
ಗ್ಯಾಂಗ್ಟಾಕ್, 27 ಏಪ್ರಿಲ್ (ಹಿ.ಸ.) :
ಆ್ಯಂಕರ್ : ನರೇಂದ್ರ ಮೋದಿ ಅವರು ಎರಡು ದಿನಗಳ ಭೇಟಿ ನಿಮಿತ್ತ ಸಿಕ್ಕಿಂ ರಾಜಧಾನಿ ಗ್ಯಾಂಗ್ಟಾಕ್ ಗೆ ಶನಿವಾರ ಮಧ್ಯಾಹ್ನ ಆಗಮಿಸಿದರು. ರಾಜಧಾನಿ ಸಮೀಪದ ಲಿಬಿಂಗ್ ಆರ್ಮಿ ಹೆಲಿಪ್ಯಾಡ್ ನಲ್ಲಿ ಪ್ರಧಾನಿ ಅವರನ್ನು ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್, ರಾಜ್ಯ ಬಿಜೆಪಿ ಅಧ್ಯಕ್ಷ ಡಿ. ಆರ್. ಥಾಪಾ ಸೇರಿದಂತೆ ಗಣ್ಯರು ಆತ್ಮೀಯವಾಗಿ ಬರಮಾಡಿಕೊಂಡರು.
ಪ್ರಧಾನಿ ಮೋದಿ ಆಗಮನದ ಹಿನ್ನೆಲೆಯಲ್ಲಿ ಗ್ಯಾಂಗ್ಟಾಕ್ ನಗರವು ಹಬ್ಬದ ಸಂಭ್ರಮಕ್ಕೆ ತೇಲಿದಂತಿತ್ತು. ಹೆಲಿಪ್ಯಾಡ್ನಿಂದ ಲೋಕ ಭವನದವರೆಗೆ ಪ್ರಧಾನಿ ರೋಡ್ ಶೋ ನಡೆಸಿದ್ದು, ಮಾರ್ಗದ ಎರಡೂ ಬದಿಗಳಲ್ಲಿ ಸಾವಿರಾರು ಜನರು ಸೇರಿ ಸಂಭ್ರಮಿಸಿದರು. ಸಾಂಪ್ರದಾಯಿಕ ವೇಷಭೂಷಣ ಧರಿಸಿದ ಸ್ಥಳೀಯರು ಸಾಂಸ್ಕೃತಿಕ ವಾದ್ಯಗಳೊಂದಿಗೆ ಸ್ವಾಗತ ಕೋರಿದರು. ಜನರು ಘೋಷಣೆಗಳ ಮೂಲಕ ಉತ್ಸಾಹ ವ್ಯಕ್ತಪಡಿಸಿದ್ದು, ಪ್ರಧಾನಿ ಕೂಡ ಕೈ ಬೀಸಿ ಜನರ ಅಭಿನಂದನೆಗಳಿಗೆ ಪ್ರತಿಕ್ರಿಯಿಸಿದರು.
ಬೆಳಗ್ಗಿನಿಂದಲೇ ಜನರು ರಸ್ತೆಗಳ ಬದಿಯಲ್ಲಿ ಜಮಾಯಿಸಿ ಪ್ರಧಾನಿಯ ಆಗಮನಕ್ಕಾಗಿ ಕಾತುರದಿಂದ ಕಾಯುತ್ತಿದ್ದರು. ಭದ್ರತಾ ವ್ಯವಸ್ಥೆಯನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಲಾಗಿತ್ತು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa