ಸಮಾಜ ಸೇವಕಿ ಶಿಲ್ಪಾ ಪ್ರಕಾಶ ಮಂಗಳೂರ ಅವರಿಗೆ ‘ಅಕ್ಕ’ ರಾಷ್ಟ್ರ ಪ್ರಶಸ್ತಿ
ಕೊಪ್ಪಳ, 03 ಏಪ್ರಿಲ್ (ಹಿ.ಸ.) : ಆ್ಯಂಕರ್ : ವಚನ ಸಾಹಿತ್ಯದ ವಚನಕೋಗಿಲೆ, ಪ್ರಪಥಮ ಮಹಿಳಾ ಕವಿತ್ರಿಯಾದ ಜಗನ್ಮಾತೆ ಅಕ್ಕಮಹಾದೇವಿ’ ತಾಯಿಯವರ ಹೆಸರಲ್ಲಿ ನೀಡಲಾಗುವ ‘ ಅಕ್ಕ’ ರಾಷ್ಟ್ರ ಪ್ರಶಸ್ತಿಯನ್ನು ಸಾಮಾಜಿಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಶಿಲ್ಪಾ ಪ್ರಕಾಶ ಮಂಗಳೂರ ಅವರಿಗೆ ನೀಡಿಡಲ
ಸಮಾಜ ಸೇವಕಿ ಶಿಲ್ಪಾ ಪ್ರಕಾಶ ಮಂಗಳೂರ ಅವರಿಗೆ ‘ಅಕ್ಕ’ ರಾಷ್ಟ್ರ ಪ್ರಶಸ್ತಿ


ಸಮಾಜ ಸೇವಕಿ ಶಿಲ್ಪಾ ಪ್ರಕಾಶ ಮಂಗಳೂರ ಅವರಿಗೆ ‘ಅಕ್ಕ’ ರಾಷ್ಟ್ರ ಪ್ರಶಸ್ತಿ


ಕೊಪ್ಪಳ, 03 ಏಪ್ರಿಲ್ (ಹಿ.ಸ.) :

ಆ್ಯಂಕರ್ : ವಚನ ಸಾಹಿತ್ಯದ ವಚನಕೋಗಿಲೆ, ಪ್ರಪಥಮ ಮಹಿಳಾ ಕವಿತ್ರಿಯಾದ ಜಗನ್ಮಾತೆ ಅಕ್ಕಮಹಾದೇವಿ’ ತಾಯಿಯವರ ಹೆಸರಲ್ಲಿ ನೀಡಲಾಗುವ ‘ ಅಕ್ಕ’ ರಾಷ್ಟ್ರ ಪ್ರಶಸ್ತಿಯನ್ನು ಸಾಮಾಜಿಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಶಿಲ್ಪಾ ಪ್ರಕಾಶ ಮಂಗಳೂರ ಅವರಿಗೆ ನೀಡಿಡಲಾಗಿದೆ.

ಬಸವಶ್ರೀ ಸೇವಾ ಟ್ರಸ್ಟ್ ಕೊಪ್ಪಳದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಬಸವಶ್ರೀ ಬಿ.ಸೋಮನಾಳ ಅವರ ನೇತೃತ್ವದಲ್ಲಿ ಬಸವಶ್ರೀ ಸೇವಾ ಟ್ರಸ್ಟ ಮತ್ತು ಅಕ್ಕನಾಗಮ್ಮ ವೇದಿಕೆಯಿಂದ ಜರುಗಿದ ಮಹಿಳಾಗಣ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ 12ನೇ ಶತಮಾನದ 33ಜನ ಮಹಿಳಾ ವಚನಕಾರ್ತಿಯರ ಸವಿನೆನಪಿನಲ್ಲಿ ನಾಡಿನಾದ್ಯಂತ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆಯನ್ನು ಗುರುತಿಸಿ ನೀಡುವ “ಅಕ್ಕ” ರಾಷ್ಟ್ರ ಪ್ರಶಸ್ತಿಯನ್ನು ಶಿಲ್ಪಾ ಪ್ರಕಾಶ ಮಂಗಳೂರ ಇವರಿಗೆ ಅಕ್ಕಮಹಾದೇವಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಹೆಚ್ಐವಿ ಈ ಸೊಂಕು ತಗುಲಿದವರೊಂದಿಗೆ ಮಾತನಾಡಲು ಅಂಜುತ್ತಿರುವ ಸಮಯದಲ್ಲಿ ಶಿಲ್ಪಾ ಪ್ರಕಾಶ ಮಂಗಳೂರ ಇವರು ಸುಮಾರು 10 ವರ್ಷಗಳ ಕಾಲ ಹೆಚ್ಐವಿ ಸೋಂಕಿತರು ಹಾಗೂ ಏಡ್ಸ ಜಾಗೃತಿ ಕಾರ್ಯಕ್ರಮದಡಿಯಲ್ಲಿ ಕಾರ್ಯ ನಿರ್ವಹಿಸಿದ್ದು, ಸೋಂಕಿತರೊಂದಿಗೆ ಇದ್ದು ಅವರಿಗೆ ಆಪ್ತಸಮಾಲೋಚನೆ ಮಾಡುವುದಲ್ಲದೇ ಸಮಾಜದಲ್ಲಿಯೂ ಕೂಡ ಅದರ ಅರಿವನ್ನು ಮೂಡಿಸುವ ಮೂಲಕ ಅವರನ್ನು ಸಹ ಸಮಾಜದ ಮುಖ್ಯವಾಹಿನಿಗೆ ಬರಲು ಶ್ರಮಿಸಿದ್ದಾರೆ, ಅದಕ್ಕಾಗಿ ಇವರ ಸಾಮಾಜಿಕ ಕಳಕಳಿ ಮತ್ತು ಸೇವೆಯನ್ನು ಗುರುತಿಸಿದೆ, ಸಾಮಾಜಿಕ ಕ್ಷೇತ್ರದಲ್ಲಿ ಇವರ ಸೇವೆ ತುಂಬಾ ಶ್ಲಾಘನೀಯವಾಗಿದೆ ಎಂದು ಬಸವಶ್ರೀ ಸೇವಾ ಟ್ರಸ್ಟ್ ಕೊಪ್ಪಳದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಬಸವಶ್ರೀ ಬಿ ಸೋಮನಾಳ ಅವರು ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande