ಯೂರೋಪ್ ದೇಶಗಳಿಗೆ ವೈರಸ್ ಮುಕ್ತ ಮಾವು ರಫ್ತು ಮಾಡಲು ಸಾಧ್ಯ : ಡಾ.ದಿವ್ಯ
ಯೂರೋಪ್ ದೇಶಗಳಿಗೆ ವೈರಸ್ ಮುಕ್ತ ಮಾವು ರಫ್ತು ಮಾಡಲು ಸಾಧ್ಯ ; ಡಾ.ದಿವ್ಯ ನೀರಿನಲ್ಲಿ
ಕೋಲಾರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ಮಾವು ರಫ್ತು ತರಬೇತಿ ಕಾರ್ಯಕ್ರಮವನ್ನು ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಕುಮಾರಸ್ವಾಮಿ ಉದ್ಘಾಟಿಸಿದರು.


ಕೋಲಾರ, ೨೭ ಏಪ್ರಿಲ್ (ಹಿ.ಸ) :

ಆ್ಯಂಕರ್ : ಯೂರೋಪಿಯನ್ ದೇಶಗಳಿಗೆ ಮಾವು ರಫ್ತು ಮಾಡಲು ಮಾನದಂಡಗಳನ್ನು ಅನುಸರಿಸಬೇಕಾಗುತ್ತದೆ.ಆ ದೇಶಗಳು ವೈರಸ್ ಮುಕ್ತ ಹಣ್ಣು ಮತ್ತು ತರಕಾರಿಗಳನ್ನು ನಿರೀಕ್ಷೆ ಮಾಡುತ್ತವೆ. ಜೈವಿಕ ಸುರಕ್ಷತೆಗೆ ಹೆಚ್ಚು ಒತ್ತು ನೀಡುತ್ತಾರೆ.ಗುಣಮಟ್ಟದ ಮಾವು ಬೆಳೆದರು ಸಹ ರಫ್ತು ಮಾಡಲು ಸಾಧ್ಯವಿಲ್ಲ. ರೈತರಿಗೆ ಮಾಹಿತಿ ಕೊರತೆ ಇದೆ.ರಫ್ತು ಮಾಡಲು ಮುನ್ನಚ್ಚರಿಕೆಯಾಗಿ ಹಕವಾರು ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಬೆಂಗಳೂರಿನ ಸಸ್ಯಸಂರಕ್ಷಣಾಧಿಕಾರಿ ಡಾ.ದಿವ್ಯ ಮಾಹಿತಿ ನೀಡಿದರು.

ಕೋಲಾರ ನಗರದ ಹೊರವಲಯದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಾವು ರಫ್ತು ಬಗ್ಗೆ ಹಮ್ಮಿಕೊಳ್ಳಲಾಗಿದ್ದ ತರಬೇತಿ ಕಾರ್ಯಕ್ರಮಗಳಲ್ಲಿ ಮಾತನಾಡಿದರು.

ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಕೈಗಾರಿಕಾ ಪ್ರದೇಶದಲ್ಲಿರುವ ಇನ್ನೋವಾ ಫುಡ್ ಪ್ರೋಸಸಿಂಗ್ ಫೆಸಿಲಿಸೇಟಿಂಗ್ ಕೇಂದ್ರದಿ0ದ ವಿದೇಶಕ್ಕೆ ಮಾವು ರಫ್ತು ಮಾಡಲಾಗುತ್ತದೆ. ಆದರೆ ನೇರವಾಗಿ ರಫ್ತು ಮಾಡಲು ಸಾಧ್ಯವಿಲ್ಲ.ಹಲವಾರು ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ತೋಟ ಆಯ್ಕೆಯಿಂದ ಹಿಡಿದು ಪ್ಯಾಕಿಂಗ್ ತನಕ ಹಲವಾರು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಈ ಬಗ್ಗೆ ರೈತರಿಗೆ ಮೂಲಭೂತ ಅರಿವು ಅಗತ್ಯ. ಹಣ್ಣುಗಳನ್ನು ಆಯ್ಕೆ ಮಾಡಿತನಂತರ ಫೆಸಿಲಿಟೇಟಿಂಗ್ ಕೇಂದ್ರದಲ್ಲಿ ಬಿಸಿನಿರಿನಲ್ಲಿ ಸ್ವಚ್ಚಗೊಳಿಸಬೇಕಾಗುತ್ತದೆ. ಒಂದೊ0ದು ದೇಶಕ್ಕೆ ಹೊಂದಿಕೊಳ್ಳುವ0ತೆ ಬಿಸಿ ನೀರಿನಲ್ಲಿ ಶೂಚಿಗೊಳಿಸಬೇಕು ಎಂದು ತಿಳಿಸಿದರು.

ಯರೋಪಿಯನ್ ದೇಶಗಳಿಗೆ ರಫ್ತು ಮಾಡಲು ಒಂದು ಬಾಕ್ಸ್ನಲ್ಲಿ ಮೂರುವರೆ ಕೆ.ಜಿ ಗರಿಷ್ಠ ಪ್ರಮಾಣದಲ್ಲಿ ಇರಬೇಕು.ನಾನೂರುರಿಂದ ಆರನೂರು ಗ್ರಾಮ್ ಒಂದು ಹಣ್ಣು ಇರಬೇಕು. ಈಗಾಲೇ ಯೂರೂಪಿಯನ್ ರಾಷ್ಟçಗಳ ಅಧಿಕಾರಿಗಳು ಮಾಲೂರಿನ ಇನ್ನೋವ ಫುಡ್ ಪ್ರೋಸಸಿಂಗ ಕೇಂದ್ರಕ್ಕೆ ಆಗಮಿಸಿದ್ದಾರೆ. ರಫ್ತು ಮಾಡಲಾಗುವ ಮಾವಿನ ಹಣ್ಣನ್ನು ಅವರು ಪರೀಕ್ಷೆ ಮಾಡುತ್ತಾರೆ. ರಫ್ತು ಮಾಡಲು ಪ್ರಮುಖವಾಗಿ ಇಂಪೋರ್ಟ್ ಪರ್ಮಿಟ್ ಇರಬೇಕು.ಪರ್ಮಿಟ್ನಲ್ಲಿ ಮಾನದಂಡಗಳನ್ನು ವಿಧಿಸಲಾಗಿರುತದತ್ತದೆ. ಆ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ವಿವರಿಸಿದರು. ಯೂರೋಪಿಯನ್ ದೇಶಗಳಿಗೆ ಹೋಲಿಕೆ ಮಾಡಿದರೆ ಮಾಧ್ಯಪ್ರಾಚ್ಯ ದೇಶಗಳು ಹೆಚ್ಚು ನಿಬಂಧನೆಗಳನ್ನು ವಿಧಿಸುವುದಿಲ್ಲ. ಮಲ್ಲೇಶಿಯಾ ಬರ್ಮಾ ಜಪಾನ್ ದೇಶಗಳಿಗೆ ಹೆಚ್ಚು ರಫ್ತು ಮಾಡಲು ಹೆಚ್ಚಿನ ಅವಕಾಶಗಳಿವೆ ಎಂದು ತಿಳಿಸಿದರು.

ಮಾವು ರಪ್ತು ತರಬೇತಿ ಕಾರ್ಯಕ್ರಮಕ್ಕೆ ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಕುಮಾರಸ್ವಾಮಿ ಚಾಲನೆ ನೀಡಿ ಮಾತನಾಡಿ ಕೋಲಾರ ಜಿಲ್ಲೆಯಲ್ಲಿ ಯಥೇಚ್ಚವಾಗಿ ಮಾವು ಬೆಳೆಯಲಾಗುತ್ತಿದೆ. ಆದರೆ ರಫ್ತು ಮಾಡುತ್ತಿಲ್ಲ. ಶ್ರೀನಿವಾಸಪುರ ಮತ್ತು ಮುಳಬಾಗಿಲು ತಾಲ್ಲೂಕುಗಳಲ್ಲಿ ಒಂದು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಪಾರಂಪರಿಕ ಕೃಷಿ ವಿಕಾಸ ಯೋಜನೆಯಲ್ಲಿ ಸಾವಯವ ಪದ್ದತಿಯಲ್ಲಿ ಮಾವು ಬೆಳೆಯಲಾಗುತ್ತಿದೆ. ಮುಂದೆ ರೈತರು ರಫ್ತು ಗುಣಮಟ್ಟದ ಮಾವು ಬೆಳೆಯಬಲ್ಲರು. ಇಂತಹ ತರಬೇತಿಗಳಲ್ಲಿ ರೈತರ ಭಾಗಿಯಾಗುವುದರಿಂದ ಅಭಿವೃದ್ದಿ ಆಗಬಲ್ಲರು ಎಂದು ತಿಳಿಸಿದರು.

ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಅನಿಲ್ ಕುಮಾರ್ ಮಾತನಾಡಿ ಕೋಲಾರ ಜಿಲ್ಲೆಯಲ್ಲಿ ಗುಣಮಟ್ಟದ ಮಾವು ಬೆಳೆಯಾಗುತ್ತಿದೆ. ಆದರೆ, ರಫ್ತು ಮಾಡಲಾಗುತ್ತಿಲ್ಲ. ಭಾರತದಲ್ಲಿ ಬೆಳೆಯುವ ಮಾವು ಜಾಗತಿಕವಾಗಿ ಶೇಕಡ ೫೦ರಷ್ಟು ರಫ್ತು ಮಾರುಕಟ್ಟೆ ಹೊಂದಿದೆ. ಭಾರತದ ವಿವಿಧ ರಾಜ್ಯಗಳಲ್ಲಿ ಮಾವು ಬೆಳೆಯಲಾಗುತ್ತಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರದ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಪದಾರ್ಥಗಳ ಪ್ರಾಧಿಕಾರದ ಅಧಿಕಾರಿ ಕಾರಂತ್ ಮಾತನಾಡಿ ಕೃಷಿ ತೋಟಗಾರಿಕಾ ಹಾಗೂ ಸಂಸ್ಕರಿಸಿದ ಆಹಾರ ಪದಾರ್ಥಗಳ ಉತ್ತಾದನೆಯನ್ನು ಉತ್ತೇಜಿಸಲು ತರಬೇತಿ ಮತ್ತು ಸಾಮರ್ಥ್ಯಾಭಿವೃದ್ದಿ ಕಾರ್ಯಕ್ರಮಗಳನ್ನು ಪ್ರಾಧಿಕಾರದಿಂದ ಹಮ್ಮಿಕೊಳ್ಳಲಾಗುತ್ತಿದೆ. ಸ್ಥಳೀಯ ಮತ್ತು ಅಂತರರಾಷ್ಟಿçÃಯ ಮಾರಾಟ ಮೇಳಗಳಲ್ಲಿ ಭಾಗವಹಿಸಲು ಉತ್ತೇಜಿಸಲಾಗುತ್ತಿದೆ. ಮಾವು ರಫ್ತಿನ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ತರಬೇತಿಯಲ್ಲಿ ವಿಜ್ಞಾನಿಗಳಾದ ಡಾ.ಚಿಕ್ಕಣ್ಣ, ಡಾ. ಆಶಾ, ಮಾವು ಬೆಳೆಗಾರರ ಕಂಪನಿಯ ಅಧ್ಯಕ್ಷ ಶ್ರೀನಿವಾಸಗೌಡ, ಸಿಗುಲ್ ಸಂಸ್ಥೆಯ ಇಮ್ರಾನ್ ಮುಂತಾದವರು ಭಾಗವಹಿಸಿದ್ದರು.

ಚಿತ್ರ : ಕೋಲಾರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ಮಾವು ರಫ್ತು ತರಬೇತಿ ಕಾರ್ಯಕ್ರಮವನ್ನು ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಕುಮಾರಸ್ವಾಮಿ ಉದ್ಘಾಟಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande