ಗ್ಯಾಂಗ್ಟಾಕ್ ನಲ್ಲಿ ಮಕ್ಕಳೊಂದಿಗೆ ಫುಟ್ಬಾಲ್ ಆಡಿದ ಪ್ರಧಾನಿ ಮೋದಿ
ಗ್ಯಾಂಗ್ಟಾಕ್, 28 ಏಪ್ರಿಲ್ (ಹಿ.ಸ.) : ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಸಿಕ್ಕಿಂ ಪ್ರವಾಸದ ಎರಡನೇ ಮತ್ತು ಕೊನೆಯ ದಿನವನ್ನು ಉತ್ಸಾಹಭರಿತವಾಗಿ ಆರಂಭಿಸಿದರು. ರಾಜಧಾನಿ ಗ್ಯಾಂಗ್ಟಾಕ್ ನಲ್ಲಿ ಮಂಗಳವಾರ ಬೆಳಿಗ್ಗೆ ಮಕ್ಕಳೊಂದಿಗೆ ಫುಟ್ಬಾಲ್ ಆಡುತ್ತ ಅವರು ಗಮನ ಸೆಳೆದರು. ಈ ಕ್ಷಣಗಳ ಚಿತ್ರಗಳನ
Pm football


ಗ್ಯಾಂಗ್ಟಾಕ್, 28 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಸಿಕ್ಕಿಂ ಪ್ರವಾಸದ ಎರಡನೇ ಮತ್ತು ಕೊನೆಯ ದಿನವನ್ನು ಉತ್ಸಾಹಭರಿತವಾಗಿ ಆರಂಭಿಸಿದರು. ರಾಜಧಾನಿ ಗ್ಯಾಂಗ್ಟಾಕ್ ನಲ್ಲಿ ಮಂಗಳವಾರ ಬೆಳಿಗ್ಗೆ ಮಕ್ಕಳೊಂದಿಗೆ ಫುಟ್ಬಾಲ್ ಆಡುತ್ತ ಅವರು ಗಮನ ಸೆಳೆದರು.

ಈ ಕ್ಷಣಗಳ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪ್ರಧಾನಿ, “ಸಿಕ್ಕಿಂನ ಗ್ಯಾಂಗ್ಟಾಕ್ ನಲ್ಲಿ ಒಂದು ಸುಂದರವಾದ ಬೆಳಿಗ್ಗೆ, ನನ್ನ ಯುವ ಸ್ನೇಹಿತರೊಂದಿಗೆ ಫುಟ್ಬಾಲ್ ಅನ್ನು ಆನಂದಿಸುತ್ತಿದ್ದೇನೆ,” ಎಂದು ಬರೆದುಕೊಂಡಿದ್ದಾರೆ. ಚಿತ್ರಗಳಲ್ಲಿ ಅವರು ಯುವಕರೊಂದಿಗೆ ಹಾಸ್ಯಮಯ ಹಾಗೂ ಸ್ನೇಹಪೂರ್ಣ ವಾತಾವರಣದಲ್ಲಿ ಆಟವಾಡುತ್ತಿರುವುದು ಕಾಣುತ್ತದೆ.

ಪ್ರಧಾನಿ ಮೋದಿ ಅವರು ಎರಡು ದಿನಗಳ ಅಧಿಕೃತ ಭೇಟಿಗಾಗಿ ಸೋಮವಾರ ಸಿಕ್ಕಿಂಗೆ ಆಗಮಿಸಿದ್ದರು. ತಮ್ಮ ಪ್ರವಾಸದ ಅಂತಿಮ ದಿನವಾದ ಇಂದು, ಗ್ಯಾಂಗ್ಟಾಕ್ ಪಾಲ್ಜೋರ್ ಕ್ರೀಡಾಂಗಣ ನಲ್ಲಿ ನಡೆಯಲಿರುವ ರಾಜ್ಯದ ಸ್ಥಾಪನೆಯ 50ನೇ ವಾರ್ಷಿಕೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಭಾಗವಹಿಸಲಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande