಾಧಿಕಾರಿ ಜಿ.ವಿಶ್ವನಾಥ ಅವರನ್ನು ಮನವಿ ಮಾಡಿದರು.
ವೈಶಾಖ ಬುದ್ದ ಹುಣ್ಣಿಮೆಯ ೨೫೭೦ನೇ ಪವಿತ್ರ ಬುದ್ದ ಜಯಂತೋತ್ಸವದ ಅಂಗವಾಗಿ ಮೇ.೧ ರಂದು ಶುಕ್ರವಾರ ಬುದ್ದ ಹುಣ್ಣಿಮೆಯ ಆಚರಣೆ ಕಾರ್ಯಕ್ರಮ ಸಂದರ್ಭದಲ್ಲಿ ಎಲ್ಲಾ ಕಛೇರಿಗಳಲ್ಲೂ ವಿಶೇಷವಾದ ರೀತಿಯಲ್ಲಿ ಆಚರಿಸುವಂತೆ ಮನವಿ ಮಾಡಿದರು.
ನಾಳೆ ಬೆಳಿಗ್ಗೆ ೧೦ ಗಂಟೆಗೆ ನಡೆಯುವ ಬುದ್ದ ಜಯಂತಿಯ ಆಚರಣೆ ಸಂಬ0ಧ ಸರ್ಕಾರಿ ಕಛೇರಿ, ಶಾಲಾ ಕಾಲೇಜುಗಳಿಗೆ ಬುದ್ದರ ಭಾವಚಿತ್ರಗಳನ್ನು ತಮ್ಮ ಸಂಘದ ವತಿಯಿಂದ ಕೊಡುಗೆಯಾಗಿ ನೀಡಿರುವುದಾಗಿ ಉಪಾಸಕ ಡಾ. ಆರ್.ಪ್ರಭುರಾಂ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ಕಛೇರಿಯ ಶಾಖಾಧೀಕ್ಷಕ ವಿ.ಮಂಜುನಾಥ, ಲಿಪಿಕ ಸಿಬ್ಬಂದಿ ಕೆ.ವಿ.ಹಿತೇಶ್ರಾಜ್, ವಿ.ಚಂದ್ರಶೇಖರ್, ವಿ.ಸೋಮಶೇಖರ್, ಆರ್.ಹೇಮಾ, ಮಮತಾಬಾಯಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್