
ವಿಜಯಪುರ, 28 ಏಪ್ರಿಲ್ (ಹಿ.ಸ.) :
ಆ್ಯಂಕರ್ : ವಿಜಯಪುರ ಜಿಲ್ಲೆಯ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಜತ್ತ ತಾಲೂಕಿನ ಸಿಂಧೂರ್ ಗ್ರಾಮದಲ್ಲಿ ಸಿಂಧೂರ್ ಲಕ್ಷ್ಮಣ ಅವರ ನಿವಾಸಕ್ಕೆ ಮಾಜಿ ಶಾಸಕ ರಾಜು ಅಲಗೂರು ಭೇಟಿ ನೀಡಿ, ಅವರ ಕುಟುಂಬ ಸದಸ್ಯರೊಂದಿಗೆ ಮಾತುಕತೆ ನಡೆಸಿದರು.
ಈ ವೇಳೆ ಅವರ ಜೀವನದ ನೈಜ ಘಟನೆಗಳನ್ನು ತಿಳಿದುಕೊಳ್ಳುವ ಅಪರೂಪದ ಅವಕಾಶ ದೊರೆಯಿತು. ಈ ಸಂದರ್ಭದಲ್ಲಿ ಕುಟುಂಬದ ಹಿರಿಯರು ಮತ್ತು ಸದಸ್ಯರು ಲಕ್ಷ್ಮಣ ಅವರ ಬಾಲ್ಯದಿಂದ ಆರಂಭಿಸಿ ಅವರ ಜೀವನ ಪಯಣದ ಹಲವು ಸ್ಮರಣೀಯ ಕ್ಷಣಗಳನ್ನು ಹಂಚಿಕೊಂಡರು. ಸಂಕಷ್ಟಗಳ ನಡುವೆಯೂ ಅವರು ತೋರಿದ ಧೈರ್ಯ, ಪರಿಶ್ರಮ ಮತ್ತು ದೃಢನಿಶ್ಚಯವು ಎಲ್ಲರ ಮನಸ್ಸಿನಲ್ಲಿ ಆಳವಾದ ಪ್ರಭಾವ ಮೂಡಿಸಿದೆ ಎಂದು ಉಪಸ್ಥಿತರು ಅಭಿಪ್ರಾಯಪಟ್ಟರು.
ಅವರ ಜೀವನ ಕಥೆ ಕೇವಲ ವೈಯಕ್ತಿಕ ಸಾಧನೆಯಲ್ಲ, ಸಮಾಜಕ್ಕೆ ಒಂದು ಪ್ರೇರಣೆಯಾಗಿದೆ. ಅನೇಕ ಸವಾಲುಗಳನ್ನು ಎದುರಿಸುತ್ತ ಸಾಧನೆ ಮಾಡಿದ ಅವರ ಕಥೆ ಯುವಜನತೆಗೆ ಮಾರ್ಗದರ್ಶನವಾಗಲಿದೆ ಎಂದು ಹೇಳಲಾಯಿತು. ಅವರ ಸರಳತೆ, ಮಾನವೀಯತೆ ಮತ್ತು ಹೋರಾಟದ ಮನೋಭಾವವು ಇಂದಿನ ಪೀಳಿಗೆಗೆ ಆದರ್ಶವಾಗಿದೆ. ಕುಟುಂಬ ಸದಸ್ಯರಿಂದ ಅವರ ಜೀವನದ ನಿಜವಾದ ಘಟನೆಗಳನ್ನು ಕೇಳಿದ ಕ್ಷಣಗಳು ಭಾವನಾತ್ಮಕವಾಗಿದ್ದು, ಅದು ಎಲ್ಲರಿಗೂ ಗೌರವದ ಕ್ಷಣವಾಗಿತ್ತು.
ಇಂತಹ ಮಹನೀಯರ ಜೀವನಗಾಥೆಗಳು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗೆ ದಾರಿಯಾಗುತ್ತವೆ ಎಂದು ಅಭಿಪ್ರಾಯ ವ್ಯಕ್ತವಾಯಿತು.
ಈ ಭೇಟಿಯು ಸಿಂಧೂರ್ ಲಕ್ಷ್ಮಣ ಅವರ ಸಾಧನೆಗಳನ್ನು ಸ್ಮರಿಸುವುದರ ಜೊತೆಗೆ, ಅವರ ಜೀವನ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಹಿಂದೂಸ್ತಾನ್ ಸಮಾಚಾರ್ / jyothi deshpande