
ಹುಬ್ಬಳ್ಳಿ, 25 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಬೇಸಿಗೆ ರಜೆಯ ಅವಧಿಯಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ನೈಋತ್ಯ ರೈಲ್ವೆಯು ಎಸ್ಎಂವಿಟಿ ಬೆಂಗಳೂರು- ಬೆಳಗಾವಿ- ಎಸ್ಎಂವಿಟಿ ಬೆಂಗಳೂರು ನಡುವೆ ವಿಶೇಷ ಎಕ್ಸ್ಪ್ರೆಸ್ ರೈಲನ್ನು ಓಡಿಸಲು ನಿರ್ಧರಿಸಿದೆ.
ರೈಲು ಸಂಖ್ಯೆ 06503 ವಿಶೇಷ ಎಕ್ಸ್ಪ್ರೆಸ್ 2026ರ ಏಪ್ರಿಲ್ 30ರಂದು (ಗುರುವಾರ) ಸಂಜೆ 7.00ಕ್ಕೆ ಎಸ್ಎಂವಿಟಿ ಬೆಂಗಳೂರಿನಿಂದ ಹೊರಟು, ಮರು ದಿನ ಶುಕ್ರವಾರ ಬೆಳಗ್ಗೆ 7.35ಕ್ಕೆ ಬೆಳಗಾವಿ ರೈಲು ನಿಲ್ದಾಣವನ್ನು ತಲುಪಲಿದೆ (ಒಂದು ಟ್ರಿಪ್). ಇದೇ ರೀತಿ, ರೈಲು ಸಂಖ್ಯೆ 06504 ವಿಶೇಷ ಎಕ್ಸ್ಪ್ರೆಸ್ 2026ರ ಮೇ 3ರಂದು (ಭಾನುವಾರ) ಸಂಜೆ 5.30ಕ್ಕೆ ಬೆಳಗಾವಿಯಿಂದ ಹೊರಟು, ಮರು ದಿನ ಸೋಮವಾರ ಬೆಳಗ್ಗೆ 5.00ಕ್ಕೆ ಎಸ್ಎಂವಿಟಿ ಬೆಂಗಳೂರಿಗೆ ತಲುಪಲಿದೆ (ಒಂದು ಟ್ರಿಪ್).
ಈ ವಿಶೇಷ ರೈಲು ತನ್ನ ಸಂಚಾರದಲ್ಲಿ (ಎರಡು ದಿಕ್ಕುಗಳಲ್ಲಿ) ಚಿಕ್ಕಬಾಣಾವರ, ತುಮಕೂರು, ಸಂಪಿಗೆ ರೋಡ್, ಅರಸಿಕೇರಿ, ಬೀರೂರು, ದಾವಣಗೆರೆ, ಹರಿಹರ, ಹಾವೇರಿ, ಕರ್ಜಗಿ, ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ ಹಾಗೂ ಖಾನಾಪುರ ರೈಲು ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರುತ್ತದೆ. ರೈಲು ಒಟ್ಟು 19 ಬೋಗಿಗಳನ್ನು ಹೊಂದಿದ್ದು, ಅವುಗಳಲ್ಲಿ 2 ಎಸಿ 2-ಟೈರ್, 4 ಎಸಿ 3-ಟೈರ್, 7 ಸ್ಲೀಪರ್ ಕ್ಲಾಸ್, 4 ಜನರಲ್ ಸೆಕೆಂಡ್ ಕ್ಲಾಸ್ ಹಾಗೂ 2 ಎಸ್ಎಲ್ಆರಡಿ ಬೋಗಿಗಳು ಸೇರಿವೆ. ಪ್ರಯಾಣಿಕರು ಈ ವಿಶೇಷ ರೈಲಿನ ಸದುಪಯೋಗವನ್ನು ಪಡೆದುಕೊಳ್ಳುವಂತೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa