
ಕೊಪ್ಪಳ, 28 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಜನಗಣತಿ 2027ರ ಕಾರ್ಯಚಟುವಟಿಕೆಗಳ ಮನೆಪಟ್ಟಿ ಹಾಗೂ ಮನೆಗಳ ಗಣತಿ ಕಾರ್ಯವು ಏಪ್ರಿಲ್ 16 ರಿಂದ ಪ್ರಾರಂಭವಾಗಿದ್ದು, ನಗರಸಭೆ ವ್ಯಾಪ್ತಿಯ ಎಲ್ಲಾ ಮನೆಗಳ ಗಣತಿ ಕಾರ್ಯವನ್ನು ಪೂರ್ಣಗೊಳಿಸಲು 124 ಬ್ಲಾಕ್ಗಳನ್ನು ಸೃಜಿಸಿ 124 ಜನ ಗಣತಿದಾರರನ್ನು ನೇಮಿಸಲಾಗಿರುತ್ತದೆ. ಹಾಗೂ ಜನಗಣತಿ ಕಾರ್ಯವನ್ನು ಮೇಲ್ವಿಚಾರಣೆ ಮಾಡಲು 21 ಜನ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿರುತ್ತದೆ.
ಜನಗಣತಿ 2027ರ ಕಾರ್ಯಚಟುವಟಿಕೆಗಳ ಮನೆಪಟ್ಟಿ ಹಾಗೂ ಮನೆಗಳ ಗಣತಿ ಕಾರ್ಯವು ನಗರಸಭೆ ವ್ಯಾಪ್ತಿಯ 31 ವಾರ್ಡಗಳಲ್ಲಿ ಪ್ರಗತಿಯಲ್ಲಿದ್ದು, ವಸತಿ ಗುಣಮಟ್ಟ, ಸೌಕರ್ಯಗಳು(ನೀರು, ವಿದ್ಯುತ್ ಮತ್ತು ಶೌಚಾಲಯಗಳು ಮುಂತಾದವು) ಮತ್ತು ಸ್ವತ್ತುಗಳ ಕುರಿತು 33 ಪ್ರಶ್ನೆಗಳ ಮೂಲಕ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಗಣತಿದಾರರು ತಮ್ಮ ಮನೆಗೆ ಬಂದಾಗ ಗಣತಿದಾರರಿಗೆ ಮಾಹಿತಿಯನ್ನು ಒದಗಿಸುವ ಮೂಲಕ ಸಂಪೂರ್ಣ ಸಹಕಾರವನ್ನು ನೀಡಬೇಕೆಂದು ಸಾರ್ವಜನಿಕರಲ್ಲಿ ಈ ಮೂಲಕ ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜನಗಣತಿ ಸಹಾಯವಾಣಿ ಮೊ.ನಂ:9481437467 ಸಂಪರ್ಕಿಸಬಹುದು ಎಂದು ನಗರಸಭೆ ಪೌರಾಯುಕ್ತರಾದ ಮಂಜುನಾಥ ಗುಂಡೂರ ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್