ಪೂರ್ವದ ಸ್ವರ್ಗವನ್ನು ನೋಡಲು ಸಿಕ್ಕಿಂಗೆ ಭೇಟಿ ನೀಡಿ : ಪ್ರಧಾನಿ ಮೋದಿ ಕರೆ
ಗ್ಯಾಂಗ್ಟಾಕ್, 28 ಏಪ್ರಿಲ್ (ಹಿ.ಸ.) : ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು “ಪೂರ್ವದ ಸ್ವರ್ಗ” ಎಂದೇ ಖ್ಯಾತವಾಗಿರುವ ಸಿಕ್ಕಿಂ ರಾಜ್ಯಕ್ಕೆ ಭೇಟಿ ನೀಡುವಂತೆ ದೇಶದ ಜನತೆಗೆ ಮನವಿ ಮಾಡಿದ್ದಾರೆ. ಸಿಕ್ಕಿಂ ರಾಜ್ಯದ 50ನೇ ಸಂಸ್ಥಾಪನಾ ವರ್ಷದ ಸಮಾರೋಪ ಸಮಾರಂಭದಲ್ಲಿ ಗ್ಯಾಂಗ್ಟಾಕ್ ನಲ್ಲಿ ಮಾ
Pm


ಗ್ಯಾಂಗ್ಟಾಕ್, 28 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು “ಪೂರ್ವದ ಸ್ವರ್ಗ” ಎಂದೇ ಖ್ಯಾತವಾಗಿರುವ ಸಿಕ್ಕಿಂ ರಾಜ್ಯಕ್ಕೆ ಭೇಟಿ ನೀಡುವಂತೆ ದೇಶದ ಜನತೆಗೆ ಮನವಿ ಮಾಡಿದ್ದಾರೆ.

ಸಿಕ್ಕಿಂ ರಾಜ್ಯದ 50ನೇ ಸಂಸ್ಥಾಪನಾ ವರ್ಷದ ಸಮಾರೋಪ ಸಮಾರಂಭದಲ್ಲಿ ಗ್ಯಾಂಗ್ಟಾಕ್ ನಲ್ಲಿ ಮಾತನಾಡಿದ ಅವರು, ಪ್ರವಾಸೋದ್ಯಮವನ್ನು ಅಭಿವೃದ್ಧಿಯೊಂದಿಗೆ ನೇರವಾಗಿ ಸಂಪರ್ಕಿಸಿ, ಕೇಂದ್ರ ಸರ್ಕಾರವು ಸಂಪರ್ಕ ಹಾಗೂ ಮೂಲಸೌಕರ್ಯಕ್ಕೆ ಆದ್ಯತೆ ನೀಡುತ್ತಿದೆ ಎಂದು ತಿಳಿಸಿದರು. “ಆಕ್ಟ್ ಈಸ್ಟ್, ಆಕ್ಟ್ ಫಾಸ್ಟ್” ನೀತಿಯನ್ನು ಉಲ್ಲೇಖಿಸಿದ ಅವರು, ಈಶಾನ್ಯ ಪ್ರದೇಶವನ್ನು “ಅಷ್ಟ ಲಕ್ಷ್ಮಿ” ಎಂದು ವರ್ಣಿಸಿದರು.

ಸಿಕ್ಕಿಂನನ್ನು “ಈಶಾನ್ಯದ ಉದ್ಯಾನ” ಎಂದೂ ಕರೆದ ಮೋದಿ, ರಾಜ್ಯದ ವೈವಿಧ್ಯಮಯ ಪ್ರಕೃತಿ ಸಂಪತ್ತನ್ನು ಹೊಗಳಿದರು. ಕಾಂಚನಜುಂಗಾ ಪರ್ವತ ಶ್ರೇಣಿಗಳು ರಾಜ್ಯದ ಅಸ್ಮಿತೆಯನ್ನು ಶ್ರೀಮಂತಗೊಳಿಸುತ್ತವೆ ಎಂದು ಹೇಳಿದರು. ದೇಶದ ಶೇಕಡಾ 25ಕ್ಕೂ ಹೆಚ್ಚು ಹೂವಿನ ವೈವಿಧ್ಯತೆ ಇಲ್ಲಿ ದೊರೆಯುತ್ತದೆ. ಜೊತೆಗೆ 500ಕ್ಕೂ ಹೆಚ್ಚು ಪಕ್ಷಿಗಳ ಹಾಗೂ 700ಕ್ಕೂ ಹೆಚ್ಚು ಚಿಟ್ಟೆಗಳ ಪ್ರಭೇದಗಳು ಸಿಕ್ಕಿಂನಲ್ಲಿ ಕಂಡುಬರುತ್ತವೆ ಎಂದು ವಿವರಿಸಿದರು.

ಪ್ರವಾಸಿಗರು ಸಿಕ್ಕಿಂಗೆ ಭೇಟಿ ನೀಡಿ ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವಂತೆ ಕರೆ ನೀಡಿದ ಅವರು, ತಮ್ಮ ಪ್ರವಾಸ ಬಜೆಟ್ನ ಕನಿಷ್ಠ 5% ಸ್ಥಳೀಯ ಸರಕುಗಳಿಗೆ ಖರ್ಚು ಮಾಡಬೇಕು ಎಂದು ಸಲಹೆ ನೀಡಿದರು. ಇದು ಸ್ಥಳೀಯ ಆರ್ಥಿಕತೆಯನ್ನು ಬಲಪಡಿಸುವುದಾಗಿ ಅವರು ಹೇಳಿದರು.

ಸಿಕ್ಕಿಂಗೆ ಎರಡು ದಿನಗಳ ಭೇಟಿಯ ಕೊನೆಯ ದಿನ, ಗ್ಯಾಂಗ್ಟಾಕ್ನ ಪಾಲ್ಜೋರ್ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಧಾನಿ, 4,000 ಕೋಟಿ ರೂ. ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ಶಂಕುಸ್ಥಾಪನೆ ನೆರವೇರಿಸಿದರು. ಮೂಲಸೌಕರ್ಯ, ಸಂಪರ್ಕ, ಆರೋಗ್ಯ, ಶಿಕ್ಷಣ, ವಿದ್ಯುತ್, ನಗರಾಭಿವೃದ್ಧಿ, ಪರಿಸರ ಹಾಗೂ ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಯೋಜನೆಗಳು ಇದರಲ್ಲಿ ಒಳಗೊಂಡಿವೆ.

ಆರೋಗ್ಯ ಕ್ಷೇತ್ರದಲ್ಲಿ ನಾಮ್ಚಿ-ಯಾಂಗಾಂಗ್ ಪ್ರದೇಶದಲ್ಲಿ 100 ಹಾಸಿಗೆಗಳ ಆಯುರ್ವೇದ ಆಸ್ಪತ್ರೆ ಹಾಗೂ ಸೋವಾ ರಿಗ್ಪಾ ಆಸ್ಪತ್ರೆಗಳ ಯೋಜನೆಗಳಿಗೆ ಚಾಲನೆ ನೀಡಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ವಿಶ್ವವಿದ್ಯಾಲಯ, ವೈದ್ಯಕೀಯ ಕಾಲೇಜುಗಳು ಮತ್ತು ಮಾದರಿ ಶಾಲೆಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ.

ಸಂಪರ್ಕದ ಭಾಗವಾಗಿ ತೀಸ್ತಾ ನದಿ ಮೇಲೆ ಎರಡು ಸೇತುವೆಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು. ರಸ್ತೆ ಸುಧಾರಣೆ, ವಿದ್ಯುತ್, ವಸತಿ ಹಾಗೂ ಪರಿಸರ ಸಂರಕ್ಷಣೆ ಯೋಜನೆಗಳಿಗೂ ಚಾಲನೆ ನೀಡಲಾಗಿದೆ.

ಕ್ರೀಡೆ ಮತ್ತು ಕ್ಷೇಮ ಪ್ರವಾಸೋದ್ಯಮವನ್ನು ಉತ್ತೇಜಿಸಲು “ಖೇಲೋ ಇಂಡಿಯಾ” ಮತ್ತು “ಫಿಟ್ ಇಂಡಿಯಾ” ಅಭಿಯಾನಗಳನ್ನು ಜಾರಿಗೊಳಿಸಲಾಗುತ್ತಿದೆ. ಜೊತೆಗೆ ಸಿಕ್ಕಿಂ ಪ್ರೀಮಿಯರ್ ಲೀಗ್ ಹಾಗೂ 1,000 ಹೋಮ್ಸ್ಟೇಗಳ ಅಭಿವೃದ್ಧಿಗೆ ಉತ್ತೇಜನ ನೀಡಲಾಗುತ್ತಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande