ಬಲ್ಬೋಟ ತೊಲಗಿಸಿ ಕೊಪ್ಪಳ ಉಳಿಸಿ ಹೋರಾಟ 179ನೇ ದಿನಕ್ಕೆ
ನಿವೃತ್ತ
ಪಂಜಾಬ್ ಸಣ್ಣ ಕಾರ್ಖಾನೆಗಳಿಂದ ಉದ್ಯೋಗ ಸೃಷ್ಟಿಸಿದೆ: ನಿ. ಸೈನಿಕ ಅಮರಸಿಂಗ್


ಕೊಪ್ಪಳ, 27 ಏಪ್ರಿಲ್ (ಹಿ.ಸ.) :

ಆ್ಯಂಕರ್ : ನಗರಸಭೆ ಮುಂದಿನ ಬಲ್ಬೋಟ ತೊಲಗಿಸಿ ಕೊಪ್ಪಳ ಉಳಿಸಿ ಹೋರಾಟ 179ನೇ ದಿನ ಪೂರ್ಣಗೊಳಿಸಿತು. ಧರಣಿಗೆ ಬೆಂಬಲಿಸಿ ಪಂಜಾಬ್ ರಾಜ್ಯದಿಂದ ಬಂದ ನಿವೃತ್ತ ಸೈನಿಕ ಅಮರಸಿಂಗ್ ಇವರು ಮಾತನಾಡಿ, ಇಲ್ಲಿ ಸ್ಥಾಪಿಸಿದ ಕಾರ್ಖಾನೆಗಳು ನಗರಕ್ಕೆ, ಗ್ರಾಮಕ್ಕೆ ಹೊಂದಿಕೊಂಡು ಬೃಹತ್ ಕೈ ಗಾರಿಕೆಗಳಿಂದ ಮಕ್ಕಳ, ಮಹಿಳೆಯರ, ವೃದ್ದರ ಆರೋಗ್ಯಕ್ಕೆ ತೊಂದರೆ ಕೊಡುತ್ತಿವೆ ಎಂದರು.

ಇಲ್ಲಿನ ಶುಷ್ಕ ವಾತಾವರಣ ಕೆಡಿಸಿ ತಮ್ಮ ಲಾಭ ಒಂದೇ ಅನ್ನುವುದಾದರೆ ಜನರೇಕೆ ಇದನ್ನು ಸಹಿಸಿಕೊಳ್ಳಬೇಕು. ನಮ್ಮ ಸಿಖ್ ಧರ್ಮದಲ್ಲಿ ಪ್ರಕೃತಿಗೆ ಮೊದಲ ಆದ್ಯತೆ ಇದೆ. ಪ್ರಕೃತಿ ಹಾಳು ಮಾಡಲು ಯಾರಿಗೂ ಅಧಿಕಾರವಿಲ್ಲ. ಪಂಜಾಬ್ ರಾಜ್ಯ ಸಣ್ಣ ಮತ್ತು ಗುಡಿ ಕೈಗಾರಿಕೆಗಳ ಮೇಲೆ ಆಧಾರವಾಗಿದೆ. ನಮ್ಮಲ್ಲಿ ಕೃಷಿ, ಕೈಗಾರಿಕೆಗೆ ಸಮತೋಲನವಾಗಿದೆ. ನಮಲ್ಲಿ ಬಿಸಿಲು ಹೆಚ್ಚು. ಈ ನಾಡು ತಂಪಾದ ಹವಾಗುಣವೆಂದು ಓದಿದ್ದೇವೆ. ಆದರೆ ಈಗ ಇಂತಹ ಮಾಲಿನ್ಯದ ಕಾರಣಕ್ಕೆ ಧಗೆ ಇಲ್ಲಿಯೂ ಹೆಚ್ಚಾಗಿದೆ. ನೀರು, ಗಾಳಿ ಮಾಲಿನ್ಯ ಮಾಡದೆ ಕಾಪಾಡಿಕೊಂಡರಷ್ಟೇ ಮುಂದಿನ ಮಕ್ಕಳ ಭವಿಷ್ಯ ಉಳಿಯುತ್ತದೆ ಎಂದರು.

ಇನ್ನೊಬ್ಬ ಸಾಮಾಜಿಕ ಹೋರಾಟಗಾರ ಕಳಕಪ್ಪ ಟಿ. ಬೆಟಗೇರಿ ಇವರು ಮಾತನಾಡಿ ಶಾಸಕರು ಕೊಪ್ಪಳ ಭಾಗ್ಯನಗರದ ಒಂದುವರೆ ಲಕ್ಷ ಜನರ ಆರೋಗ್ಯ ಇಲ್ಲಿ ಅಪಾಯಕ್ಕೆ ಇದರ ಅರಿವು ಇದ್ದಾಗ ಪರಿಣಾಮವನ್ನು ಜನರು ತಮ್ಮ ಪ್ರತಿಕ್ರಿಯೆ ರೂಪದಲ್ಲಿ ಹೋರಾಡಿ ತೋರಿಸುತ್ತಾರೆ ಎಂದರು.

ಧರಣಿಯಲ್ಲಿ ಮಾನವ ಬಂಧುತ್ವ ವೇದಿಕೆ ಮುಖಂಡರಾದ ಟಿ. ರತ್ನಾಕರ, ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಪ್ರಕಾಶಕ ಡಿ.ಎಂ. ಬಡಿಗೇರ, ಮಾಲಾ ಬಡಿಗೇರ, ಭೀಮಸೇನ ಕಲಕೇರಿ, ಮೂಕಪ್ಪ ಮೇಸ್ತ್ರಿ ಬಸಾಪುರ, ಶರಣು ಶೆಟ್ಟರ್, ನಾಗಪ್ಪ ಅಬ್ಬಿಗೇರಿ, ಮಹಾದೇವಪ್ಪ ಮಾವಿನಮಡು, ಈಶ್ವರಪ್ಪ ಕೂಕನಪಳ್ಳಿ, ರಾಜಶೇಖರ ಏಳುಭಾವಿ, ವೈ. ಸತ್ಯನಾರಾಯಣ, ಯಮನೂರಪ್ಪ ಹಾಲಳ್ಳಿ, ನಾಗರಾಜ ಕುಷ್ಟಗಿ, ಬಿ.ಜಿ.ಕರಿಗಾರ, ಬಸವರಾಜಪ್ಪ ಶೆಟ್ಟರ್, ಶಿವಪ್ಪ ಹಲಗೇರಿ, ಈಶ್ವರಪ್ಪ, ದುರುಗೇಶ ಹಳ್ಳಿ ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande