ಒಳ ಮೀಸಲಾತಿ ರೋಸ್ಟರ್ ಸಮಸ್ಯೆಗೆ ಪರಿಹಾರ, ಆತಂಕ ಬೇಡ : ಸಚಿವ ಎಚ್.ಸಿ. ಮಹದೇವಪ್ಪ
ಬೆಂಗಳೂರು, 25 ಏಪ್ರಿಲ್ (ಹಿ.ಸ.) : ಆ್ಯಂಕರ್ : ಒಳ ಮೀಸಲಾತಿ ವರ್ಗೀಕರಣದ ರೋಸ್ಟರ್ ಬಿಂದು ಸಮಸ್ಯೆಗೆ ರಾಜ್ಯ ಸರ್ಕಾರವು ಪೂರಕ ಪರಿಹಾರ ಕಂಡುಕೊಂಡಿದ್ದು, ಯಾವುದೇ ಪರಿಶಿಷ್ಟ ಜಾತಿ ಸಮುದಾಯಕ್ಕೂ ಅನ್ಯಾಯವಾಗದಂತೆ ಸೂಕ್ತ ಜಾಗ್ರತೆ ವಹಿಸಲಾಗಿದೆ ಎಂದು ಸಚಿವ ಎಚ್.ಸಿ. ಮಹದೇವಪ್ಪ ತಿಳಿಸಿದ್ದಾರೆ. ಸಾಮಾಜಿಕ
ಎಚ್.ಸಿ.ಮಹದೇವಪ್ಪ


ಬೆಂಗಳೂರು, 25 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಒಳ ಮೀಸಲಾತಿ ವರ್ಗೀಕರಣದ ರೋಸ್ಟರ್ ಬಿಂದು ಸಮಸ್ಯೆಗೆ ರಾಜ್ಯ ಸರ್ಕಾರವು ಪೂರಕ ಪರಿಹಾರ ಕಂಡುಕೊಂಡಿದ್ದು, ಯಾವುದೇ ಪರಿಶಿಷ್ಟ ಜಾತಿ ಸಮುದಾಯಕ್ಕೂ ಅನ್ಯಾಯವಾಗದಂತೆ ಸೂಕ್ತ ಜಾಗ್ರತೆ ವಹಿಸಲಾಗಿದೆ ಎಂದು ಸಚಿವ ಎಚ್.ಸಿ. ಮಹದೇವಪ್ಪ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ ಅವರು, “ಈ ವಿಷಯದಲ್ಲಿ ಯಾವುದೇ ಸಮುದಾಯವೂ ಆತಂಕಪಡಬೇಕಾಗಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ, ಸರ್ಕಾರಿ ಉದ್ಯೋಗಕ್ಕಾಗಿ ದೀರ್ಘಕಾಲದಿಂದ ಶ್ರಮಿಸಿ ಕಾಯುತ್ತಿರುವ ಯುವಜನತೆಗೆ ಶೀಘ್ರದಲ್ಲೇ ನೇಮಕಾತಿ ಪ್ರಕಟಣೆ ಹೊರಡಿಸುವುದು ಸರ್ಕಾರದ ಮುಂದಿನ ತುರ್ತು ಆದ್ಯತೆಯಾಗಿದೆ ಎಂದು ಅವರು ಹೇಳಿದ್ದಾರೆ. ಸರ್ಕಾರವು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ, ಯುವಕರ ನಿರೀಕ್ಷೆಗಳನ್ನು ಈಡೇರಿಸುವತ್ತ ಕ್ರಮ ಕೈಗೊಳ್ಳಲಿದೆ ಎಂಬ ಭರವಸೆಯನ್ನೂ ನೀಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande