ವಿದ್ಯಾರ್ಥಿನಿಯರೊಂದಿಗೆ ರಾಹುಲ್ ಗಾಂಧಿ ಸಂವಾದ
ನವದೆಹಲಿ, 26 ಏಪ್ರಿಲ್ (ಹಿ.ಸ.) : ಆ್ಯಂಕರ್ : ಲೋಕ ಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರು ದೆಹಲಿ ವಿಶ್ವವಿದ್ಯಾಲಯಕ್ಕೆ ಸೇರಿದ ಗಾರ್ಗಿ ಕಾಲೇಜುಗೆ ಭೇಟಿ ನೀಡಿ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಯುವ ಪೀಳಿಗೆಯ ಪಾತ್ರ, ವಿಶೇಷವಾಗಿ ‘ಜನರೇಷನ್ ಝಡ್’ ಮಹಿಳೆಯರ ಮಹತ್ವ
ವಿದ್ಯಾರ್ಥಿನಿಯರೊಂದಿಗೆ ರಾಹುಲ್ ಗಾಂಧಿ ಸಂವಾದ


ನವದೆಹಲಿ, 26 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಲೋಕ ಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರು ದೆಹಲಿ ವಿಶ್ವವಿದ್ಯಾಲಯಕ್ಕೆ ಸೇರಿದ ಗಾರ್ಗಿ ಕಾಲೇಜುಗೆ ಭೇಟಿ ನೀಡಿ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದರು.

ಈ ಸಂದರ್ಭದಲ್ಲಿ ಯುವ ಪೀಳಿಗೆಯ ಪಾತ್ರ, ವಿಶೇಷವಾಗಿ ‘ಜನರೇಷನ್ ಝಡ್’ ಮಹಿಳೆಯರ ಮಹತ್ವವನ್ನು ಒತ್ತಿ ಹೇಳಿದ ಅವರು, “ಭವಿಷ್ಯದಲ್ಲಿ ಮಹಿಳೆಯರು ದೇಶವನ್ನು ಮುನ್ನಡೆಸುತ್ತಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಂವಾದದ ದೃಶ್ಯಗಳನ್ನು ಒಳಗೊಂಡ ಸುಮಾರು 36 ನಿಮಿಷಗಳ ವೀಡಿಯೊವನ್ನು ಅವರು ತಮ್ಮ ಸಾಮಾಜಿಕ ಜಾಲತಾಣ ಎಕ್ಸನಲ್ಲಿ ಹಂಚಿಕೊಂಡಿದ್ದಾರೆ. “ಗಾರ್ಗಿ ಕಾಲೇಜು ಹಾಗೂ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಭೇಟಿಯಾಗಿದ್ದು ಸಂತೋಷಕರ ಅನುಭವ. ಇಂದಿನ ಯುವ ಪೀಳಿಗೆ ಜಾಗೃತವಾಗಿದೆ, ದೇಶದ ಭವಿಷ್ಯ ಸುರಕ್ಷಿತ ಕೈಗಳಲ್ಲಿ ಇದೆ” ಎಂದು ಅವರು ಬರೆದಿದ್ದಾರೆ.

ಸಂವಾದದ ವೇಳೆ ಮಹಿಳಾ ಮೀಸಲಾತಿ ಮಸೂದೆ ಕುರಿತೂ ಚರ್ಚೆ ನಡೆಯಿತು. ವಿದ್ಯಾರ್ಥಿನಿಯರು ಇದನ್ನು ಕೇವಲ ಸಬಲೀಕರಣದ ಸಾಧನವಾಗಿಯೇ ಅಲ್ಲ, ಅಧಿಕಾರದ ಸಮತೋಲನ ಬದಲಾಯಿಸುವ ಪ್ರಮುಖ ಹೆಜ್ಜೆಯೆಂದು ಅಭಿಪ್ರಾಯಪಟ್ಟರು. ರಾಜಕೀಯದಲ್ಲಿ ಸಮಾನತೆ, ಗೌರವ ಹಾಗೂ ಭಾಗವಹಿಸುವಿಕೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದು ಅವರು ಒತ್ತಿ ಹೇಳಿದರು.

ರಾಜಕೀಯದಲ್ಲಿ ಹಿಂಸಾಚಾರ, ದ್ವೇಷ ಹಾಗೂ ಪಿತೃಪ್ರಭುತ್ವದ ಬದಲು ಏಕತೆ, ಸಮಾನತೆ ಮತ್ತು ಪರಸ್ಪರ ಗೌರವಕ್ಕೆ ಆದ್ಯತೆ ನೀಡಬೇಕು ಎಂಬ ಅಭಿಪ್ರಾಯವನ್ನು ವಿದ್ಯಾರ್ಥಿನಿಯರು ಹಂಚಿಕೊಂಡರು. ಸಮಾಜ ಮತ್ತು ರಾಜಕೀಯದಲ್ಲಿ ಸಕಾರಾತ್ಮಕ ಬದಲಾವಣೆ ಅಗತ್ಯವೆಂದು ಅವರು ಸೂಚಿಸಿದರು.

ವಿದ್ಯಾರ್ಥಿನಿಯರ ಚಿಂತನಶೀಲತೆ ಮತ್ತು ಪ್ರಾಮಾಣಿಕತೆಯನ್ನು ಶ್ಲಾಘಿಸಿದ ರಾಹುಲ್ ಗಾಂಧಿ, ಯುವಕರಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸುವುದು ಸಮಾಜದ ಹಾಗೂ ವ್ಯವಸ್ಥೆಯ ಜವಾಬ್ದಾರಿ ಎಂದು ಹೇಳಿದರು. ದೇಶದ ಭವಿಷ್ಯವು ಯುವಕರ ಕೈಯಲ್ಲಿ ಸುರಕ್ಷಿತವಾಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande