
ಬಾಗಲಕೋಟೆ, 30 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಬಾಗಲಕೋಟೆ ವಿಧಾನಸಭಾ ಉಪಚುನಾವಣೆಯ ಫಲಿತಾಂಶ ಸನ್ನೀಹಿತವಾಗುತ್ತಿದ್ದಂತೆ ಕ್ಷೇತ್ರದ ಜನರಲ್ಲಿ ಕುತೂಹಲ ಮೂಡಿಸಿದೆ.
ಏತನ್ಮಧ್ಯೆ, ಕಾಂಗ್ರೆಸ್ ಅಭ್ಯರ್ಥಿ ಉಮೇಶ ಎಚ್. ಮೇಟಿ ಅವರಿಗೆ ಸ್ಪಷ್ಟ ಮುನ್ನಡೆ ಸಿಗುವ ಸಾಧ್ಯತೆ ಇದೆ ಎಂದು ‘ರುದ್ರ ರಿಸರ್ಚ್’ ನಡೆಸಿದ ಸಮೀಕ್ಷೆ ತಿಳಿಸಿದೆ. ಸಮೀಕ್ಷೆಯ ಪ್ರಕಾರ, ಅವರು ಸುಮಾರು 15,000 ಮತಗಳ ಅಂತರದಿಂದ ಮೇಟಿ ಗೆಲುವು ಸಾಧಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಕ್ಷೇತ್ರದ ವಿವಿಧ ಭಾಗಗಳಲ್ಲಿ ಮತದಾರರ ಅಭಿಪ್ರಾಯವನ್ನು ಆಧರಿಸಿ ಈ ಸಮೀಕ್ಷೆ ಕೈಗೊಳ್ಳಲಾಗಿದ್ದು, ಕಾಂಗ್ರೆಸ್ ಪಕ್ಷದ ಸಂಘಟನೆ ಬಲ, ಸ್ಥಳೀಯ ನಾಯಕರ ಬೆಂಬಲ ಹಾಗೂ ಅಭಿವೃದ್ಧಿ ವಿಚಾರಗಳು ಅಭ್ಯರ್ಥಿಗೆ ಅನುಕೂಲಕರವಾಗಿವೆ ಎಂದು ವರದಿ ಹೇಳಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕಾಂಗ್ರೆಸ್ ಪರ ಒಲವು ಹೆಚ್ಚಿರುವುದನ್ನು ಸಮೀಕ್ಷೆ ಸೂಚಿಸಿದ್ದು ಮೇಟಿ ಗೆಲುವು ಖಚಿತ ಎಂದ ಸಮೀಕ್ಷೆ ವರದಿಯಿಂದಲೇ ಕ್ಷೇತ್ರದ ಜನ ಸಂಭ್ರಮಕ್ಕೆ ಸಿದ್ಧತೆ ನಡೆಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande