ಕನ್ನಡ ನಾಡು ನುಡಿ ರಕ್ಷಣೆಗೆ ಸಂಘಟಿತ ಹೋರಾಟಕ್ಕೆ ಕರೆ
ಕನ್ನಡ ನಾಡು ನುಡಿ ರಕ್ಷಣೆಗೆ ಸಂಘಟಿತ ಹೋರಾಟಕ್ಕೆ ಕರೆ
ಕನ್ನಡ ಪರ ಸಂಘಟನೆಗಳ ಒಕ್ಕೂಟದ ನೂತನ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಕೋಲಾರ ನಗರದ ರೋಟರಿ ಭವನದಲ್ಲಿ ಉದ್ಘಾಟಿಸಲಾಯಿತು.


ಕೋಲಾರ, ೨೭ ಏಪ್ರಿಲ್ (ಹಿ.ಸ) :

ಆ್ಯಂಕರ್ : ಕನ್ನಡ ಪರ ಸಂಘಟನೆಗಳ ಒಕ್ಕೂಟದ ನೂತನ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಕೋಲಾರ ನಗರದ ರೋಟರಿ ಭವನದಲ್ಲಿ ನಡೆದಿದ್ದು, ನಾಡು,ನುಡಿ,ನೆಲ,ಜಲ ರಕ್ಷಣೆಗೆ ಸಂಘಟಿತ ಹೋರಾಟ ನಡೆಸುವ ನಿರ್ಧಾರ ಕೈಗೊಳ್ಳಲಾಯಿತು.

ಪದಗ್ರಹಣ ಕಾರ್ಯಕ್ರಮದಲ್ಲಿ ಹಾಜರಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಗೋಪಾಲಗೌಡ ಮಾತನಾಡಿ, ಕನ್ನಡ ನಾಡು,ನುಡಿಯ ರಕ್ಷಣೆಗೆ ಕನ್ನಡ ಪರ ಸಂಘಟನೆಗಳ ಹೋರಾಟ ಅವಿಸ್ಮರಣೀಯವಾಗಿದ್ದು, ಇದೀಗ ಒಕ್ಕೂಟ ರಚಿಸುವ ಮೂಲಕ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಅಭಿನಂದಿಸಿದರು.

ಜಿಲ್ಲೆಗೆ ಒಂದು ಹೊಸ ತೇರು ಬಂದಿದ್ದು, ಅದನ್ನು ಎಳೆದುಕೊಂಡು ಸಾಗುವ ಕೆಲಸ ನಿಮ್ಮೆಲ್ಲರ ಹೆಗಲ ಮೇಲೆ ಇರುವುದರಿಂದ ಮುಂದಿನ ದಿನಗಳಲ್ಲಿ ಉತ್ತಮ ಕೆಲಸಗಳನ್ನು ಮಾಡಿಕೊಂಡು ಹೋಗಬೇಕೆಂದು ಹೇಳಿದರು.

ನಾವು ಸಹ ಸದಾ ನಿಮ್ಮ ಜೊತೆಯಲ್ಲಿ ಇರುತ್ತೇವೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು ನೂತನ ಜಿಲ್ಲಾಧ್ಯಕ್ಷರ ಚಂಬೆ ರಾಜೇಶ್ ಮಾತನಾಡಿ ಸಂಘಟನೆಯನ್ನು ಬಲಿಷ್ಠ ಗೊಳಿಸುವ ಮುಖಾಂತರ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಸಂಘಟನೆಯನ್ನು ಮಾಡಿ ಹಿರಿಯರ ಆಶೀರ್ವಾದದೊಂದಿಗೆ ಕನ್ನಡ ನಾಡು ನುಡಿ ಭಾಷೆಗೆ ಧಕ್ಕೆ ಆದಾಗ ಎಲ್ಲ ಕನ್ನಡಪರ ಸಂಘಟನೆಗಳು ಒಗ್ಗೂಡಿ ಹೋರಾಟಗಳನ್ನು ಮಾಡುವುದರ ಮುಖಾಂತರ ನಾಡು ನುಡಿ ಸಂಸ್ಕöÈತಿಯನ್ನು ಉಳಿಸುವ ಕೆಲಸ ಮಾಡಿಕೊಂಡು ಹೋಗುತ್ತೇನೆ ಎಂದು ತಿಳಿಸಿದರು.

ಹಿರಿಯ ಹೋರಾಟಗಾರ ಅ.ಕೃ. ಸೋಮಶೇಖರ್, ಕನ್ನಡ ಪರ ಹೋರಾಟ ನಡೆದು ಬಂದ ಹಾದಿಯ ಕುರಿತು ತಿಳಿಸಿ,ನಮ್ಮಲ್ಲಿ ಭಿನ್ನಾಭಿಪ್ರಾಯಗಳು ಎಷ್ಟೇ ಇರಲಿ ಕನ್ನಡಕ್ಕಾಗಿ ಒಂದಾಗೋಣ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಜಯದೇವ ಪ್ರಸನ್ನ, ಕಲಾವಿದ ವಿಷ್ಣು ಮತ್ತಿತರರು ಪಾಲ್ಗೊಂಡು ಒಕ್ಕೂಟ ಸರಿಯಾದ ಹಾದಿಯಲ್ಲಿ ನಡೆಯಲ್ಲಿ ಕನ್ನಡ ನಾಡು,ನುಡಿಯ ಹೋರಾಟದಲ್ಲಿ ಮುಂಚೂಣಿಯಲ್ಲಿರಲಿ ಎಂದು ಹಾರೈಸಿದರು.

ಕನ್ನಡ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರಾಗಿ ಚಂಬೆ ರಾಜೇಶ್, ಜಿಲ್ಲಾ ಕಾರ್ಯಾಧ್ಯಕ್ಷರಾಗಿ ತ್ಯಾಗರಾಜ್,ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಲಕ್ಷಿ÷್ಮಸಾಗರ ಕೃಷ್ಣೇಗೌಡ, ಜಿಲ್ಲಾ ಉಪಾಧ್ಯಕ್ಷರುಗಳಾಗಿ ರಾಮಾಂಜನಪ್ಪ, ಕನ್ನಡ ಮಿತ್ರ ವೆಂಕಟಪ್ಪ, ಸೋಮಶೇಖರ್, ಜಿಲ್ಲಾ ಖಜಾಂಚಿಯಾಗಿ ಚೇತನ್ ಬಾಬು, ಗೌರವ ಕಾರ್ಯದರ್ಶಿಯಾಗಿ ಎಂ ನಾರಾಯಣಸ್ವಾಮಿ, ಬಾಬಣ್ಣ, ಗೌರವ ಸಂಘಟನಾ ಕಾರ್ಯದರ್ಶಿಯಾಗಿ ಶೇಷಾದ್ರಿ ಶಾಸ್ತಿç, ಗೌರವ ಸಂಚಾಲಕರಾಗಿ ನಾಗರಾಜ್, ಉಪೇಂದ್ರ, ಪ್ರಧಾನ ಸಂಚಾಲಕರಾಗಿ ಪ್ರಕಾಶ್, ಸಹ ಸಂಚಾಲಕರಾಗಿ ಪ್ರವೀಣ್ ಕುಮಾರ್, ಸಂಘಟನಾ ಕಾರ್ಯದರ್ಶಿಯಾಗಿ ವೆಂಕಟೇಶ್, ಪ್ರಧಾನ ಸಂಚಾಲಕರಾಗಿ ನಾ.ಮಂಜುನಾಥ್ ವೆಂಕಟಕೃಷ್ಣಪ್ಪ ರವರನ್ನು ಆಯ್ಕೆ ಮಾಡಲಾಯಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande