ಟಿ.ಸಿ.ಎಸ್ ವರ್ಲ್ಡ್ 10ಕೆ ಓಟಕ್ಕೆ ಡಿ.ಕೆ.ಶಿವಕುಮಾರ್ ಚಾಲನೆ
ಬೆಂಗಳೂರು, 26 ಏಪ್ರಿಲ್ (ಹಿ.ಸ.) : ಆ್ಯಂಕರ್ : ಬೆಂಗಳೂರು ನಗರದ ಕ್ರೀಡಾ ಸಂಸ್ಕೃತಿ ಮತ್ತು ಸಾಮಾಜಿಕ ಜಾಗೃತಿ ಎರಡನ್ನೂ ಒಗ್ಗೂಡಿಸುವ .ಸಿ.ಎಸ್ ವರ್ಲ್ಡ್ 10ಕೆ ಬೆಂಗಳೂರು ಓಟಕ್ಕೆ ಈ ವರ್ಷವೂ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಓಟಕ್ಕೆ ಚಾಲನೆ ನೀಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಾರ್
Marathon


ಬೆಂಗಳೂರು, 26 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಬೆಂಗಳೂರು ನಗರದ ಕ್ರೀಡಾ ಸಂಸ್ಕೃತಿ ಮತ್ತು ಸಾಮಾಜಿಕ ಜಾಗೃತಿ ಎರಡನ್ನೂ ಒಗ್ಗೂಡಿಸುವ .ಸಿ.ಎಸ್ ವರ್ಲ್ಡ್ 10ಕೆ ಬೆಂಗಳೂರು ಓಟಕ್ಕೆ ಈ ವರ್ಷವೂ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಓಟಕ್ಕೆ ಚಾಲನೆ ನೀಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

“2008ರಿಂದ ಆರಂಭವಾದ ಈ ಓಟವು ಇಂದಿಗೆ ಜಾಗತಿಕವಾಗಿ ಗುರುತಿಸಲ್ಪಟ್ಟ ವರ್ಲ್ಡ್ ಅಥ್ಲೆಟಿಕ್ಸ್ ಗೋಲ್ಡ್ ಲೇಬಲ್ ರೇಸ್ ಆಗಿ ಬೆಳೆದಿದೆ. ಇದು ಕೇವಲ ಓಟವಲ್ಲ, ಫಿಟ್ನೆಸ್, ಒಳಗೊಳ್ಳುವಿಕೆ ಮತ್ತು ಸಮುದಾಯ ಮನೋಭಾವದ ಹಬ್ಬವಾಗಿದೆ” ಎಂದು ಅವರು ಹೇಳಿದರು.

ಈ ಕ್ರೀಡಾಕೂಟವು ಗಣ್ಯ ಕ್ರೀಡಾಪಟುಗಳು, ಉತ್ಸಾಹಿ ಓಟಗಾರರು ಹಾಗೂ ಸಾಮಾನ್ಯ ನಾಗರಿಕರನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುವುದರೊಂದಿಗೆ, ನಗರದ ಜೀವಂತಿಕೆಯನ್ನು ಪ್ರತಿಬಿಂಬಿಸುತ್ತದೆ. ಜೊತೆಗೆ, ಹಲವು ಎನ್ಜಿಒಗಳು ಮತ್ತು ಸಾಮಾಜಿಕ ಉದ್ದೇಶಗಳನ್ನು ಬೆಂಬಲಿಸುವ ಮೂಲಕ ಸಮಾಜಮುಖಿ ಕಾರ್ಯಗಳಿಗೆ ವೇದಿಕೆಯಾಗಿದೆ ಎಂದು ಶಿವಕುಮಾರ್ ತಿಳಿಸಿದರು.

ಓಟದಲ್ಲಿ ಭಾಗವಹಿಸಿ ಉತ್ಸಾಹದಿಂದ ಪೂರ್ಣಗೊಳಿಸಿದ ಪ್ರತಿಯೊಬ್ಬರಿಗೂ ಅಭಿನಂದನೆ ಸಲ್ಲಿಸಿದ ಅವರು, “ಬೆಂಗಳೂರು ನಗರದ ಶಕ್ತಿ, ಜಾಗತಿಕ ದೃಷ್ಟಿಕೋನ ಮತ್ತು ಚೈತನ್ಯ ಇಂತಹ ಕಾರ್ಯಕ್ರಮಗಳಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ನಮ್ಮ ನಗರವನ್ನು ವಿಶ್ವದ ಗಮನಕ್ಕೆ ತರುವ ಇಂತಹ ವಿಶ್ವದರ್ಜೆಯ ಉಪಕ್ರಮಗಳನ್ನು ಸರ್ಕಾರ ಬೆಂಬಲಿಸುತ್ತದೆ” ಎಂದು ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande