ಬೆಂಗಳೂರಿನಲ್ಲಿ ಅಗ್ನಿ ಅವಘಡ ; ಪಿಜಿ ಯುವತಿಯರು ಕೂದಲೆಳೆ ಅಂತರದಲ್ಲಿ ಪಾರು
ಬೆಂಗಳೂರು, 28 ಏಪ್ರಿಲ್ (ಹಿ.ಸ.) : ಆ್ಯಂಕರ್ : ಬೆಂಗಳೂರಿನ ನಂದಿನಿ ಲೇಔಟ್ ಪ್ರದೇಶದಲ್ಲಿ ತಡರಾತ್ರಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಪ್ಲಾಸ್ಟಿಕ್ ಗೋಡೌನ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಪಕ್ಕದಲ್ಲಿದ್ದ ಲೇಡಿಸ್ ಪಿಜಿಗೆ ಬೆಂಕಿ ಹಬ್ಬಿದ ಪರಿಣಾಮ ಅಲ್ಲಿ ವಾಸಿಸುತ್ತಿದ್ದ ಯುವತಿಯರು ಪ್ರಾಣಾ
ಬೆಂಗಳೂರಿನಲ್ಲಿ ಅಗ್ನಿ ಅವಘಡ ; ಪಿಜಿ ಯುವತಿಯರು ಕೂದಲೆಳೆ ಅಂತರದಲ್ಲಿ ಪಾರು


ಬೆಂಗಳೂರು, 28 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಬೆಂಗಳೂರಿನ ನಂದಿನಿ ಲೇಔಟ್ ಪ್ರದೇಶದಲ್ಲಿ ತಡರಾತ್ರಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಪ್ಲಾಸ್ಟಿಕ್ ಗೋಡೌನ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಪಕ್ಕದಲ್ಲಿದ್ದ ಲೇಡಿಸ್ ಪಿಜಿಗೆ ಬೆಂಕಿ ಹಬ್ಬಿದ ಪರಿಣಾಮ ಅಲ್ಲಿ ವಾಸಿಸುತ್ತಿದ್ದ ಯುವತಿಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪ್ಲಾಸ್ಟಿಕ್ ವಸ್ತುಗಳು ಸಂಗ್ರಹವಾಗಿದ್ದ ಗೋಡೌನ್ನಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ವ್ಯಾಪಿಸಿ, ಸುತ್ತಮುತ್ತಲಿನ ಮನೆಗಳಿಗೆ ತೀವ್ರ ಹಾನಿ ಉಂಟುಮಾಡಿತು. ಬೆಂಕಿಯ ಕೆನ್ನಾಲಿಗೆಗೆ ಮನೆಗಳ ಮುಂಭಾಗದ ಮರಗಳು, ಕಬ್ಬಿಣದ ಗೇಟ್ಗಳು ಸಹ ಹೊತ್ತಿ ಉರಿದವು.

ಗೋಡೌನ್ ಪಕ್ಕದಲ್ಲಿದ್ದ ಲೇಡಿಸ್ ಪಿಜಿಯಲ್ಲಿ ಸುಮಾರು 50ಕ್ಕೂ ಹೆಚ್ಚು ಯುವತಿಯರು ವಾಸಿಸುತ್ತಿದ್ದು, ದಟ್ಟ ಹೊಗೆ ಮತ್ತು ಬೆಂಕಿ ಒಳನುಗ್ಗುತ್ತಿದ್ದಂತೆ ಆತಂಕಕ್ಕೀಡಾದ ಯುವತಿಯರು ಪ್ರಾಣ ರಕ್ಷಣೆಗಾಗಿ ಹರಸಾಹಸ ಪಟ್ಟರು. ಹೊರಗೆ ಬರಲು ದಾರಿ ಸಿಗದ ಪರಿಸ್ಥಿತಿಯಲ್ಲಿ ಕೆಲವರು ಮೊದಲ ಮಹಡಿಯಿಂದ ಕೆಳಕ್ಕೆ ಜಿಗಿದರೆ, ಇನ್ನೂ ಕೆಲವರು ಕಾಂಪೌಂಡ್ ಗೋಡೆ ಹಾರಿ ಪಾರಾದರು. ಈ ವೇಳೆ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಘಟನೆಯ ಮಾಹಿತಿ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ತಕ್ಷಣ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಆದಾಗ್ಯೂ, ಬೆಂಕಿಯ ತೀವ್ರತೆಗೆ ಗೋಡೌನ್ ಸಂಪೂರ್ಣ ಭಸ್ಮವಾಗಿದೆ.

ಈ ಕುರಿತು ನಂದಿನಿ ಲೇಔಟ್ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದ್ದು, ಬೆಂಕಿ ತಗುಲಲು ನಿಖರ ಕಾರಣವೇನು ಎಂಬ ಕುರಿತು ತನಿಖೆ ನಡೆಯುತ್ತಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande