ಮಕ್ಕಳು ಮೊಬೈಲ್ ಗೀಳು ತೊರೆಯುವಂತೆ ನ್ಯಾಯಮೂರ್ತಿ ನಟೇಶ್ ಕರೆ
ಮಕ್ಕಳು ಮೊಬೈಲ್ ಗೀಳು ತೊರೆಯುವಂತೆ ನ್ಯಾಯಮೂರ್ತಿ ನಟೇಶ್ ಕರೆ
ಕೋಲಾರದಲ್ಲಿ ಬಾಲಭವನದ ಆಶ್ರಯದಲ್ಲಿ ನಡೆದ ಮಕ್ಕಳ ಬೇಸಿಗೆ ಶಿಬಿರವನ್ನು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನಟೇಶ್ ಉದ್ಘಾಟಿಸಿದರು.


ಕೋಲಾರ,೨೫ ಏಪ್ರಿಲ್ (ಹಿ.ಸ) :

ಆ್ಯಂಕರ್ : ಚಿತ್ರಕಲೆಯಿಂದ ಮಕ್ಕಳ ಮಾನಸಿಕ ಬೆಳವಣಿಗೆ ಆಗುತ್ತದೆ. ಕರಾಟೆ ಯೋಗ ಸಂಗೀತ ನೃತ್ಯ ನಾಟಕ ಗಳಿಂದ ಮಕ್ಕಳಲ್ಲಿ ದೈಹಿಕವಾಗಿ, ಮಾನಸಿಕ ಬೆಳವಣಿಗೆಗೆ ಮಗುವಿನ ವಿಕಾಸಕ್ಕೆ ಇಂತಹ ಬೇಸಿಗೆ ಶಿಬಿರ ಅವಶ್ಯಕತೆ ಇರುತ್ತದೆ. ಪ್ರಸ್ತುತ ಸಮಾಜದಲ್ಲಿ ಮಕ್ಕಳು ಮೊಬೈಲಿಗೆ ಅವಲಂಬಿತರಾಗದೆ ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಮಕ್ಕಳು ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನಟೇಶ್ ಕರೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕೋಲಾರ ಜಿಲ್ಲಾ ಬಾಲ ಭವನ ಸೊಸೈಟಿಯ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಉಚಿತ ಬೇಸಿಗೆ ಶಿಬಿರವನ್ನುವನ್ನು ಉದ್ಘಾಟಿಸಿ ಮಾತನಾಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನಾರಾಯಣಸ್ವಾಮಿ ಮಾತನಾಡಿ ಬೇಸಿಗೆ ಶಿಬಿರದಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಉಚಿತವಾಗಿ ಮಕ್ಕಳಿಗೆ ತರಬೇತಿ ನೀಡಲಾಗುತ್ತಿದ್ದು ಮಕ್ಕಳು ಸದುಪಯೋಗ ಪಡೆದುಕೊಳ್ಳುವಂತೆ ಬೇಸಿಗೆ ರಜೆಯಲ್ಲಿ ಕಾಲಹರಣ ಮಾಡದೆ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ಭಾಗವಹಿಸಿ ಮೊಬೈಲ್ ಮತ್ತು ಟಿವಿಗಳಿಂದ ದೂರ ಇದ್ದು ಚಟುವಟಿಕೆಗಳಿಂದ ಮಕ್ಕಳಲ್ಲಿ ಧೈರ್ಯ ಆತ್ಮವಿಶ್ವಾಸ ಮೂಡಲು ಬೇಸಿಗೆ ಶಿಬಿರ ಅವಶ್ಯಕ ಎಂದು ತಿಳಿಸಿದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ ಮಾತನಾಡಿ ಜಿಲ್ಲಾ ಬಾಲ ಭವನ ಸೊಸೈಟಿ ವತಿಯಿಂದ ಪ್ರತಿ ವರ್ಷವೂ ಸಹ ಜಿಲ್ಲಾ ಮಟ್ಟದ ಬೇಸಿಗೆ ಶಿಬಿರಗಳನ್ನು ಆಯೋಜಿಸುತ್ತಾ ಬಂದಿದ್ದು ಹೆಚ್ಚಿನ ಸಂಖ್ಯೆ ಮಕ್ಕಳು ಇದರ ಸದುಪಯೋಗ ಪಡೆದುಕೊಂಡಿರುತ್ತಾರೆ. ಈ ವರ್ಷವೂ ಸಹ ೫ ರಿಂದ ೧೬ ವರ್ಷದ ಮಕ್ಕಳಿಗೆ ಬೇಸಿಗೆ ಶಿಬಿರ ಆಯೋಜಿಸಿದ್ದು ಈ ಶಿಬಿರದಲ್ಲಿ ಹಲವಾರು ಇಲಾಖೆಗಳ ಪರಿಚಯದ ಅರಿವು ಮೂಡಿಸುವ ಯೋಜನೆ ಈ ಶಿಬಿರದಲ್ಲಿ ಆಯೋಜಿಸಲಾಗಿದೆ. ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡುತ್ತಿದ್ದು ಇದರ ಸದುಪಯೋಗ ಮಕ್ಕಳು ಪಡೆದುಕೊಳ್ಳುವಂತೆ ಮಕ್ಕಳಿಗೆ ಮತ್ತು ಮಕ್ಕಳ ಜೊತೆ ಬಂದ ಪೋಷಕರಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಕೋಲಾರ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶ್ರೀನಿವಾಸ್, ಕಾರ್ಯದರ್ಶಿ ಕೆ.ವಿ ಆದರ್ಶ್, ಮುಳಬಾಗಲ್ ಸಿ.ಡಿ.ಪಿ.ಓ ರಮ್ಯಾ, ಕೋಲಾರ ಸಿ.ಡಿ.ಪಿ.ಓ ರವಿಕುಮಾರ್, ಸಂಪನ್ಮೂಲ ವ್ಯಕ್ತಿಗಳಾದ ಜನಪದ ಕಲಾವಿದ ಚಿಕ್ಕರೆಡ್ಡಪ್ಪ, ಚಿತ್ರಕಲ ಶಿಕ್ಷಕ ಗೋವಿಂದರಾಜು, ಸಂಗೀತ ಶಿಕ್ಷಕ ಮುನಿಯಪ್ಪ, ಯೋಗ ಶಿಕ್ಷಕ ಬಾಬು, ಕರಾಟೆ ಶಿಕ್ಷಕ ವೆಂಕಟೇಶ, ಇಲಾಖೆ ಸಿಬ್ಬಂದಿ ಯಶೋಧ, ಯಶಸ್ವಿನಿ, ವೆಂಕಟೇಶ್, ವಿಶ್ವನಾಥ್, ಸಂಗೀತ, ನೀಮ, ಹಂಸ, ಹೇಮಾ, ಜಿಲ್ಲಾ ಸಂಯೋಜಕ ನಾರಾಯಣಗೌಡ, ಕಚೇರಿ ಸಹಾಯಕಿ ತನುಶ್ರೀ ಹಾಗೂ ಪೋಷಕರು ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande