ಬಿಜೆಪಿ ಕೈಗೊಂಬೆಯಾಗಿರುವ ಸಿಬಿಐ, ಇಡಿ, ಐಟಿ : ಅಶೋಕ ಮಂದಾಲಿ
ಪ್ರತಿ
ಫೋಟೋ


ಗದಗ, 25 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಬಿಜೆಪಿ ಕೈಗೊಂಬೆಯಾಗಿರುವ ಸಿಬಿಐ, ಇಡಿ, ಐಟಿಯಿಂದ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕೊಳ್ಳಿ ಇಟ್ಟಂತಾಗಿದೆ ಎಂದು ಗದಗ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರು ಹಾಗೂ ಗದಗ ತಾಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಅಶೋಕ ಮಂದಾಲಿ ಅವರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಇತ್ತೀಚೆಗೆ ಬಿಜೆಪಿಯ ಮುಂಚೂಣಿ ಘಟಕ ಇಡಿ ಬಿಟ್ಕಾಯಿನ್ ಅಕ್ರಮ ವಹಿವಾಟು ಪ್ರಕರಣದ ಪ್ರಮುಖ ಆರೋಪಿ ಶ್ರೀಕೃಷ್ಣ ರಮೇಶ್ ಉರುಫ್ ಶ್ರೀಕಿ ಜತೆ ಹಣಕಾಸು ವಹಿವಾಟು ನಡೆಸಿರುವ ಸಂಬಂಧ ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್ ಅವರ ಇಬ್ಬರು ಪುತ್ರರು ಮತ್ತು ಇತರರ ನಿವಾಸಗಳ ಮೇಲೆ ದಾಳಿ ನಡೆಸಿರುವುದು ಬಿಜೆಪಿಯ ಹತಾಶೆಯ ನಡೆಯಾಗಿದೆ ಎಂದು ಕಟುವಾಗಿ ಟೀಕಿಸಿದ್ದಾರೆ.

ಇದೇ ರೀತಿ 2025ರ ಜೂನ್ 11ರಂದು ಬಿಜೆಪಿಯ ಮುಂಚೂಣಿ ಘಟಕ ಇಡಿ ಬಳ್ಳಾರಿ ವಿಜಯನಗರ ಜಿಲ್ಲೆಯ ಕಾಂಗ್ರೆಸ್ ನಾಯಕರ ಮನೆ ಮೇಲೆ ದಾಳಿ ನಡೆಸಿತ್ತು. ಭ್ರಷ್ಟಾಚಾರಿ ಬಿಜೆಪಿ ಶಾಸಕರಾಗಿದ್ದ ಜನಾರ್ಧನ ರೆಡ್ಡಿಯವರನ್ನು ಅಮಾನತು ಮಾಡಿದ ನಂತರ ಗಂಗಾವತಿ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸೋಲುವ ಭೀತಿಯಿಂದ ಈ ದಾಳಿಯನ್ನು ಮಾಡಿಸಿದ್ದರು ಎಂದು ಆರೋಪಿಸಿದ್ದಾರೆ.

ಬಿಜೆಪಿಯು ಪ್ರತಿ ಪಕ್ಷಗಳನ್ನು ಮುಗಿಸಲು ಇಡಿ, ಐಟಿ, ಸಿಬಿಐಯಿಂದ ದಾಳಿ ಮಾಡಿಸುವುದು ಹೊಸತೇನಲ್ಲ. ಕಳೆದ 10 ವರ್ಷಗಳಲ್ಲಿ ನಡೆದ 5,297 ಇಡಿ ದಾಳಿಯಲ್ಲಿ ಶೇ. 95ರಷ್ಟು ಬಿಜೆಪಿಯೇತರ ಪಕ್ಷಗಳ ಮೇಲೆ ದಾಳಿ ನಡೆದಿದ್ದು, ಕೇವಲ 40 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ ಎಂದು ಉಲ್ಲೇಖಿಸಿದ್ದಾರೆ.

ಇಡಿ, ಐಟಿ ಹಾಗೂ ಸಿಬಿಐ ಕಣ್ಣಿಗೆ ಯಾಕೆ ಪ್ರತಿ ಪಕ್ಷದ ನಾಯಕರು ಮಾತ್ರತ್ರ ಕಾಣಿಸುತ್ತಾರೆ. ಬಿಜೆಪಿ ನಾಯಕರ ಮೇಲೆ ಒಂದೂ ದಾಳಿ ನಡೆಸಿಲ್ಲ ಎಂದು ಪ್ರಶ್ನಿಸಿರುವ ಅವರು 2014ರಿಂದ 2024ರ ವರೆಗೆ ದೇಶಾದ್ಯಂತ ಇಡಿ ಸುಮಾರು 25 ಪ್ರಮುಖ ನಾಯಕರ ಮೇಲೆ ದಾಳಿ ನಡೆಸಿದೆ. ಆದರೆ, ಇದರಲ್ಲಿ 23 ಜನ ಬಿಜೆಪಿ ಪಕ್ಷವನ್ನು ಸೇರಿದ್ದಾರೆ. ಮತ್ತು ಅವರ ಮೇಲಿದ್ದ ಇಡಿ ಪ್ರಕರಣ ರದ್ದಾಗಿದೆ. ಹಾಗಾದರೆ ಬಿಜೆಪಿ ಪಕ್ಷ ಸೇರಿದವರೆಲ್ಲಾ ವಾಷಿಂಗ್ ಪೌಡರ್ನಲ್ಲಿ ಕ್ಲೀನ್ ಆದ್ರಾ? ಎಂದು ತಿಳಿಸಿದ್ದಾರೆ.

2014ರಿಂದ 2022ರ ವರೆಗೆ ಸುಮಾರು 121 ರಾಜಕಾರಣಿಗಳ ಮೇಲೆ ಇಡಿ ದಾಳಿ ಮಾಡಿದ್ದಾರೆ. ಅದರಲ್ಲಿ 115 ಪ್ರತಿ ಪಕ್ಷಗಳ ನಾಯಕರ ಮೇಲೆ ನಡೆದಿದೆ. ಇಡಿ ಕಣ್ಣಿಗೆ ಕಾಣಿಸುವುದು ಕೇವಲ ಪ್ರತಿಪಕ್ಷಗಳು ಮಾತ್ರಾನಾ?. ಭ್ರಷ್ಟಾಚಾರದ ಮೂಲಕ ಅಸಂವಿಧಾನಿಕವಾಗಿ ಪ್ರತಿಪಕ್ಷಗಳ ಸರ್ಕಾರಗಳನ್ನು ಇಡಿ, ಐಟಿ, ಸಿಬಿಐ ಮೂಲಕ ಸರ್ಕಾರಗಳಿಗೆ ಕುತ್ತು ತರುತ್ತಿರುವ ಕೇಂದ್ರ ಬಿಜೆಪಿಯ ವೈಖರಿ ನೋಡಿದರೇ, ಹೇಳಿದ್ದೇ ವೇದಾಂತ ಮಾಡಿದ್ದೇ ಸಿದ್ಧಾಂತ ಎಂಬಂತೆ ಪ್ರಧಾನಿ ನರೇಂದ್ರ ಮೋದಿ ಅವರು ಹಿಟ್ಲರ್ ಆಳ್ವಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಜ್ಯಗಳ ಪ್ರತಿಪಕ್ಷದ ಪ್ರಭಾವಿ ನಾಯಕರಿಗೆ ತಮ್ಮ ಅಧಿಕಾರವನ್ನು ಬಳಸಿ ದೇಶದ ಕಾನೂನಿಗೆ ವ್ಯವಸ್ಥೆಗೆ ಅಗೌರವ ತರುತ್ತಿರುವ ಬಿಜೆಪಿಗರು.

ಸೆರೆವಾಸಕ್ಕೆ ತಳ್ಳುವ ಮೂಲಕ ಭ್ರಷ್ಟಾಚಾರದ ಮೂಲಕ ಲಕ್ಷಾಂತರ ಕೋಟಿ ರೂಪಾಯಿ ಲೂಟಿ ಹೊಡೆದು ದೇಶವನ್ನೇ ಅದಾನಿ ಕೈಗೆ ಒತ್ತೆಯಿಟ್ಟಿರುವ ಬಿಜೆಪಿಗರು ಇಂದು ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು ನೋಡಿದರೇ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಾಗುತ್ತದೆ.

ಐಟಿ, ಇಡಿ, ಸಿಬಿಐ ಸಂಸ್ಥೆಗಳು ಬಿಜೆಪಿ ಮೋರ್ಚಾಗಳಾಗಿದ್ದು ಈ ಸಂಸ್ಥೆಗಳನ್ನು ಬಿಜೆಪಿ ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದ್ದಾರೆ.

ರಾಜ್ಯಗಳ ಪ್ರತಿಪಕ್ಷದ ಪ್ರಭಾವಿ ನಾಯಕರು ತಮ್ಮ ಅಧಿಕಾರವನ್ನು ಬಳಸಿ ಸೆರೆವಾಸಕ್ಕೆ ತಳ್ಳುವ ಮೂಲಕ ದೇಶದ ಕಾನೂನಿಗೆ ವ್ಯವಸ್ಥೆಗೆ ಅಗೌರವ ತರುತ್ತಿದ್ದಾರೆ. ಉದ್ಯಮಿ ಅದಾನಿಯ ಒಂದೊಂದು ಹಗರಣಗಳು ಲಕ್ಷ ಕೋಟಿಗಳನ್ನು ದಾಟುತ್ತಿವೆ.

ಮಹಾರಾಷ್ಟ್ರ. ರಾಜಸ್ಥಾನದಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಅದಾನಿ ಕಂಪನಿಗಳು 10,000 ಕೋಟಿ ಹಗರಣ ಮಾಡಿದೆ. ಕಳೆದ 2 ವರ್ಷದಲ್ಲಿ ಅದಾನಿ ಕಂಪನಿಯಿಂದ 12,000 ಕೋಟಿ ಹಣವನ್ನು ಅಕ್ರಮವಾಗಿ ಕಳಿಸಲಾಗಿದೆ ಎಂದು ರೋಪಿಸಿದ್ದಾರೆ.

ಸಾವಿರ ಕೋಟಿಗಳ ಅವ್ಯವಹಾರಕ್ಕೆ ಲೆಕ್ಕವೇ ಇಲ್ಲವಾಗಿದೆ. ಈ ಬಗ್ಗೆ ಕಾಂಗ್ರೆಸ್ ಪಕ್ಷ ಕೇಳಿರುವ ನೂರು ಪ್ರಶ್ನೆಗಳಲ್ಲಿ ಒಂದಕ್ಕೂ ಉತ್ತರ ಹೇಳಲು ಬಿಜೆಪಿಯ ನಾಯಕರಾಗಲಿ, ಪ್ರಧಾನಿ ಮೋದಿಯವರಾಗಲಿ ಈವರೆಗೆ ಉತ್ತರಿಸಿಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವ ಜನಾರ್ದನ ರೆಡ್ಡಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕೃಷ್ಣಯ್ಯ ಶೆಟ್ಟಿ, ಮಾಜಿ ಶಾಸಕ ಸಂಪಂಗಿಯಿಂದ ಹಿಡಿದು ಮಾಡಾಳು ವಿರೂಪಾಕ್ಷಪ್ಪವರೆಗೆ ಬಿಜೆಪಿ ನಾಯಕರು ಭ್ರಷ್ಟಾಚಾರ ಆರೋಪದಲ್ಲಿ ಜೈಲು ಸೇರಿದವರಾಗಿದ್ದಾರೆ.

ಗುತ್ತಿಗೆದಾರರೊಬ್ಬರನ್ನು ಹಣಕ್ಕಾಗಿ ಪೀಡಿಸಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ್ದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಮಾಜಿ ಸಚಿವ, ಕಾಮುಕ ಮುನಿರತ್ನ, ಡಾ. ಸುಧಾಕರ್ ಕೆ.ಎಸ್. ಈಶ್ವರಪ್ಪ ಮತ್ತು ಬಿ.ಸಿ. ಪಾಟೀಲ ಮೇಲೆ ಶೇ. 40ರಷ್ಟು ಕಮಿಷನ್ ಆರೋಪ ಇದೆ. ಬಿಟ್ ಕಾಯಿನ್ ಹಗರಣದಲ್ಲಿ ಬಸವರಾಜ ಬೊಮ್ಮಾಯಿ ಮತ್ತು ನಳಿನ್ ಕುಮಾರ್ ಕಟೀಲ್ ಹೆಸರು ಕೇಳಿ ಬಂದಿತ್ತು. ಪಿಎಸ್ಐ ನೇಮಕಾತಿ ಹಗರಣದಲ್ಲಿ ಡಾ. ಅಶ್ವತ್ಥನಾರಾಯಣ, ಬಿ.ವೈ. ವಿಜಯೇಂದ್ರ ಮತ್ತು ಆರಗ ಜ್ಞಾನೇಂದ್ರ ಶಾಮೀಲಾಗಿರುವ ಆರೋಪವಿದೆ. ಚುನಾವಣಾ ಟಿಕೆಟ್ ವಂಚನೆ ಪ್ರಕರಣದಲ್ಲಿ ಬಿ.ಎಲ್. ಸಂತೋಷ್, ಸುನೀಲ್ ಕುಮಾರ್ ಕಾರ್ಕಳ ಮತ್ತು ಸಿ.ಟಿ. ರವಿ ಹೆಸರುಗಳನ್ನು ಈ ಹಿಂದೆ ಆರೋಪಿಗಳೇ ಹೇಳಿದ್ದರು.

ಬಿಜೆಪಿಯ ರಾಜಕೀಯ ಪ್ರೇರಿತ ಇಡಿ ಷಡ್ಯಂತ್ರಕ್ಕೆ ಕಪಾಳ ಮೋಕ್ಷ ಮಾಡಿದ ಸುಪ್ರೀಂ ಕೋರ್ಟ್ :

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಾಗೂ ಕುಟುಂಬದ ಹೆಸರಿಗೆ ಮಸಿ ಬಳಿಯಲು ಮುಡಾ ಪ್ರಕರಣದ ಮುಖಾಂತರ ಚಾರಿತ್ರ್ಯ ಹರಣ ಮಾಡಲು ಹೊರಟ ಬಿಜೆಪಿಗೆ ಸುಪ್ರೀಂ ಕೋರ್ಟ್ ಕಪಾಳ ಮೋಕ್ಷ ಮಾಡಿದೆ.

ಮೈಸೂರು ಅಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ನೀಡಿದ್ದ ನೋಟಿಸ್ ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. 2019-2023ರಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ 2021ರಲ್ಲಿ ತಾನೇ ನೀಡಿದ್ದ 14 ಮುಡಾ ಸೈಟುಗಳನ್ನು ಅಕ್ರಮವಾಗಿ ಪಡೆದಿದ್ದಾರೆಂದು ಸುಳ್ಳು ಆರೋಪ ಮಾಡಿ ಸರ್ಕಾರವನ್ನು ಗವರ್ನರ್ ಮುಖಾಂತರ ಬೀಳಿಸಲು ಪ್ರಯತ್ನಪಟ್ಟ ಬಿಜೆಪಿಗೆ ಮುಖಭಂಗವಾಗಿರುವುದನ್ನು ಬಿಜೆಪಿ ಮರೆಯಬಾರದು ಎಂದು ತಿಳಿಸಿದ್ದಾರೆ.

ಸಂಸತ್ತಿನಲ್ಲಿ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ತಿಳಿಸಿರುವ ಪ್ರಕಾರ ಕಳೆದ 10 ವರ್ಷದಲ್ಲಿ (2015ರಿಂದ 2025ರ ಫೆಬ್ರವರಿವರೆಗೆ) ಸಂಸದರ, ಶಾಸಕರ ಹಾಗೂ ರಾಜಕಾರಣಿಗಳ ವಿರುದ್ಧ ಇಡಿ ದಾಖಲು ಮಾಡಿದ ಒಟ್ಟು 193 ಪ್ರಕರಣಗಳಲ್ಲಿ ಸಾಬೀತಾಗಿರುವುದು 2 ಪ್ರಕರಣಗಳಲ್ಲಿ ಮಾತ್ರ. ಈ ವರದಿಯು ಬಿಜೆಪಿ ಇಡಿಯನ್ನು ಕೈಗೊಂಬೆಯನ್ನಾಗಿ ಮಾಡಿಕೊಂಡು ರಾಜಕೀಯ ವಿರೋಧಿಗಳನ್ನು ಹತ್ತಿಕಲು ಇಡಿಯನ್ನು ದುರ್ಬಳಕೆ ಮಾಡುತ್ತಿರುವುದನ್ನು ಬಯಲು ಮಾಡಿದೆ ಎಂದು ತಿಳಿಸಿದ್ದಾರೆ.

ಚುನಾವಣಾ ಬಾಂಡ್ ಭ್ರಷ್ಟಾಚಾರದಲ್ಲಿ ಸ್ವತಃ ಪ್ರಧಾನಿಗಳ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೇಲೆ ಆರೋಪ ಬಂದಿದೆ. ಮತ್ತು ಸುಪ್ರೀಂ ಕೋರ್ಟ್ ಕೂಡ ಛೀಮಾರಿ ಹಾಕಿದೆ. ಆದರೂ ಇಡಿ ಯಾಕೆ ನಿದ್ದೆ ಮಾಡಿ ಕುಳಿತಿದೆ. ಕರ್ನಾಟಕ ಬಿಜೆಪಿ ಮಾಜಿ ಶಾಸಕರ ಮನೆಯಲ್ಲಿ 8 ಕೋಟಿ ಹಣ ಸಿಕ್ಕಿತ್ತು ಮತ್ತು ಆರೋಪ ಸಾಬೀತಾಗಿದ್ದರೂ ಯಾಕೆ ಇಡಿ ಸುಮ್ಮನೆ ಕುಳಿತಿದೆ ಎಂದು ಅಶೋಕ ಮಂದಾಲಿ ಪ್ರಶ್ನಿಸಿದ್ದಾರೆ.

ಬಿಜೆಪಿಯು ಪ್ರತಿಪಕ್ಷಗಳನ್ನು ಮುಗಿಸಲು ಇಡಿ, ಐಟಿ, ಸಿಬಿಐಯಿಂದ ದಾಳಿ ಮಾಡಿಸುವುದು ಹೊಸತೇನಲ್ಲ. 10 ವರ್ಷಗಳಲ್ಲಿ ನಡೆದ 5,297 ಇಡಿ ದಾಳಿಯಲ್ಲಿ ಶೇ. 95ರಷ್ಟು ಬಿಜೆಪಿಯೇತರ ಪಕ್ಷಗಳ ಮೇಲೆ ದಾಳಿ ನಡೆದಿದ್ದು ಕೇವಲ 40 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ. 2014ರಿಂದ 2024ರ ವರೆಗೆ ದೇಶಾದ್ಯಂತ ಇಡಿ ಸುಮಾರು 25 ಪ್ರಮುಖ ನಾಯಕರ ಮೇಲೆ ದಾಳಿ ನಡೆಸಿದೆ ಆದರೆ, ಅದರಲ್ಲಿ 23 ಜನ ಬಿಜೆಪಿ ಪಕ್ಷವನ್ನು ಸೇರಿದ್ದಾರೆ. ಮತ್ತು ಅವರ ಮೇಲಿದ್ದ ಇಡಿ ಪ್ರಕರಣ ಸ್ವಾಪ್ ಆಗಿವೆ. ಹಾಗಾದರೆ ಬಿಜೆಪಿ ಪಕ್ಷ ಸೇರಿದವರೆಲ್ಲಾ ವಾಷಿಂಗ್ ಪೌಡರ್ನಲ್ಲಿ ಕ್ಲೀನ್ ಅದ್ರಾ?

ಹಿಂದಿನ ಬಿಜೆಪಿ ಸರ್ಕಾರ 1 ಲಕ್ಷ ಕೋಟಿಗೂ ಹೆಚ್ಚು ಹಗರಣ ಮಾಡಿ ಚುನಾವಣೆಯಲ್ಲಿ ಜನರಿಂದ ತಿರಸ್ಕಾರಗೊಂಡರು ಸುಳ್ಳು ಆರೋಪ ಮಾಡುತ್ತಿರುವ ಬಿಜೆಪಿ ತನ್ನ ಹಗರಣಗಳ ಬಗ್ಗೆ ಮೆಲುಕು ಹಾಕಬೇಕಿದೆ. ರಾಜಕೀಯ ವೈರಿಗಳನ್ನು ಸಿದ್ದರಾಮಯ್ಯ ಅವರು ತಮ್ಮ ವ್ಯಕ್ತಿತ್ವದಿಂದಲೇ ಸದೆಬಡಿದಿದ್ದಾರೆ. ಆದರೆ, ನಾನು ಕ್ಲೀನ್ ಎಂದು ಸದಾ ಹೇಳುವ ಕುಮಾರಸ್ವಾಮಿ ಅವರು 450 ಎಕರೆ ಜಾಗದ ವಿಚಾರವಾಗಿ ಎಫ್ಐಆರ್ ಲೋಕಾಯುಕ್ತದಲ್ಲಿ ತನಿಖೆ ನಡೆಯುತ್ತಿದ್ದು, ತಾವು ರಾಜೀನಾಮೆ ಕೊಡುವುದು ಯಾವಾಗ ಎಂದು ಪ್ರಶ್ನಿಸಿದ್ದಾರೆ.

ಚುನಾವಣೆಗಾಗಿ ಯಾವ ಪಕ್ಷ ಹಣ ದೋಚುವುದರಲ್ಲಿ ತೊಡಗಿದೆ ಎನ್ನುವುದು ಚುನಾವಣಾ ಬಾಂಡ್ಗಳ ವಿವರವೇ ಸಾಕ್ಷಿಯಾಗಿದೆ. ಮಾರ್ಚ್ 2018ರಿಂದ ಜನವರಿ 2023ರ ವರೆಗೆ 12,008 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್ಗಳು ಮಾರಾಟವಾಗಿದ್ದು, ಅದರಲ್ಲಿ ಬಿಜೆಪಿಗೆ ಸೇರಿರುವ ಬಾಂಡ್ಗಳ ಒಟ್ಟು ಮೌಲ್ಯ 5,272 ಕೋಟಿ ರೂಪಾಯಿ ಆಗಿದೆ. ಈ ಹಣವನ್ನು ಉದ್ಯಮಿಗಳು ಸ್ವಯಿಚ್ಚೆಯಿಂದ ನೀಡಿದರೇ? ಇಲ್ಲವೇ ಬ್ಲಾಕ್ ಮೇಲ್ ನಡೆಸಲಾಗಿತ್ತೇ? ಎನ್ನುವುದನ್ನು ಅವರೇ ಬಿಜೆಪಿಗರೇ ಸ್ಪಷ್ಟಪಡಿಸಬೇಕು.

ಜೂನ್ 1, 2022, ಬುಧವಾರ, ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದ್ದ ಬಿಜೆಪಿ. 29 ಮೇ 2022ರಂದು ಇಡಿ ಅಧಿಕಾರಿಗಳು ಹವಾಲಾ ವಹಿವಾಟಿಗೆ ಸಂಬಂಧಿಸಿದ ಪ್ರಕರಣದಲ್ಲಿ ದೆಹಲಿ ಸಚಿವ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಸತ್ಯೇಂದ್ರ ಜೈನ್ ಅವರನ್ನು ಬಂಧಿಸಿದರು. ದೆಹಲಿ ಸಿಎಂ ಆಗಿದ್ದ ಅರವಿಂದ್ ಕೇಜ್ರವಾಲ್ ಅವರನ್ನು ಕೇಂದ್ರ ಬಿಜೆಪಿ ರಾಜೀನಾಮೆ ಕೊಡಿಸಿತು. ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಪಕ್ಷಾಂತರ ಮಾಡುವವರು ಈ ದಾಳಿಗೆ ಭಯ ಪಡದೆ ಬಿಜೆಪಿ ರಕ್ಷಾ ಕವಚದಲ್ಲಿ ನಿಶ್ಚಿಂತೆಯಿಂದ ನಿದ್ದೆ ಮಾಡುತ್ತಿದ್ದಾರೆ.

ತಮಿಳುನಾಡು ಚುನಾವಣೆಗೆ 4 ದಿನದ ಮೊದಲು ಅದಾಯ ತೆರಿಗೆ ಇಲಾಖೆ ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಅವರ ಪುತ್ರಿ ಸೆಂತಾಮರೈ ಅವರ ಮನೆ ಮೇಲೆ ದಾಳಿ ನಡೆಸಿತ್ತು. 2021 ಫೆಬ್ರವರಿಯಲ್ಲಿ ಪಶ್ಚಿಮ ಬಂಗಾಳದ 8 ಹಂತದ ಚುನಾವಣೆಯ ಮೊದಲ ತಿಂಗಳ ಮೊದಲು ಸಿಬಿಐ ತೃಣಮೂಲ ಕಾಂಗ್ರೆಸ್ ಲೋಕಸಭಾ ಸಂಸದ ಅಭಿಷೇಕ್ ಬ್ಯಾನರ್ಜಿ ಕಲ್ಲಿದ್ದಲು ಕಳ್ಳತನದ ವರದಿ ನೀಡಿ ದಾಳಿ ಮಾಡಿದರು. 2019ರ ಸೆಪ್ಟೆಂಬರ್ ನಲ್ಲಿ ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆಗೆ ಒಂದು ತಿಂಗಳ ಮೊದಲು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಮತ್ತು ಅವರ ಸೋದರಳಿಯ ಅಜೀತ್ ಪವಾರ್ ವಿರುದ್ಧ ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕ್ಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿದರು. ಮಾರ್ಚ್ 15 ರಂದು ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ಪ್ರಚಾರದ ಸಮಯದಲ್ಲಿ ಈಕೋರ್ ಗ್ರೂಫ್ ಆಫ್ ಕಂಪನೀಸ್ಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ದಾಖಲಾದ 2014ರ ಪೂಂಜಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮಮತಾ ಬ್ಯಾಮರ್ಜಿ ಅವರ ಆಪ್ತ ಸಹಾಯಕ ಪಾರ್ಥ ಚಟರ್ಜಿಗೆ ಸಮನ್ಸ್ ನೀಡಲಾಗಿತ್ತು. ಮಾರ್ಚ್ 16ರಂದು ಕಲ್ಲಿದ್ದಲು ಕಳ್ಳತನ ಪ್ರಕರಣದ ಹಣ ವರ್ಗಾವಣೆಗೆ ಸಂಬಂದಿಸಿದಂತೆ ಟಿಎಂಸಿ ಯುವ ನಾಯಕ ವಿನಯ್ ಮಿಶ್ರಾ ಅವರ ಸಹೋದರ ವಿಕಾಸ್ ಮಿಶ್ರಾರವರನ್ನು ಇಡಿ ಬಂಧಿಸಿತು. ಬಿಜೆಪಿ ಸೇರಿದ ನಾಯಕರ ವಿರುದ್ಧ ಇರುವ ಎಲ್ಲ ದಾಳಿ ವರದಿಗಳನ್ನು ಕಾಣೆ ಮಾಡಿ, ಭ್ರಷ್ಟರಿಗೆ ರಕ್ಷಣೆ ನೀಡುತ್ತಿರುವ ಬಿಜೆಪಿ 2017 ರಲ್ಲಿ ಟಿಎಂಸಿಯಿಂದ ಬಿಜೆಪಿಗೆ ಬದಲಾದ ಶಾರದಾ ಹಗರಣದ ಪ್ರಮುಖ ಆರೋಪಿ ಮುಕುಲ್ ರಾಯ್ ವಿರುದ್ಧದ ತನಿಖೆ ಅಮೆ ಗತಿಯಲ್ಲಿ ಸಾಗಿದೆ.

2020ರ ಡಿಸೆಂಬರ್ನಲ್ಲಿ ಟಿಎಂಸಿಯಿಂದ ಬಿಜೆಪಿಗೆ ಸೇರ್ಪಡೆಯಾದ ಸುವೇಂದು ಅಧಿಕಾರಿ ಮತ್ತು 2019ರ ಆಗಸ್ಟ್ನಲ್ಲಿ ಶಾರದಾ ಚಿಟ್ಫಂಡ್ ಹಗರಣ ಮತ್ತು ನಾರದ ಕುಟುಕು ಪ್ರಕರಣಗಳಲ್ಲಿ ಸೋವನ್ ಚಟರ್ಜಿ ವಿರುದ್ಧದ ತನಿಖೆಗಳು ಸ್ಥಗಿತಗೊಂಡಿವೆ.

ನವೆಂಬರ್ 2014 ರಲ್ಲಿ ಸಿಬಿಐ ಶಾರದಾ ಹಗರಣದಲ್ಲಿ ಮಾಜಿ ಕಾಂಗ್ರೆಸ್ ನಾಯಕ ಹಿಮಂತ ಬಿಸ್ವಾ ಶರ್ಮಾ ಅವರನ್ನು ಪ್ರಶ್ನಿಸಿದ್ದು, ನಂತರ ಅವರು ಆಗಸ್ಟ್ 2015ರಲ್ಲಿ ಶರ್ಮಾ ಬಿಜೆಪಿಗೆ ಸೇರಿದರು. ಮತ್ತು ಅಂದಿನಿಂದ ಅವರ ವಿರುದ್ಧದ ತನಿಖೆ ನಡೆಯಲೇ ಇಲ್ಲ.

2015 ರಿಂದ ದೇಶದಲ್ಲಿ ನಡೆದ ಇಡಿ, ಐಟಿ ಮತ್ತು ಸಿಬಿಐ ದಾಳಿಗಳು :

ಮೇ 25, 2015: ಸಚಿನ್ ಪೈಲಟ್, ಅಶೋಕ್ ಗೆಹೋಟ್

ಜುಲೈ 27, 2016: ಶಾಮನೂರು ಶಿವಶಂಕರಪ್ಪ

ನವೆಂಬರ್ 14, 2016: ಬಿ. ಪ್ರಕಾಶ್

ಜನವರಿ 14, 2017: ರಮೇಶ್ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳ್ಳರ್

ಫೆಬ್ರುವರಿ 11, 2017: ಎಂ.ಟಿ.ಬಿ. ನಾಗರಾಜ್

ಮೇ 1, 2017: ಬಾಬಾ ಸಿದ್ಧಿಕ್

ಅಗಸ್ಟ್ 02, 2017: ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ. ಸುರೇಶ್

ಏಪ್ರೀಲ್ 16, 2018: ಶಾಸಕ ಬಿ. ಶಿವಣ್ಣ

ಏಪ್ರೀಲ್ 29, 2018: ಎನ್. ಚೆಲುವರಾಯಸ್ವಾಮಿ ಬೆಂಬಲಿಗರು

ಏಪ್ರೀಲ್ 17, 2018: ಸುಧೀರ್ ಕುಮಾರ್ ಮುರಳ್ಳಿ

ಏಪ್ರೀಲ್ 29, 2018: ಎನ್. ಚೆಲುವರಾಯಸ್ವಾಮಿ

ಮೇ 08, 2018: ಭೀಮಣ್ಣ ನಾಯ್ಕ

ಮೇ 08, 2018: ರಘು ಆಚಾರ್

ಜನವರಿ 25, 2019: ಭೂಪಿಂದರ್ ಸಿಂಗ್ ಹೂಡಾ

ನವೆಂಬರ್ 1, 2012: ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ

01 ಎಪ್ರೀಲ್ 2015: ಕಾರ್ತಿ ಚಿದಂಬರಂ

ಅಗಸ್ಟ್ 25, 2015: ಕಾರ್ತಿ ಚಿದಂಬರಂ

01 ಸೆಪ್ಟೆಂಬರ್ 2015: ವರ್ಭದ್ರ ಸಿಂಗ್

01 ಏಪ್ರೀಲ್ 2016: ಹರೀಶ್ ರಾವತ್

ಸೆಪ್ಟೆಂಬರ್ 21, 2015: ಮಾಯಾವತಿ

01 ಡಿಸೆಂಬರ್ 2015: ಅರವಿಂದ್ ಕೇಜ್ರಿವಾಲ್

01 ಡಿಸೆಂಬರ್ 2015: ಪಿ. ಚಿದಂಬರಂ

01 ಏಪ್ರೀಲ್ 2017: ಶೈಲೇಶ್ ಪಾಟೀಲ್

ಮೇ-ಜೂನ್ 2017: ಬಾಬಾ ಸಿದ್ದಿಕ್

ಮೇ 16, 2017: ಲಾಲು ಪ್ರದಾನ್ ಯಾದವ್

ಜನವರಿ 05, 2019: ಅಖಿಲೇಶ್ ಯಾದವ್

ಮಾರ್ಚ್ 8, 2019: ನರೇಶ್ ಬಲ್ಯಾನ್

ಮಾರ್ಚ್ 14, 2019: ಮಾಯಾವತಿ

24 ಅಕ್ಟೋಬರ್ 2018: ವಿವಿ ಮಿನರಲ್ಸ್

20 ಡಿಸೆಂಬರ್ 2016: ರಾಮ್ ಮೋಹನ್ ರಾವ್

09 ನವೆಂಬರ್ 2017: ಶಶಿಕಲಾ

04 ಸೆಪ್ಟೆಂಬರ್ 2018: ವಿಜಯ ಭಾಸ್ಕರ್

05 ಜುಲೈ 2018: ಕ್ರಿಸ್ಟಿ ಗ್ರೂಪ್

18 ಸೆಪ್ಟೆಂಬರ್ 2018: ಸಂಸದ ಪೊಂಗುಲೇಟಿ ಶ್ರೀನಿವಾಸ ರೆಡ್ಡಿ

11 ಅಗಸ್ಟ್ 2018: ಮುದ್ದಸಾನಿ ಸಹೋದರ ರೆಡ್ಡಿ

12 ಅಕ್ಟೋಬರ್ 2018: ಸಿಎಂ ರಮೇಶ್

05 ಅಕ್ಟೋಬರ್ 2018: ನಾರಾಯಣ ಶಿಕ್ಷಣ ಸಂಸ್ಥೆಗಳು

05 ಅಕ್ಟೋಬರ್ 2018 : ಬೀಡ ಮಸ್ತಾನ್ ರಾವ್

05 ಅಕ್ಟೋಬರ್ 2018: ಪೋತುಲ ರಾಮರಾವ್

03 ಮಾರ್ಚ್ 2019: ಐಟಿ ಗ್ರಿಡ್ ಪ್ರೈವೇಟ್ ಲಿಮಿಟೆಡ್

12 ಡಿಸೆಂಬರ್ 2018: ಸೋವನ್ ಚಟರ್ಜಿ ಬೈಸಾಖಿ ಬ್ಯಾನರ್ಜಿ

11 ಜನವರಿ 2019: ಮಮತಾ ಬ್ಯಾನರ್ಜಿ ಅವರ ಅಪ್ತ ಸಹಾಯಕ ಮಾಣಿಕ್ ಮಜುಂದಾರ್

07 ಜೂನ್ 2017: ಲಾಲು ಯಾದವ್ ಮತ್ತು ಅವರ ಪುತ್ರ ತೇಜಸ್ವಿ

ಬಾಕ್ಸ್

ಕರ್ನಾಟಕದಲ್ಲಿ ನಡೆದಿರುವ ಪ್ರಮುಖ ಐಟಿ, ಇಡಿ ಸಿಬಿಐ ದಾಳಿಗಳು :

1. 9ನೇ ಫೆಬ್ರವರಿ, 2018: ಎಂಟಿಬಿ ನಾಗರಾಜ್, ಕಾಂಗ್ರೆಸ್ ಶಾಸಕ,

2. 16ನೇ ಏಪ್ರಿಲ್, 2018: ಬಿ. ಶಿವಣ್ಣ, ಕಾಂಗ್ರೆಸ್ ಶಾಸಕ.

3. 17ನೇ ಏಪ್ರಿಲ್ 2018: ಸುಧೀರ್ ಕುಮಾರ್ ಮುರೋಳಿ, ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತು ಪಕ್ಷದ ಮುಖಂಡರಾದ ಸುಬ್ರಹ್ಮಣ್ಯ ಶೆಟ್ಟಿ, ಎಚ್ ಎಂ ಸತೀಶ್ ಮತ್ತು ರವಿ ಕುಕ್ಕಡಿಗೆ

4. 29ನೇ ಏಪ್ರಿಲ್, 2018: ಚೆಲುವರಾಯ ಸ್ವಾಮಿ, ನಾಗಮಂಗಲದ ಅಭ್ಯರ್ಥಿ

5. 2 ನೇ ಮೇ 2018: ಭೀಮಣ್ಣ ನಾಯ್ಕ, ಶಿರಸಿ-ಸಿದ್ದಾಪುರದ ಕಾಂಗ್ರೆಸ್ ಅಭ್ಯರ್ಥಿ, ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಸಮಿತಿ, ಅವರನ್ನು 48 ಗಂಟೆಗಳಿಗೂ ಹೆಚ್ಚು ಕಾಲ ಗೃಹಬಂಧನದಲ್ಲಿ ಇರಿಸಲಾಗಿತ್ತು

6. 4 ನೇ ಮೇ 2018: ಶ್ರೀ ಹೇಮಂತ್ ಕುಮಾರ್, ಅಧ್ಯಕ್ಷರು, ನಗರ ಪುರಸಭೆ, ಹೊಸಕೋಟೆ ಮತ್ತು ಶ್ರೀ ಅಶೋಕ್, ಅಧ್ಯಕ್ಷರು, ಅಧ್ಯಕ್ಷರು, ಗ್ರಾಮ ಪಂಚಾಯತ್

ಮೇ 8, 2018 ರಿಂದ ಈ ಕೆಳಗಿನ ಕಾಂಗ್ರೆಸ್ ಅಭ್ಯರ್ಥಿಗಳು ಮತ್ತು/ ಅವರ ಸಿಬ್ಬಂದಿ/ ಬೆಂಬಲಗಾರರ ಮೇಲೆ ದಾಳಿ ಮಾಡಲಾಗಿದೆ:

1. ಶ್ರೀ ಅಶೋಕ್ ಖೇಣಿ, ಬೀದರ್ ಅಭ್ಯರ್ಥಿ.

2. ಶ್ರೀ ಸತೀಶ್ ಸೈಲ್, ಕಾರವಾರದ ಅಭ್ಯರ್ಥಿ.

3. ಶ್ರೀ ಪಾಟೀಲ, ಗದಗ ಅಭ್ಯರ್ಥಿ.

4. ಆರ್. ವಿ. ದೇಶಪಾಂಡೆ, ಹಳಿಯಾಳ ಅಭ್ಯರ್ಥಿ,

5. ಶ್ರೀ ರಾಮಂತ್ ರೈ, ಬಂಟ್ವಾಳದ ಅಭ್ಯರ್ಥಿ.

6. ಶ್ರೀ ಆನಂದ ನಿಟ್ಟುಸಿರು, ಹೊಸಪೇಟೆಯ ಅಭ್ಯರ್ಥಿ.

7. ಶ್ರೀ ವಿನಯ್ ಕುಮಾರ್ ಸೊರಕೆ, ಕಾಪು ಅಭ್ಯರ್ಥಿ,

2023 ರಿಂದ 2024 ರವರೆಗೆ ದೇಶದಲ್ಲಿ ಕೇಂದ್ರ ಬಿಜೆಪಿ ನಡೆಸಿದ ಇಡಿ, ಐಟಿ, ಸಿಬಿಐ ದಾಳಿಗಳು

• ಜನವರಿ 9, 2023: ಆಹಾರ ಧಾನ್ಯ ಹಗರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಮಾಜಿ ಸಚಿವ ಭರತ್ ಭೂಷಣ್ ಅಶು ಅವರ ನಿವಾಸಗಳ ಮೇಲೆ ಸಿಬಿಐ ದಾಳಿ.

• ಜನವರಿ 13, 2023: ಆಪಾದಿತ ₹100 ಕೋಟಿ ವಂಚನೆಗೆ ಸಂಬಂಧಿಸಿದಂತೆ ಕೇರಳದಲ್ಲಿ ಸಿಪಿಐ(ಎಂ) ಶಾಸಕ ಎಸಿ ಮೊಯ್ದಿನ್ ಅವರ ಅವರಣದ ಮೇಲೆ ಇಆ ದಾಳಿ.

• ಫೆಬ್ರವರಿ 2, 2023: ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿತು.

• ಫೆಬ್ರವರಿ 8, 2023: ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಯಾಣ ಶಾಸಕ ಗೋಪಾಲ್ ಕಾಂಡ ಅವರ ನಿವಾಸಗಳ ಮೇಲೆ ಇಆ ದಾಳಿ.

• ಮಾರ್ಚ್ 7, 2023: ತೆಲಂಗಾಣ ಕಂದಾಯ ಸಚಿವ ಪಿ ಶ್ರೀನಿವಾಸ ರೆಡ್ಡಿ ಅವರ ನಿವಾಸಗಳ ಮೇಲೆ ಐಟಿ ಇಲಾಖೆ ದಾಳಿ.

• ಏಪ್ರಿಲ್ 6, 2023: ದೆಹಲಿಯಲ್ಲಿ ಎಎಪಿ ಶಾಸಕ ಅಮಾನತುಲ್ಲಾ ಖಾನ್ ಅವರ ಆವರಣದ ಮೇಲೆ ಇಡಿ ದಾಳಿ.

• ಮೇ 12, 2023: ಪಡಿತರ ವಿತರಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸಚಿವ ಜ್ಯೋತಿಪ್ರಿಯೋ ಮಲ್ಲಿಕ್ ಅವರ ನಿವಾಸಗಳ ಮೇಲೆ ಸಿಬಿಐ ದಾಳಿ,

• ಜೂನ್ 2, 2023: ಜೈಪುರ ಮತ್ತು ಸಿಕರ್ನಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ದೋಟಸಾರ ಅವರ ನಿವಾಸಗಳ ಮೇಲೆ ಇಡಿ ದಾಳಿ.

• ಜುಲೈ 12, 2023: ಜಾರ್ಖಂಡ್ ಸಚಿವ ರಾಮೇಶ್ವರ್ ಓರಾನ್ ಅವರ ಪುತ್ರ ರೋಹಿತ್ ಓರಾನ್ ಅವರ ಆವರಣದ ಮೇಲೆ ಇಡಿ ದಾಳಿ.

• ಆಗಸ್ಟ್ 22, 2023: ಎಎಪಿ ನಾಯಕ ರಾಜ್ ಕುಮಾರ್ ಆನಂದ್ ಅವರ ನಿವಾಸಗಳ ಮೇಲೆ ಇಡಿ ದಾಳಿ

• ಜನವರಿ 10, 2024: ಮದ್ಯದ ಹಗರಣಕ್ಕೆ ಸಂಬಂಧಿಸಿದಂತೆ ಎಎಪಿ ಶಾಸಕ ಕುಲವಂತ್ ಸಿಂಗ್ ಅವರ ಆವರಣದ ಮೇಲೆ ಇಡಿ ದಾಳಿ.

• ಫೆಬ್ರವರಿ 2, 2024: ಅಬಕಾರಿ ಹಗರಣದಲ್ಲಿ ಮನೀಶ್ ಸಿಸೋಡಿಯಾ ವಿರುದ್ಧ ಸಿಬಿಐ ಚಾರ್ಜ್ ಶೀಟ್ ಸಲ್ಲಿಸಿತು.

• ಮಾರ್ಚ್ 5, 2024: ಜಾರ್ಖಂಡ್ ಮಾಜಿ ಸಚಿವ ಕೆ ಎನ್ ತ್ರಿಪಾಠಿ ಅವರ ನಿವಾಸಗಳ ಮೇಲೆ ಐಟಿ ಇಲಾಖೆ ದಾಳಿ.

• ಏಪ್ರಿಲ್ 10, 2024: ತೆಲಂಗಾಣ ಶಾಸಕ ತಾಟಿ ವೆಂಕಟೇಶ್ವರಲು ಅವರ ಆವರಣದ ಮೇಲೆ ಇಆ ದಾಳಿ.

• ಮೇ 20, 2024: ಹರಿಯಾಣದ ಮಾಜಿ ಸಚಿವೆ ಸಾವಿತ್ರಿ ಜಿಂದಾಲ್ ಅವರ ನಿವಾಸಗಳ ಮೇಲೆ ಸಿಬಿಐ ದಾಳಿ.

• ಜೂನ್ 17, 2024: ಎಎಪಿ ಸಂಸದ ಸಂಜಯ್ ಸಿಂಗ್ ಅವರ ಅವರಣದ ಮೇಲೆ ಇಡಿ ದಾಳಿ.

• ಆಗಸ್ಟ್ 22, 2024: ಇಡಿ ದಾಳಿ ನಡೆಸಲು ಯೋಜಿಸಿದೆ ಎಂದು ರಾಹುಲ್ ಗಾಂಧಿ ಹೇಳಿಕೊಂಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande