ಮಧ್ಯ ಪ್ರದೇಶದಲ್ಲಿ ಭೀಕರ ಅಪಘಾತ ; ಐವರ ಸಾವು, ಹಲವರಿಗೆ ಗಾಯ
ನರ್ಮದಾಪುರಂ, 27 ಏಪ್ರಿಲ್ (ಹಿ.ಸ.) : ಆ್ಯಂಕರ್ : ಮಧ್ಯ ಪ್ರದೇಶದ ನರ್ಮದಾಪುರಂ-ಪಿಪರಿಯಾ ರಾಜ್ಯ ಹೆದ್ದಾರಿಯಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ಮೃತಪಟ್ಟಿದ್ದು, 6-7 ಮಂದಿ ಗಾಯಗೊಂಡಿದ್ದಾರೆ. ಅಂಚಲ್ಖೇಡಾ ಗ್ರಾಮದ ಬಳಿ ರಾತ್ರಿ ಸುಮಾರು 1 ಗಂಟೆ ಸುಮಾರಿಗೆ ತವೇರಾ ಕಾ
Accident


ನರ್ಮದಾಪುರಂ, 27 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಮಧ್ಯ ಪ್ರದೇಶದ ನರ್ಮದಾಪುರಂ-ಪಿಪರಿಯಾ ರಾಜ್ಯ ಹೆದ್ದಾರಿಯಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ಮೃತಪಟ್ಟಿದ್ದು, 6-7 ಮಂದಿ ಗಾಯಗೊಂಡಿದ್ದಾರೆ.

ಅಂಚಲ್ಖೇಡಾ ಗ್ರಾಮದ ಬಳಿ ರಾತ್ರಿ ಸುಮಾರು 1 ಗಂಟೆ ಸುಮಾರಿಗೆ ತವೇರಾ ಕಾರು ಮತ್ತು ಧಾನ್ಯ ತುಂಬಿದ್ದ ಟ್ರ್ಯಾಕ್ಟರ್-ಟ್ರಾಲಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ತೀವ್ರತೆಗೆ ತವೇರಾ ವಾಹನದ ಚಕ್ರಗಳು ತೂರಿಹೋಗಿ ಭೀಕರ ಸದ್ದು ಕೇಳಿಸಿತು ಎಂದು ಸ್ಥಳೀಯರು ತಿಳಿಸಿದ್ದಾರೆ.

ಮೃತರು ಮಹೇಂದ್ರವಾಡಿ ಮತ್ತು ಮಖನ್ನಗರ ಪ್ರದೇಶದ ನಿವಾಸಿಗಳಾಗಿದ್ದು, ಅವರು ಗ್ರಾಮದ ರಘುನೇಂದ್ರ ಮೊರಪ್ಪ ಅವರ ಮದುವೆಗೆ ಬುಧನಿ ಗ್ರಾಮಕ್ಕೆ ತೆರಳಿದ್ದರು. ಮದುವೆ ಕಾರ್ಯಕ್ರಮದ ನಂತರ ತಮ್ಮ ಊರಿಗೆ ಮರಳುವ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಘಟನೆ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ, ಗ್ರಾಮಸ್ಥರು ಮತ್ತು ದಾರಿಹೋಕರ ಸಹಾಯದಿಂದ ಗಾಯಾಳುಗಳನ್ನು ತಕ್ಷಣ ಜಿಲ್ಲಾ ಆಸ್ಪತ್ರೆಗೆ ಸಾಗಿಸಿದರು. ವೈದ್ಯರು ಪರಿಶೀಲಿಸಿದ ಬಳಿಕ ಐವರು ಮೃತಪಟ್ಟಿದ್ದಾರೆಂದು ಘೋಷಿಸಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದೆ.

ಮೃತರ ವಿವರಗಳು:

ಶುಭಂ ಮೊರಪ್ಪ (18), ವಿನೀತ್ ಯಾದವ್ (22), ಸಾಹಿಲ್ ಯಾದವ್ (19), ಹರಿ ಸಿಂಗ್ (57) ,ಸಂತೋಷ್ ಪ್ರಜಾಪತಿ – ಮಖನ್ನಗರ

ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande