


ಬಳ್ಳಾರಿ, 27 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲು ಆಗ್ರಹಿಸಿ ಹಿಂದೂಪರ ಸಂಘಟನೆಗಳ ಒಕ್ಕೂಟವು ಬಳ್ಳಾರಿಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರರಿಗೆ ಮನವಿ ಸಲ್ಲಿಸಿವೆ.
ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿರುವ ಅನಿಲ್ ನಾಯ್ಡು, ಮಾಜಿ ಶಾಸಕರಾದ ಜಿ. ಸೋಮಶೇಖರರೆಡ್ಡಿ, ಎಚ್. ಹುನುಮಂತಪ್ಪ ಅವರು, ಗೋವನ್ನು ಭಾರತ ದೇಶದಲ್ಲಿ ದೇವರಾಗಿ ಪೂಜಿಸುತ್ತೇವೆ. ಗೋವು ಭಾರತೀಯರ ಪ್ರೀತಿಪಾತ್ರ ಪ್ರಾಣಿ. ದೈವೀಶಕ್ತಿಯನ್ನು ಹೊಂದಿರುವ ಆರಾಧಿಸುವ ಮಾನವಸ್ನೇಹಿ. ಆದರೆ, ಗೋವನ್ನು ವಯಸ್ಸು - ಇನ್ನಿತರೆ ಕಾರಣಗಳನ್ನು ನೀಡಿ ವಧೆ ಮಾಡಿ, ಆಹಾರವನ್ನಾಗಿ ಬಳಕೆ ಮಾಡುತ್ತಿರುವುದು ಖಂಡನೀಯ ಎಂದು ಹೇಳಿದರು.
ಗೋ ಅಕ್ರಮ ಸಾಗಾಣಿಕೆ ಮತ್ತು ಗೋ ಹತ್ಯೆಯನ್ನು ತಡೆಯಲು ಸರ್ಕಾರ ಗೋ ರಕ್ಷಣಾ ಕಾಯ್ದೆ ಅಥವಾ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು. ಇಲ್ಲವಾದಲ್ಲಿ ಸರ್ಕಾರದ ವಿರುದ್ಧ ಹಂತ ಹಂತವಾಗಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಕೊಟ್ಟೂರುಸ್ವಾಮಿ ಸೋಮಸಮುದ್ರ ಶಾಖಾ ಮಠದ ಸಿದ್ದಲಿಂಗ ಶ್ರೀಗಳು ಹಾಗೂ ವಿವಿಧ ಮುಖಂಡರು ಪಾಲ್ಗೊಂಡಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್