ಗಾಜಿಪುರಕ್ಕೆ ಕಾಂಗ್ರೆಸ್ ನಿಯೋಗ ಭೇಟಿ : ಸಂತ್ರಸ್ತೆಯ ಕುಟುಂಬಕ್ಕೆ ಸಾಂತ್ವನ, ಭದ್ರತೆಗಾಗಿ ಎಸ್ಪಿಗೆ ಮನವಿ
ಗಾಜಿಪುರ, 27 ಏಪ್ರಿಲ್ (ಹಿ.ಸ.) : ಆ್ಯಂಕರ್ : ಉತ್ತರ ಪ್ರದೇಶದ ಗಾಜಿಪುರ ಜಿಲ್ಲೆಯಲ್ಲಿ ವಿಶ್ವಕರ್ಮ ಸಮುದಾಯದ ಯುವತಿಯ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿ, ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಲು ಕಾಂಗ್ರೆಸ್ ಪಕ್ಷವು ಮಹತ್ವದ ನಿಯೋಗ ಆಗಮಿಸಲಿದೆ. ಈ ಹಿನ್ನೆಲೆಯಲ್ಲಿ ಎಐಸಿಸಿ ಒಬಿಸಿ ವಿಭಾ
Cong symbol


ಗಾಜಿಪುರ, 27 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಉತ್ತರ ಪ್ರದೇಶದ ಗಾಜಿಪುರ ಜಿಲ್ಲೆಯಲ್ಲಿ ವಿಶ್ವಕರ್ಮ ಸಮುದಾಯದ ಯುವತಿಯ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿ, ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಲು ಕಾಂಗ್ರೆಸ್ ಪಕ್ಷವು ಮಹತ್ವದ ನಿಯೋಗ ಆಗಮಿಸಲಿದೆ.

ಈ ಹಿನ್ನೆಲೆಯಲ್ಲಿ ಎಐಸಿಸಿ ಒಬಿಸಿ ವಿಭಾಗದ ಅಧ್ಯಕ್ಷ ಡಾ. ಅನಿಲ್ ಜೈಹಿಂದ್ ಅವರು ಗಾಜಿಪುರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದು, ನಿಯೋಗದ ಭೇಟಿ ಸಂದರ್ಭದಲ್ಲಿ ಸಮರ್ಪಕ ಭದ್ರತಾ ವ್ಯವಸ್ಥೆಗಳನ್ನು ಕಲ್ಪಿಸಬೇಕೆಂದು ಮನವಿ ಮಾಡಿದ್ದಾರೆ.

ಕಾಂಗ್ರೆಸ್ ತಿಳಿಸಿದಂತೆ, 21 ಸದಸ್ಯರನ್ನು ಒಳಗೊಂಡ ನಿಯೋಗವು ಇಂದು ಗಾಜಿಪುರಕ್ಕೆ ಆಗಮಿಸಿ, ಸ್ಥಳದಲ್ಲೇ ಪರಿಶೀಲನೆ ನಡೆಸಲಿದೆ. ಪ್ರಕರಣದ ವಾಸ್ತವ ಸ್ಥಿತಿಯನ್ನು ಅರಿತು, ಸಂತ್ರಸ್ತೆಯ ಕುಟುಂಬಕ್ಕೆ ಸಾಂತ್ವನ ನೀಡುವುದು ನಿಯೋಗದ ಮುಖ್ಯ ಉದ್ದೇಶವಾಗಿದೆ.

ಈ ನಿಯೋಗದಲ್ಲಿ ಡಾ. ಅನಿಲ್ ಜೈಹಿಂದ್, ರಾಜೇಂದ್ರ ಪಾಲ್ ಗೌತಮ್, ಅಜಯ್ ಕುಮಾರ್ ಲಲ್ಲು, ಸುಭಾಶಿನಿ ಬುಂದೇಲಾ, ಜಿತೇಂದ್ರ ಬಘೇಲ್, ಸಂಸದ ತನುಜ್ ಪುನಿಯಾ, ಸಂಸದ ರಾಕೇಶ್ ರಾಥೋಡ್, ರಾಜ್ಯಸಭಾ ಸದಸ್ಯ ಕರ್ಮವೀರ್ ಸಿಂಗ್ ಬೌಧ್, ಮನೋಜ್ ಯಾದವ್, ಶಾಸಕ ವಿರೇಂದ್ರ ಚೌಧರಿ ಹಾಗೂ ಮಾಜಿ ಸಂಸದ ರವಿ ಪ್ರಕಾಶ್ ವರ್ಮಾ ಸೇರಿದಂತೆ ಪ್ರಮುಖ ನಾಯಕರು ಭಾಗಿಯಾಗಿದ್ದಾರೆ.

ನಿಯೋಗದ ಕೆಲವು ಸದಸ್ಯರು ದೆಹಲಿಯಿಂದ ವಾರಾಣಸಿಗೆ ವಿಮಾನ ಮಾರ್ಗವಾಗಿ ಪ್ರಯಾಣಿಸಿ, ನಂತರ ಗಾಜಿಪುರಕ್ಕೆ ತೆರಳಿ ಭೇಟಿ ನೀಡಲಿದ್ದಾರೆ. ಈ ಭೇಟಿ ರಾಜಕೀಯ ಹಾಗೂ ಸಾಮಾಜಿಕವಾಗಿ ಮಹತ್ವ ಪಡೆದಿದ್ದು, ಪ್ರಕರಣದ ತನಿಖೆಗೆ ಹೊಸ ತಿರುವು ಸಿಗುವ ಸಾಧ್ಯತೆಯಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande