
ವಿಜಯಪುರ, 27 ಏಪ್ರಿಲ್ (ಹಿ.ಸ.) :
ಆ್ಯಂಕರ್ : ವಿಜಯಪುರ ಜಿಲ್ಲೆಯ
ಸಿಂದಗಿ ಮತ ಕ್ಷೇತ್ರದ ವ್ಯಾಪ್ತಿಯ ಸುಂಗಠಾಣ ಗ್ರಾಮದಲ್ಲಿ ಜಾತ್ರೆ ಸಂದರ್ಭದಲ್ಲಿ ಪ್ರತಿ ವರ್ಷ ಭವಿಷ್ಯ ನುಡಿಯುತ್ತಿದ್ದ ಸಿದ್ದಯ್ಯ ಮುತ್ತ್ಯಾ ದೇವರ ಪರಮ ಭಕ್ತ ಸುಭಾಶ್ಚಂದ್ರ ಮುತ್ತ್ಯ ಅವರ ಅಕಾಲಿಕ ನಿಧನದಿಂದ ಗ್ರಾಮದಲ್ಲಿ ದುಃಖದ ವಾತಾವರಣ ಉಂಟಾಗಿದೆ.
ಗ್ರಾಮದ ದೈವವಾದ ಶ್ರೀ ಸಿದ್ದಯ್ಯ ಮುತ್ತ್ಯ ದೇವರು ಜಾತ್ರೆಯ ಸಂದರ್ಭದಲ್ಲಿ ಪ್ರತಿ ವರ್ಷ ಭವಿಷ್ಯವಾಣಿ (ಹೇಳಿಕೆ) ನುಡಿಯುತ್ತಿದ್ದ ಸುಭಾಶ್ಚಂದ್ರ ಮುತ್ತ್ಯ ಸ್ವಾಮಿಗಳ ಮಾತುಗಳನ್ನು ಕೇಳಲು ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಜನರು ಕಾತರದಿಂದ ಕಾಯುತ್ತಿದ್ದರು. ಅವರ ನುಡಿಯಲ್ಲಿ ದೈವಿಕ ಶಕ್ತಿ ಮತ್ತು ಸತ್ಯವಿದೆ ಎಂಬುದು ಭಕ್ತರ ಅಚಲ ನಂಬಿಕೆಯಾಗಿತ್ತು.
ಅವರು ಕೇವಲ ಭವಿಷ್ಯವಾಣಿ ನುಡಿಯುವವರಷ್ಟೇ ಅಲ್ಲದೆ, ಗ್ರಾಮದ ಧಾರ್ಮಿಕ ಆಚರಣೆಗಳು ಹಾಗೂ ಸಂಪ್ರದಾಯಗಳನ್ನು ಉಳಿಸಿ ಬೆಳೆಸಿದ ಮಾರ್ಗದರ್ಶಕರಾಗಿದ್ದರು. ಅವರ ಸರಳತೆ, ಸೌಮ್ಯ ಸ್ವಭಾವ ಹಾಗೂ ಭಕ್ತಿ ಮಾರ್ಗ ಎಲ್ಲರಿಗೂ ಮಾದರಿಯಾಗಿತ್ತು.
ಸುಂಗಠಾಣ ಗ್ರಾಮದ ಪಾಲಿಗೆ ಇಂದು ಅತ್ಯಂತ ದುಃಖದ ದಿನವಾಗಿದ್ದು, ಅವರ ಅಗಲಿಕೆಯಿಂದ ಭಕ್ತ ಸಮೂಹ ಕಂಗಾಲಾಗಿದೆ. ಬದುಕಿನಲ್ಲಿ ತೋರಿದ ಭಕ್ತಿ, ಸೇವಾಭಾವ ಹಾಗೂ ಜನಸೇವೆ ಸದಾ ಸ್ಮರಣೀಯವಾಗಿರಲಿದೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande