


ಬಳ್ಳಾರಿ, 27 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಕೇಂದ್ರ ಸರ್ಕಾರದ ಜನಸಂಖ್ಯಾ ಗಣತಿಯಲ್ಲಿ ವೀರಶೈವ ಲಿಂಗಾಯತ ಜಂಗಮರು ತಮ್ಮ ಜಾತಿಯನ್ನು `ಇತರರು' ಕಾಲಂನಲ್ಲಿ ನಮೂದಿಸಲು ಭಾರತೀಯ ವೀರಶೈವ ಲಿಂಗಾಯತ ಜಂಗಮ ಪರಿಷತ್ತು ಮನವಿ ಮಾಡಿದೆ.
ಭಾರತೀಯ ವೀರಶೈವ ಲಿಂಗಾಯತ ಜಂಗಮ ಪರಿಷತ್ತಿನ ಅಧ್ಯಕ್ಷರಾದ ಕೆ.ಎಂ. ಮಹೇಶ್ವರಸ್ವಾಮಿ ಅವರ ನೇತೃತ್ವದಲ್ಲಿ ಬಳ್ಳಾರಿ ನಗರ ವೀರಶೈವ ಜಂಗಮರ ಸಭೆಯನ್ನು ನಡೆಸಿ, ಭಾರತ ಸರ್ಕಾರದ ಜನಗಣತಿ - 2027ರ ಗಣತಿಯಲ್ಲಿ ವೀರಶೈವ ಲಿಂಗಾಯತ ಜಂಗಮರು ಗಣತಿದಾರರ ಪ್ರಶ್ನೆ 13ರ ಕ್ರಮ ಸಂಖ್ಯೆ 3 ರಲ್ಲಿ `ಇತರರು' ಎಂದು ಬರೆಸಲು ನಿರ್ಧಾರ ಕೈಗೊಂಡಿದೆ.
ಪರಿಷತ್ತಿನ ಪದಾಧಿಕಾರಿಗಳಾದ ವಿ.ಎಸ್. ಪ್ರಭಯ್ಯ, ವಕೀಲರಾದ ಗುರುಬಸವರಾಜ್ ಪಿ.ಎಂ. ಇಂದುಶೇಖರ್, ಬಂಡ್ರಾಳು ಮೃತ್ಯುಂಜಯ, ಕೆ.ಎಂ. ಕೊಟ್ರೇಶ್, ಹೆಚ್.ಕೆ. ಗೌರಿಶಂಕರ, ಎಸ್.ಎಂ. ನಾಗರಾಜ್, ಕೆ.ಎಂ. ಚಂದ್ರಮೌಳಿ, ಕೆ.ಎಂ. ನಾಗರಾಜ್, ಮುಖಂಡರಾದ ಷಡಕ್ಷರಯ್ಯ ಸ್ವಾಮಿ, ಜಿ.ಎಂ. ಚಂದ್ರಶೇಖರಯ್ಯ, ತಿಪ್ಪೇಸ್ವಾಮಿ, ಮಂಜುನಾಥ, ನಾಗರಾಜ್ ಸ್ವಾಮಿ ಸಿರಿಗೇರಿ, ನಾಗರಾಜ್ ಸ್ವಾಮಿ ಮರಿಸ್ವಾಮಿ ಮಠ ಇನ್ನಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.
ವಿವರಗಳಿಗಾಗಿ ಕೆ.ಎಂ. ಮಹೇಶ್ವರಸ್ವಾಮಿ : ಮೊಬೈಲ್ - 94488 39759 ಗೆ ಸಂಪರ್ಕ ಮಾಡಿರಿ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್