ಸವಿತಾ ಸಮಾಜದ ಸ್ವಾಭಿಮಾನದ ಸಂಕೇತವಾಗಿ ನಾಗದೇವರ ಮಂದಿರಕ್ಕೆ ಅಡಿಗಲ್ಲು
ಗದಗ, 26 ಏಪ್ರಿಲ್ (ಹಿ.ಸ.) : ಆ್ಯಂಕರ್ : ಸಮಾಜದಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಸವಿತಾ ಸಮಾಜದ 25 ವರ್ಷಗಳ ಕನಸಾದ ನಾಗದೇವರ ಮಂದಿರವು ಕೇವಲ ಕಟ್ಟಡವಾಗದೆ, ಇಡೀ ಸಮಾಜದ ಶಕ್ತಿ ಕೇಂದ್ರವಾಗಿ ಹೊರಹೊಮ್ಮಬೇಕು” ಎಂದು ಯುವ ಕಾಂಗ್ರೆಸ್ ನಾಯಕ ಕೃಷ್ಣಗೌಡ್ರು ಪಾಟೀಲ್ ಹೇಳಿದರು.
ಫೋಟೋ


ಗದಗ, 26 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಸಮಾಜದಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಸವಿತಾ ಸಮಾಜದ 25 ವರ್ಷಗಳ ಕನಸಾದ ನಾಗದೇವರ ಮಂದಿರವು ಕೇವಲ ಕಟ್ಟಡವಾಗದೆ, ಇಡೀ ಸಮಾಜದ ಶಕ್ತಿ ಕೇಂದ್ರವಾಗಿ ಹೊರಹೊಮ್ಮಬೇಕು” ಎಂದು ಯುವ ಕಾಂಗ್ರೆಸ್ ನಾಯಕ ಕೃಷ್ಣಗೌಡ್ರು ಪಾಟೀಲ್ ಹೇಳಿದರು.

ನಗರದ ಗಂಗಿಮಡಿ ನಗರದಲ್ಲಿ ಸವಿತಾ ಸಮಾಜ ಸುಧಾರಣಾ ಸಂಘದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಚಿವರ ಅನುದಾನದಿಂದ ಬಿಡುಗಡೆಯಾದ ₹10 ಲಕ್ಷ ವೆಚ್ಚದ ನಾಗದೇವರ ದೇವಸ್ಥಾನ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ಹಾಕಿ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

“ದೇವಸ್ಥಾನವು ಕೇವಲ ಧಾರ್ಮಿಕ ಕೇಂದ್ರವಲ್ಲ, ಅದು ಸಮಾಜದ ಸ್ವಾಭಿಮಾನದ ಪ್ರತೀಕ. ಪ್ರತಿಯೊಬ್ಬರೂ ‘ನನ್ನ ದೇವಸ್ಥಾನಕ್ಕೆ ನನ್ನಿಂದಲೂ ಸೇವೆ ಇರಲಿ’ ಎಂಬ ದಾಸೋಹ ಭಾವದಿಂದ ಮುಂದೆ ಬರಬೇಕು. ಯುವಶಕ್ತಿ ಬೆನ್ನೆಲುಬಾಗಿ ನಿಂತರೆ ಹಿರಿಯರ ಕನಸು ಭವ್ಯವಾಗಿ ನನಸಾಗುತ್ತದೆ,” ಎಂದು ಅವರು ಹೇಳಿದರು.

ಸಮಾಜದ ಬೇಡಿಕೆಗಳಿಗೆ ಸ್ಪಂದಿಸಿ ಹೆಚ್ಚುವರಿ ಅನುದಾನ ನೀಡಲು ಸದಾ ಸಿದ್ಧನಿದ್ದೇನೆ ಎಂದು ಭರವಸೆ ನೀಡಿದರು.

ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಕೃಷ್ಣಾ ಎಚ್. ಹಡಪದ ಮಾತನಾಡಿ, “ಇದು ಕೇವಲ ದೇವಸ್ಥಾನವಲ್ಲ, ನಮ್ಮ ಸಂಘಟನೆಯ ಶಕ್ತಿ. ಯುವಕರು ಪ್ರತಿದಿನ ಕನಿಷ್ಠ ಒಂದು ಗಂಟೆ ಶ್ರಮದಾನ ಮಾಡುವ ಮೂಲಕ ದೇವಸ್ಥಾನ ನಿರ್ಮಾಣವನ್ನು ಶೀಘ್ರ ಪೂರ್ಣಗೊಳಿಸಬೇಕು” ಎಂದು ಮನವಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪರಶುರಾಮ್ ಕೋಟೆಕಲ್ಲ ಅವರು ಸಂಘದ ಬಲವರ್ಧನೆಗೆ ಎಲ್ಲರ ಸಹಕಾರ ಕೋರಿದರು. ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಿದ್ದು ಪಾಟೀಲರು ಮಾತನಾಡಿ, ಸಮಾಜದ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಇಂತಹ ಕಾರ್ಯಗಳು ಪೂರಕ ಎಂದರು.

ಯುವ ನಾಯಕರು ರವಿಕುಮಾರ್ ರೆಡ್ಡಿ, ಅಶೋಕ್ ಮಂದಾಲಿ ಹಾಗೂ ಸ್ಥಳೀಯ ಸದಸ್ಯ ರವಿ ಕಮ್ತರ ಅವರು ಸಮಾಜದ ಒಗ್ಗಟ್ಟು ಮತ್ತು ಯುವಕರ ಜವಾಬ್ದಾರಿಯ ಬಗ್ಗೆ ಅಭಿಪ್ರಾಯ ಹಂಚಿಕೊಂಡರು.

ವೇದಿಕೆಯಲ್ಲಿ ಹಿರಿಯರಾದ ಎಸ್.ಎನ್. ಬಳ್ಳಾರಿ ಗುರುಗಳು ಮತ್ತು ಮಾರ್ತಂಡಪ್ಪ ಹಾದಿಮನಿ ಆಶೀರ್ವಚನ ನೀಡಿದರು. ವಿವಿಧ ಸಮಾಜ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಸಂಘದ ಕಾರ್ಯದರ್ಶಿ ರವಿಕುಮಾರ್ ಹಡಪದ ಕಾರ್ಯಕ್ರಮ ನಿರೂಪಿಸಿದರು. ಗೌರವಾಧ್ಯಕ್ಷ ಕೃಷ್ಣಾ ಬಾಯಲಗುಡ್ಡ ಸ್ವಾಗತಿಸಿದರು. ಆಂಜನೇಯ ಆದೋನಿ ವಂದಿಸಿದರು.

ಕಾರ್ಯಕ್ರಮದಲ್ಲಿ ನೂರಾರು ಯುವಕರು, ಹಿರಿಯರು ಭಾಗವಹಿಸಿ ದೇವಸ್ಥಾನ ನಿರ್ಮಾಣಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande