ಶುಭ ಶುಕ್ರವಾರ ಒಳಿತು ಮಾಡಲಿ : ಸಿದ್ದರಾಮಯ್ಯ
ಬೆಂಗಳೂರು, 03 ಏಪ್ರಿಲ್ (ಹಿ.ಸ.) : ಆ್ಯಂಕರ್ : ಮನುಕುಲವು ಮಾಡಿದ ಪಾಪಗಳ ಪ್ರಾಯಶ್ಚಿತ್ತಕ್ಕಾಗಿ ಯೇಸು ಕ್ರಿಸ್ತನು ಶಿಲುಬೆಗೇರಿದ ಪವಿತ್ರ ದಿನವಾದ ಶುಭ ಶುಕ್ರವಾರದಂದು ದಯಾಮಯನಾದ ಯೇಸುವಿನ ಕ್ಷಮೆ, ಪ್ರೀತಿ ಹಾಗೂ ತ್ಯಾಗದ ಸಂದೇಶವನ್ನು ಅರಿಯೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ತನ್ನನ
Cm


ಬೆಂಗಳೂರು, 03 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಮನುಕುಲವು ಮಾಡಿದ ಪಾಪಗಳ ಪ್ರಾಯಶ್ಚಿತ್ತಕ್ಕಾಗಿ ಯೇಸು ಕ್ರಿಸ್ತನು ಶಿಲುಬೆಗೇರಿದ ಪವಿತ್ರ ದಿನವಾದ ಶುಭ ಶುಕ್ರವಾರದಂದು ದಯಾಮಯನಾದ ಯೇಸುವಿನ ಕ್ಷಮೆ, ಪ್ರೀತಿ ಹಾಗೂ ತ್ಯಾಗದ ಸಂದೇಶವನ್ನು ಅರಿಯೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ತನ್ನನ್ನೇ ಕೊಲ್ಲಲು ಹೊರಟ ಜನರನ್ನು ಕ್ಷಮಿಸು ಎಂದು ಪ್ರಾರ್ಥಿಸಿದ ಯೇಸುವಿನ ಅಂತಃಕರಣವು ಸಮಾಜದಲ್ಲಿ ಸಹನೆ - ಸಹಿಷ್ಣುತೆಗಳು ನೆಲೆಗೊಳ್ಳಲು ಪ್ರೇರಣೆಯಾಗಲಿ.

ಸಮಸ್ತ ಕ್ರಿಶ್ಚಿಯನ್ ಬಂಧುಗಳಿಗೆ ಶುಭ ಶುಕ್ರವಾರವು ಒಳಿತನ್ನು ಉಂಟು ಮಾಡಲಿ ಎಂದು ಹಾರೈಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande