ಪ್ರಧಾನಿ ಮೋದಿ ಸಿಕ್ಕಿಂ, ವಾರಾಣಸಿ ಪ್ರವಾಸ
ನವದೆಹಲಿ, 27 ಏಪ್ರಿಲ್ (ಹಿ.ಸ.) : ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಈಶಾನ್ಯ ರಾಜ್ಯವಾದ ಸಿಕ್ಕಿಂಗೆ ಎರಡು ದಿನಗಳ ಮಹತ್ವದ ಭೇಟಿ ಆರಂಭಿಸಿದ್ದು, ಬಳಿಕ ಉತ್ತರ ಪ್ರದೇಶದ ರಾಜ್ಯದ ವಾರಾಣಸಿಗೆ ತೆರಳಿ ಭಾರಿ ಅಭಿವೃದ್ಧಿ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಸಿಕ್ಕಿಂನಲ್ಲಿ ₹4
Pm


ನವದೆಹಲಿ, 27 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಈಶಾನ್ಯ ರಾಜ್ಯವಾದ ಸಿಕ್ಕಿಂಗೆ ಎರಡು ದಿನಗಳ ಮಹತ್ವದ ಭೇಟಿ ಆರಂಭಿಸಿದ್ದು, ಬಳಿಕ ಉತ್ತರ ಪ್ರದೇಶದ ರಾಜ್ಯದ ವಾರಾಣಸಿಗೆ ತೆರಳಿ ಭಾರಿ ಅಭಿವೃದ್ಧಿ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.

ಸಿಕ್ಕಿಂನಲ್ಲಿ ₹4,000 ಕೋಟಿ ಯೋಜನೆಗಳಿಗೆ ಚಾಲನೆ

ಪ್ರಧಾನಿ ಮೋದಿ ಅವರು ಗ್ಯಾಂಗ್ಟಾಕ್ನಲ್ಲಿ ಮಧ್ಯಾಹ್ನ ರಾಜ್ಯದ 50ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ವೇಳೆ ₹4,000 ಕೋಟಿಗೂ ಅಧಿಕ ಮೌಲ್ಯದ ಮೂಲಸೌಕರ್ಯ, ಆರೋಗ್ಯ, ಶಿಕ್ಷಣ, ಸಂಪರ್ಕ, ವಿದ್ಯುತ್, ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳ ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಲಿದ್ದಾರೆ.

ಆರೋಗ್ಯ ಕ್ಷೇತ್ರದಲ್ಲಿ ಆಯುರ್ವೇದ ಆಸ್ಪತ್ರೆ, ಸೋವಾ ರಿಗ್ಪಾ ವೈದ್ಯಕೀಯ ಕೇಂದ್ರಗಳ ಸ್ಥಾಪನೆ, ಶಿಕ್ಷಣ ಕ್ಷೇತ್ರದಲ್ಲಿ ಹೊಸ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ ಅಭಿವೃದ್ಧಿ ಪ್ರಮುಖವಾಗಿವೆ.

ಸಿಕ್ಕಿಂನಲ್ಲಿ ರಸ್ತೆ ಮತ್ತು ಸೇತುವೆಗಳ ನಿರ್ಮಾಣ, ವಿದ್ಯುತ್ ಜಾಲದ ಸುಧಾರಣೆ ಹಾಗೂ ನಗರಾಭಿವೃದ್ಧಿ ಯೋಜನೆಗಳು ರಾಜ್ಯದ ಸಮಗ್ರ ಬೆಳವಣಿಗೆಗೆ ವೇಗ ನೀಡಲಿವೆ.

ಪರಿಸರ ಸಂರಕ್ಷಣೆ, ಪ್ರವಾಸೋದ್ಯಮ ಉತ್ತೇಜನ ಹಾಗೂ ಕೃಷಿ ಸಂಸ್ಕರಣಾ ಘಟಕಗಳ ಮೂಲಕ ಸ್ಥಳೀಯ ಆರ್ಥಿಕತೆಗೆ ಹೊಸ ಚೈತನ್ಯ ಸಿಗಲಿದೆ.

ವಾರಾಣಸಿಯಲ್ಲಿ ₹6,350 ಕೋಟಿ ಯೋಜನೆಗಳ ಘೋಷಣೆ

ನಾಳೆ ಸಂಜೆ ಪ್ರಧಾನಿ ಮೋದಿ ತಮ್ಮ ಸಂಸದೀಯ ಕ್ಷೇತ್ರವಾದ ವಾರಣಾಸಿಗೆ ಭೇಟಿ ನೀಡಿ ₹6,350 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.

ಇವುಗಳಲ್ಲಿ ಪ್ರಮುಖವಾಗಿ:

ರಸ್ತೆ ಹಾಗೂ ರೈಲು ಮೇಲ್ಸೇತುವೆಗಳ ಅಭಿವೃದ್ಧಿ, ಒಳಚರಂಡಿ,ಹಾಗೂ ನೀರು ಸರಬರಾಜು ಯೋಜನೆಗಳು,ಆಸ್ಪತ್ರೆಗಳು ಮತ್ತು ಸಾರ್ವಜನಿಕ ಸೌಲಭ್ಯಗಳ ನಿರ್ಮಾಣ, ಪ್ರವಾಸೋದ್ಯಮ ಅಭಿವೃದ್ಧಿ (ಘಾಟ್ಗಳು, ದೇವಸ್ಥಾನ ಪ್ರದೇಶಗಳು)

ಪ್ರಧಾನಿ ಮೋದಿ ಗಂಗಾ ಎಕ್ಸಪ್ರೆಸ್ ಹರ್ದೋಯಿಯಲ್ಲಿ ಉದ್ಘಾಟಿಸಲಿದ್ದು, ಇದು 594 ಕಿಮೀ ಉದ್ದದ ಹೈ-ಸ್ಪೀಡ್ ಕಾರಿಡಾರ್ ಆಗಿದೆ. ಈ ಯೋಜನೆಯಿಂದ ಪ್ರಯಾಣ ಸಮಯದಲ್ಲಿ ಭಾರಿ ಕಡಿತವಾಗಲಿದ್ದು, ರಾಜ್ಯದ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ಸಿಗಲಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande