
ಲೇಹ, 26 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮೇ 1ರಂದು ಎರಡು ದಿನಗಳ ಭೇಟಿಗಾಗಿ ಲಡಾಖ್ನ ಲೇಹಗೆ ಆಗಮಿಸಲಿದ್ದಾರೆ. ಬುದ್ಧ ಪೂರ್ಣಿಮೆಯ ಅಂಗವಾಗಿ ಅವರು ಭಗವಾನ್ ಗೌತಮ ಬುದ್ಧ ಅವರ ಪವಿತ್ರ ಅವಶೇಷಗಳಿಗೆ ಗೌರವ ಸಲ್ಲಿಸಲಿದ್ದಾರೆ.
ಲಡಾಖ್ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಈ ವಿಷಯವನ್ನು ಭಾನುವಾರ ತಿಳಿಸಿದ್ದು, ಮೇ 1ರಿಂದ 14ರವರೆಗೆ ನಡೆಯಲಿರುವ ಪವಿತ್ರ ಪ್ರದರ್ಶನದ ಆಧ್ಯಾತ್ಮಿಕ ಮಹತ್ವದ ಬಗ್ಗೆ ಗೃಹ ಸಚಿವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ ಎಂದರು.
ಈ ಪವಿತ್ರ ಅವಶೇಷಗಳನ್ನು ಸಾರ್ವಜನಿಕರಿಗೆ ಪ್ರದರ್ಶಿಸುವುದು ಲಡಾಖ್ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿದೆ. ಉತ್ತರ ಪ್ರದೇಶದ ಪಿಪ್ರಹ್ವಾ (ಪ್ರಾಚೀನ ಕಪಿಲ್ವಸ್ತು) ಯಿಂದ ಉತ್ಖನನಗೊಂಡಿರುವ ಈ ಅವಶೇಷಗಳನ್ನು ಮೇ 1ರಿಂದ 14ರವರೆಗೆ ಚೋಗ್ಲಮ್ಸರ್ ಪ್ರದೇಶದ ಜಿವ್ ತ್ಸಾಲ್ ಮೈದಾನದಲ್ಲಿ ಪ್ರದರ್ಶಿಸಲಾಗುತ್ತದೆ.
ಈ ಕಾರ್ಯಕ್ರಮವು ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವವನ್ನು ಹೊಂದಿದ್ದು, ಬೌದ್ಧ ಧರ್ಮೀಯರಿಗೂ ಹಾಗೂ ಪ್ರವಾಸಿಗರಿಗೂ ವಿಶೇಷ ಆಕರ್ಷಣೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa