ವರ್ತಕರಿಂದ ಬಲವಂತವಾಗಿ ಹಣ ವಸೂಲಿ ಮಾಡಿದರೆ ಕಾನೂನು ಕ್ರಮ : ಎಸ್.ಪಿ. ಎಚ್ಚರಿಕೆ
ವರ್ತಕರಿಂದ ಬಲವಂತವಾಗಿ ಹಣ ವಸೂಲಿ ಮಾಡಿದರೆ ಕಾನೂನು ಕ್ರಮ ; ಎಸ್.ಪಿ. ಎಚ್ಚರಿಕೆ
ಕೆಜಿಎಫ್ ನಗರದ ರಾಬರ್ಟ್ಸನ್ ಪೇಟೆ ಮಾರುಕಟ್ಟೆಯಲ್ಲಿ ಎಸ್.ಪಿ. ಶಿವಾಂಶು ರಜಪೂತ್  ಸಾರ್ವಜನಿಕರ ಕುಂದು ಕೊರತೆಗಳ ಸಭೆ ನಡೆಸಿದರು.


ಕೋಲಾರ, ೨೫ ಏಪ್ರಿಲ್ (ಹಿ.ಸ) :

ಆ್ಯಂಕರ್ : ರಾಬರ್ಟಸನ್ಪೇಟೆ ಮಾರ್ಕೆಟ್ನಿಂದ ಉರಿಗಾಂಪೇಟೆಗೆ ಹೋಗುವ ದಾರಿಯನ್ನು ಏಕಮುಖ ರಸ್ತೆಯನ್ನಾಗಿ ಮಾಡಲಾಗುವುದು. ಮಾರ್ಕೆಟ್ ಒಳಗೆ ಸಾರ್ವಜನಿಕರಿಗೆ ಅನುಕೂಲವಾಗಿ ಸಂಚಾರ ನಿಯಂತ್ರಣ ಮಾಡಲಾಗುವುದು. ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೇ ಓಡಾಡುವುದು ಕಂಡು ಬ0ದಿದ್ದು ಇನ್ನು ಮುಂದೆ ಕಡ್ಡಾಯ ವಾಗಿ ಹೆಲ್ಮೆಟ್ ಧರಿಸಬೇಕು. ಇಲ್ಲವಾದಲ್ಲಿ ದಂಡ ವಿಧಿಸಲಾಗುವುದು. ಮಾರ್ಕೆಟ್ನಲ್ಲಿ ಯಾರಾದರು ಸಾರ್ವಜನಿಕರನ್ನು ಬೆದರಿಸಿ ಹಣ ವಸೂಲಿ ಮಾಡುವುದು ಕಂಡು ಬಂದಲ್ಲಿ ಹಾಗೂ ಮಾದಕ ವಸ್ತುಗಳ ಸೇವನೆ, ಮಾರಾಟ ಮಾಡುವವರ ಬಗ್ಗೆ ಮಾಹಿತಿ ನೀಡಿ. ಮಾಹಿತಿ ನೀಡುವವರ ಬಗ್ಗೆ ಗೌಪ್ಯತೆ ಕಾಪಾಡಿ ಸಮಾಜ ಘಾತಕ ಶಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದೆಂದು ಕೆಜಿಎಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ಎಚ್ಚರಿಕೆ ನೀಡಿದರು.

ಕೆಜಿಎಫ್ ಪೊಲೀಸ್ ಜಿಲ್ಲೆಯ ರಾಬರ್ಟಸನ್ಪೇಟೆ ಮತ್ತು ಆಂಡ್ರಸನ್ಪೇಟೆ ಮಾರ್ಕೆಟ್ನಲ್ಲಿ ಸಾರ್ವಜನಿಕರ ಕುಂದು ಕೊರತೆಗಳ ಸಭೆ ನಡೆಸಿದರು.

ಸಭೆಯಲ್ಲಿ ಸಾರ್ವಜನಿಕರು ರಾಬರ್ಟಸನ್ಪೇಟೆ ಮಾರ್ಕೆಟ್ನಿಂದ ಉರಿಗಾಂಪೇಟೆಗೆ ಹೋಗುವ ದಾರಿಯಲ್ಲಿ ಸಂಚಾರ ದಟ್ಟಣೆ ಅಧಿಕವಾಗಿದ್ದು ಅದನ್ನು ಏಕಮುಖ ರಸ್ತೆಯನ್ನಾಗಿ ಮಾಡಿಕೊಡಲು ಹಾಗೂ ಮಾರ್ಕೆಟ್ ಒಳಗೆ ಸುಗಮವಾಗಿ ಸಂಚಾರ ನಿಯಂತ್ರಣ ಮಾಡಲು ಮನವಿ ಮಾಡಿದರು. ಆಂಡ್ರಸನ್ಪೇಟೆಯ ಮಾರ್ಕೆಟ್ನಲ್ಲಿ ಕೆಲವು ಪುಂಡರು ಸಾರ್ವಜನಿಕರ ಹತ್ತಿರ ಹಣವನ್ನು ಕೇಳಿ ಬೆದರಿಸುತ್ತಿದ್ದು ಇದರ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಮನವಿ ಮಾಡಿದರು.

ಸಭೆಯಲ್ಲಿ ಡಿವೈಎಸ್ಪಿ ವಿ. ಲಕ್ಷö್ಮಯ್ಯ, ಪೊಲೀಸ್ ಇನ್ಸ್ಪೆಕ್ಟರ್ ರಂಗಶಾಮಯ್ಯ ವೈ.ಆರ್, ಪಿಎಸ್ಐ ಗಳಾದ ಮಂಜುನಾಥ .ಬಿ ,ಮಹೇಶ್ ಮಾಲಿ, ಚಂದ್ರಶೇಖರ್ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande