
ವಿಜಯಪುರ, 27 ಏಪ್ರಿಲ್ (ಹಿ.ಸ.) :
ಆ್ಯಂಕರ್ : ವಿಜಯಪುರ ನಗರದಿಂದ ಆಲಮಟ್ಟಿ ಉದ್ಯಾನವನಕ್ಕೆ ನೂತನ ಬಸ್ ಸೇವೆ ಆರಂಭವಾಗಿದ್ದು, ಸಾರ್ವಜನಿಕರಿಗೆ ಅನುಕೂಲವಾಗಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.
ಆಲಮಟ್ಟಿಯ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ ಆವರಣದಲ್ಲಿನ ಉದ್ಯಾನವನ ಹಾಗೂ ಇತ್ತೀಚೆಗೆ ಲೋಕಾರ್ಪಣೆಗೊಂಡ ಜಲ ಉದ್ಯಾನವನ (ವಾಟರ್ ಪಾರ್ಕ್)ಕ್ಕೆ ತೆರಳಲು ಈ ಸೇವೆ ಪ್ರಾರಂಭಿಸಲಾಗಿದೆ.
ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ವಿಜಯಪುರ ನಗರದ ಕಿತ್ತೂರ ರಾಣಿ ಚೆನ್ನಮ್ಮ ಬಸ್ ನಿಲ್ದಾಣದಿಂದ ಆಲಮಟ್ಟಿಗೆ 6 ಸುತ್ತು ಸಂಚಾರ ನಡೆಯಲಿದೆ. ರಾತ್ರಿ 8.20ಕ್ಕೆ ಕೊನೆಯ ಬಸ್ ಆಲಮಟ್ಟಿಯಿಂದ ವಿಜಯಪುರಕ್ಕೆ ಪ್ರಯಾಣಿಸುತ್ತದೆ.
ಸಾರ್ವಜನಿಕರು ಈ ಹೊಸ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande