
ಗದಗ, 03 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಸುತಾರ ಸಾಂಸ್ಕೃತಿಕ ಕಲಾ ಸಂಘ(ರಿ), ಬೆಟಗೇರಿ ಹಾಗೂ ಶ್ರೀ ಜಗದ್ಗುರು ತೋಂಟದಾರ್ಯ ಜಾತ್ರಾಮಹೋತ್ಸವ-2026 ಇವರ ಸಹಯೋಗದಲ್ಲಿ ಸುತಾರ ಸಾಂಸ್ಕೃತಿಕ ಕಲಾ ಸಂಘದ ದಶಮಾನೋತ್ಸವ ಸಮಾರಂಭ ಹಾಗೂ ಬಯಲಾಟ ಸನ್ನಿವೇಶಗಳು, ಹಾಡುಗಾರಿಕೆ, ಕುಣಿತಗಳ ಪ್ರಾತ್ಯಕ್ಷಿಕೆ ಮತ್ತು ಶ್ರೀ ಮೈಲಾರಲಿಂಗೇಶ್ವರ ಮಹಾತ್ಮೆ ಬಯಲಾಟ ಪ್ರಯೋಗ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ದಿನಾಂಕ 05-04-2026 ರ ರವಿವಾರ ಮುಂಜಾನೆ 10 ಗಂಟೆಗೆ ಶ್ರೀ ಜಗದ್ಗುರು ತೋಂಟದಾರ್ಯ ಮಠದಲ್ಲಿ ಹಮ್ಮಿಕೊಂಳ್ಳಲಾಗಿದೆ.
ಸಮಾರಂಭದ ದಿವ್ಯ ಸಾನಿಧ್ಯವನ್ನು ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಡಾ. ಸಿದ್ದರಾಮ ಮಹಾಸ್ವಾಮಿಗಳವರು ವಹಿಸಿಕೊಳ್ಳುವರು, ಸಾನಿಧ್ಯವನ್ನು ಶಿರೊಳ-ಭೈರನಟ್ಟಿ ಶ್ರೀ ತೋಂಟದಾರ್ಯ ಶಾಖಾಮಠದ ಶ್ರೀ ಶಾಂತಲಿಂಗ ಮಹಾಸ್ವಾಮಿಗಳವರು ವಹಿಸಿಕೊಳ್ಳುವರು. ವಿಧಾನ ಪರಿಷತ್ತಿನ ಸದಸ್ಯ ಪ್ರೊ. ಎಸ್. ವ್ಹಿ. ಸಂಕನೂರ ಕಾರ್ಯಕ್ರಮ ಉದ್ಘಾಟಿಸುವರು. ಕರ್ನಾಟಕ ಬಯಲಾಟ ಅಕಾಡೆಮಿಯ ಅಧ್ಯಕ್ಷರಾದ ಡಾ. ಕೆ. ಆರ್. ದುರ್ಗಾದಾಸ ಗೌರವ ಉಪಸ್ಥಿತರಿರುವರು. ಸುತಾರ ಸಾಂಸ್ಕೃತಿಕ ಕಲಾ ಸಂಘದ ಅಧ್ಯಕ್ಷರಾದ ಅಶೋಕ ಸುತಾರ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಬಸವರಾಜ ಬಳ್ಳಾರಿ, ಉಸಿರು ಫೌಂಡೇಶನ್ನಿನ ಅಧ್ಯಕ್ಷರಾದ ಶರಣು ಪಾಟೀಲ, ಯುವ ಮುಖಂಡರಾದ ಕೃಷ್ಣಗೌಡ ಪಾಟೀಲ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವಿವೇಕಾನಂದಗೌಡ ಪಾಟೀಲ, ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಜಾತ್ರಾಮಹೋತ್ಸವ ಸಮಿತಿಯ ಅಧ್ಯಕ್ಷರಾದ ವಿನಾಯಕ ಮಾನ್ವಿ, ಸಾಂಸ್ಕೃತಿಕ ಚಿಂತಕರಾದ ಡಾ. ಜಿ. ಬಿ. ಪಾಟೀಲ, ಗದಗ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ರಾಜಗೋಪಾಲ ಕಡ್ಲಿಕೊಪ್ಪ ಆಗಮಿಸುವರು.
ಗದುಗಿನ ಸ.ಪ್ರ.ದ.ಮ. ಕಾಲೇಜಿನ ಪ್ರಾಧ್ಯಾಪಕ ಪ್ರೊ. ಸಿದ್ಧಲಿಂಗೇಶ್ವರ ಎ. ಸಜ್ಜನಶಟ್ಟರ ಉಪನ್ಯಾಸ ನೀಡುವರು. ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷರಾದ ಶರಣಬಸಪ್ಪ ಸಂ. ಗುಡಿಮನಿ, ಗೌರಿ ಗಣೇಶ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಬಸವರಾಜ ಕುಂದಗೋಳ, ಬೆಟಗೇರಿಯ ಶ್ರೀ ಕಾಳಿಕಾ ದೇವಿಯ ದೇವಸ್ಥಾನ ಟ್ರಸ್ಟಿನ ಅಧ್ಯಕ್ಷರಾದ ಶ್ರೀಧರ ಎಸ್. ಕೊಣ್ಣೂರ, ಗಣ್ಯ ವ್ಯಾಪಾರಸ್ಥರಾದ ಸಂಗಮೇಶ ಕವಳಿಕಾಯಿ, ನಗರ ಸಭೆಯ ಮಾಜಿ ಸದಸ್ಯ ಮಂಜುನಾಥ ಹೇ. ಮುಳಗುಂದ, ಮಾಸಣಕಟ್ಟಿಯ ಹಿರಿಯ ಕಲಾವಿದರಾದ ರಾಮಚಂದ್ರ ಅರ್ಕಸಾಲಿ, ಬಿಜ್ಜರಗಿಯ ಹಿರಿಯ ಕಲಾವಿದರಾದ ವಸಂತ ಮಾನೆ, ಡಿಜಿ ಎಂ ಸಂಸ್ಕೃತ ಪಾಠಶಾಲೆಯ ಮುಖ್ಯೋಪಾಧ್ಯಾಯ ಬಸಯ್ಯ ಬಣಕಾರ ಅತಿಥಿಗಳಾಗಿ ಆಗಮಿಸುವರು.
ರಾಮು ಬಾಳಪ್ಪ ಕೋಳಿ, ಅಂದಪ್ಪ ಹಂದ್ರಾಳ, ಪ್ರದೀಪ ಮಾನೆ, ಸುರೇಶ ನಾವಿ, ಅಶೋಕ ಅವಧಿ, ಮಲ್ಲಿಕಾರ್ಜುನ ಗಗನಮಾಲಿ, ದಶರಥ ಕಾಂಬಳೆ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವದು.
ದಶಮಾನೋತ್ಸವ ಕಾರ್ಯಕ್ರಮದಲ್ಲಿ ಮಧ್ಯಾಹ್ನ 1 ಗಂಟೆಗೆ ಬಯಲಾಟ ಸನ್ನಿವೇಶಗಳು, ಬಯಲಾಟ ಕುಣಿತಗಳು ಹಾಗೂ ಹಾಡುಗಾರಿಕೆ , ವೀರಗಾಸೆ, ಲಂಬಾಣಿ ಭಜನೆ, ದೇವರ ಭಜನೆ, ಸೋಭಾನ ಪದಗಳ ತಂಡಗಳು ತಮ್ಮ ಕಲಾ ಪ್ರದರ್ಶನ ನೀಡುವರು.
ಸಂಜೆ 6 ಗಂಟೆಗೆ ಶ್ರೀ ಮೈಲಾರಲಿಂಗೇಶ್ವರ ಮಹಾತ್ಮೆ ಬಯಲಾಟ ಪ್ರಯೋಗ ನಡೆಯಲಿದೆ ಎಂದು ನಿರ್ವಾಹಕರಾದ ವಿಶ್ವನಾಥ ಯ. ಕಮ್ಮಾರ ಪ್ರಕಟಣೆ ಮೂಲಕ ಸ್ವಾಗತ ಕೋರಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP