
ಕೋಲಾರ ಏಪ್ರಿಲ್ ೨೫ (ಹಿ.ಸ) :
ಆ್ಯಂಕರ್ : ಕನ್ನಡ ಭಾಷೆಗೆ ತನ್ನದೇ ಆದ ಗೌರವವನ್ನು ಸೃಷ್ಠಿಸಿ ನಮ್ಮ ನಟನೆಯ ಮೂಲಕ ಅಭಿಮಾನಿಗಳನ್ನು ದೇವರೆಂದು ಕರೆದ ಡಾಕ್ಟರ್ ರಾಜಕುಮಾರ್ ನಿಜಕ್ಕೂ ಕನ್ನಡದ ಧ್ರುವತಾರೆ ಎಂದು ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ಸರ್ಕಾರಿ ನೌಕರರ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ಎನ್ ಮುನಿರಾಜು ಬಣ್ಣಿಸಿದರು.
ಬುದ್ಧ ಮಂದಿರದ ಆವರಣದಲ್ಲಿಂದು ಸಮಿತಿ ವತಿಯಿಂದ ಏರ್ಪಡಿಸಿದ ಡಾ. ರಾಜಕುಮಾರ್ ಜಯಂತಿ ಕಾರ್ಯಕ್ರಮವನ್ನು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ತಮ್ಮ ಜೀವನದ ಉದ್ದಕ್ಕೂ ಸರಳತೆಯನ್ನು ಮೈಗೂಡಿಸಿಕೊಂಡು ತಮ್ಮ ನಡೆ ನುಡಿಯನ್ನು ಸಮಾಜದ ಬೆಳವಣಿಗೆಗೆ ಪೂರಕವಾಗಿ ಉತ್ತಮ ಚಿತ್ರಗಳ ಮೂಲಕ ಸಮಾಜ ಸೇವೆಯನ್ನು ಮಾಡುವ ಕಾರ್ಯಕ್ರಮ ಜನರ ಮನಸ್ಸನ್ನು ಸೂರೆಗೊಂಡಿದ್ದ ಡಾ. ರಾಜಕುಮಾರ್ ನಿಜಕ್ಕೂ ಕರ್ನಾಟಕ ಕಂಡ ಆದರ್ಶ ಪುರುಷ ಎಂದರು .
ರಾಜ್ಯ ಸರ್ಕಾರ ಅವರ ಜಯಂತಿಯನ್ನು ಮಾಡುವಂತ ಹೊರಡಿಸಿರುವ ಆದೇಶ ಜೊತೆಗೆ ಅವರ ನೆನಪುಗಳನ್ನು ಶಾಶ್ವತಗೊಳಿಸಲು ಪಠ್ಯಪುಸ್ತಕದಲ್ಲಿ ಅವರ ಜೀವನ ಚರಿತ್ರೆಯನ್ನು ಸೇರಿಸಬೇಕೆಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಗೌರವ ಅಧ್ಯಕ್ಷರಾದ ಜಿ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿಗಳಾದ ಮುಕುಂದಾ ಮಹಿಳಾ ಸಂಚಾಲಕರಾದ ಸುನಿತಾ, ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಅಧ್ಯಕ್ಷರಾದ ಅಶ್ವಿನ್ ಕುಮಾರ್ ಕಾರ್ಯದರ್ಶಿಗಳಾದ ಕೃಷ್ಣಪ್ಪ, ಲೋಕೇಶ್, ಅಶೋಕ್, ರಂಜಿತ್, ಬಾಬು, ಸೌಮ್ಯ, ವಾಣಿ, ರೇಣುಕಾ ಮುಂತಾದವರು ಉಪಸ್ಥಿತರಿದ್ದರು
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್