19 ವರ್ಷಗಳ ಬಳಿಕ ಸಿಕ್ಕಿಂ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಶಾಶ್ವತ ಆವರಣ
ಗ್ಯಾಂಗ್ಟಾಕ್, 27 ಏಪ್ರಿಲ್ (ಹಿ.ಸ.) : ಆ್ಯಂಕರ್ : ಸುಮಾರು 19 ವರ್ಷಗಳ ನಿರೀಕ್ಷೆಗೆ ತೆರೆ ಬೀಳುತ್ತಿದ್ದು, ನರೇಂದ್ರ ಮೋದಿ ಅವರು ಸಿಕ್ಕಿಂ ಪ್ರವಾಸದ ವೇಳೆ ಸಿಕ್ಕಿಂ ಕೇಂದ್ರೀಯ ವಿಶ್ವವಿದ್ಯಾಲಯದ ಶಾಶ್ವತ ಆವರಣವನ್ನು ಉದ್ಘಾಟಿಸಲಿದ್ದಾರೆ. ಈ ಆವರಣ ಗ್ಯಾಂಗ್ಟಾಕ್ನಿಂದ ಸುಮಾರು 55 ಕಿಮೀ ದೂರದ ನಾಮ್ಚಿ
ಸಿಕ್ಕಿಂ ವಿವಿ


ಗ್ಯಾಂಗ್ಟಾಕ್, 27 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಸುಮಾರು 19 ವರ್ಷಗಳ ನಿರೀಕ್ಷೆಗೆ ತೆರೆ ಬೀಳುತ್ತಿದ್ದು, ನರೇಂದ್ರ ಮೋದಿ ಅವರು ಸಿಕ್ಕಿಂ ಪ್ರವಾಸದ ವೇಳೆ ಸಿಕ್ಕಿಂ ಕೇಂದ್ರೀಯ ವಿಶ್ವವಿದ್ಯಾಲಯದ ಶಾಶ್ವತ ಆವರಣವನ್ನು ಉದ್ಘಾಟಿಸಲಿದ್ದಾರೆ. ಈ ಆವರಣ ಗ್ಯಾಂಗ್ಟಾಕ್ನಿಂದ ಸುಮಾರು 55 ಕಿಮೀ ದೂರದ ನಾಮ್ಚಿ ಜಿಲ್ಲೆಯ ಯಾಂಗ್ಯಾಂಗ್ ಪ್ರದೇಶದಲ್ಲಿದೆ.

ಪ್ರಧಾನಿ ಮೋದಿ ಅವರು ಇಂದು ಮಧ್ಯಾಹ್ನ ಸಿಕ್ಕಿಂಗೆ ಆಗಮಿಸಿ ರೋಡ್ ಶೋನಲ್ಲಿ ಭಾಗವಹಿಸಲಿದ್ದು, ಭೇಟಿಯ ಎರಡನೇ ದಿನ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಏಪ್ರಿಲ್ 28ರಂದು ಅವರು ವರ್ಚುವಲ್ ಮೂಲಕ ವಿಶ್ವವಿದ್ಯಾಲಯದ ಶಾಶ್ವತ ಆವರಣ ಉದ್ಘಾಟಿಸಲಿದ್ದಾರೆ.

ಈ ಹಿನ್ನೆಲೆಯಲ್ಲಿ ಸಿಕ್ಕಿಂ ಲೋಕ ಸಭಾ ಸಂಸದೆ ಇಂದ್ರಾ ಹ್ಯಾಂಗ್ ಸುಬ್ಬಾ ಸಂತಸ ವ್ಯಕ್ತಪಡಿಸಿದ್ದು, “19 ವರ್ಷಗಳ ನಂತರ ವಿಶ್ವವಿದ್ಯಾಲಯಕ್ಕೆ ಹೊಸ ಅಧ್ಯಾಯ ಆರಂಭವಾಗುತ್ತಿದೆ” ಎಂದಿದ್ದಾರೆ. 2007ರಲ್ಲಿ ಸ್ಥಾಪನೆಯಾದ ಈ ವಿಶ್ವವಿದ್ಯಾಲಯವು ಭೂಸ್ವಾಧೀನ, ಪರಿಹಾರ ಸೇರಿದಂತೆ ಹಲವು ಕಾರಣಗಳಿಂದ ಶಾಶ್ವತ ಆವರಣ ನಿರ್ಮಾಣದಲ್ಲಿ ವಿಳಂಬ ಕಂಡಿತ್ತು.

ಸಂಸದರು ಹಿಂದಿನ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ಆವರಣ ನಿರ್ಮಾಣವನ್ನು ನಿರ್ಲಕ್ಷ್ಯಗೊಳಿಸಲಾಗಿದೆ ಎಂದು ಆರೋಪಿಸಿದರು. ದೀರ್ಘಕಾಲ ವಿದ್ಯಾರ್ಥಿಗಳು ಬಾಡಿಗೆ ಕಟ್ಟಡಗಳಲ್ಲಿ ಅಧ್ಯಯನ ಮಾಡಬೇಕಾದ ಪರಿಸ್ಥಿತಿ ಉಂಟಾಗಿತ್ತು ಎಂದು ಅವರು ಹೇಳಿದರು.

ಈಗ ಶಾಶ್ವತ ಆವರಣ ಉದ್ಘಾಟನೆಯೊಂದಿಗೆ ವಿಶ್ವವಿದ್ಯಾಲಯಕ್ಕೆ ಹೊಸ ದಿಕ್ಕು ದೊರೆಯಲಿದೆ ಎಂದು ಅಭಿಪ್ರಾಯಪಟ್ಟ ಅವರು, ಇದು ಕೇವಲ ಕಟ್ಟಡವಲ್ಲ, ಶಿಕ್ಷಣ, ಅಭಿವೃದ್ಧಿ ಮತ್ತು ಭರವಸೆಯ ಸಂಕೇತವಾಗಲಿದೆ ಎಂದರು.

ಸಂಸ್ಕೃತಿ ಮತ್ತು ವಿಜ್ಞಾನ, ಸಂಪ್ರದಾಯ ಮತ್ತು ಆಧುನಿಕತೆಯ ಸಂಯೋಜನೆಯ ಕೇಂದ್ರವಾಗಿ ಈ ಸಂಸ್ಥೆ ಬೆಳೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande