ಹೆಸರಘಟ್ಟದಲ್ಲಿ ಹಕ್ಕಿಜ್ವರ ನಿಯಂತ್ರಣ ಯಶಸ್ವಿ : ಮಾನವರಲ್ಲಿ ಸೋಂಕಿಲ್ಲ
ಬೆಂಗಳೂರು, 25 ಏಪ್ರಿಲ್ (ಹಿ.ಸ.) : ಆ್ಯಂಕರ್ : ಹೆಸರಘಟ್ಟದಲ್ಲಿ ಪತ್ತೆಯಾಗಿದ್ದ H5N1 ಹಕ್ಕಿಜ್ವರ ಹರಡುವಿಕೆಯನ್ನು ತಡೆಯುವಲ್ಲಿ ರಾಜ್ಯ ಆರೋಗ್ಯ ಮತ್ತು ಪಶುಪಾಲನಾ ಇಲಾಖೆಗಳ ಜಂಟಿ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ. ಹೆಸರಘಟ್ಟದ ರಾಜ್ಯ ಕೋಳಿ ಸಾಕಾಣಿಕೆ ತರಬೇತಿ
ಹೆಸರಘಟ್ಟದಲ್ಲಿ ಹಕ್ಕಿಜ್ವರ ನಿಯಂತ್ರಣ ಯಶಸ್ವಿ : ಮಾನವರಲ್ಲಿ ಸೋಂಕಿಲ್ಲ


ಬೆಂಗಳೂರು, 25 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಹೆಸರಘಟ್ಟದಲ್ಲಿ ಪತ್ತೆಯಾಗಿದ್ದ H5N1 ಹಕ್ಕಿಜ್ವರ ಹರಡುವಿಕೆಯನ್ನು ತಡೆಯುವಲ್ಲಿ ರಾಜ್ಯ ಆರೋಗ್ಯ ಮತ್ತು ಪಶುಪಾಲನಾ ಇಲಾಖೆಗಳ ಜಂಟಿ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

ಹೆಸರಘಟ್ಟದ ರಾಜ್ಯ ಕೋಳಿ ಸಾಕಾಣಿಕೆ ತರಬೇತಿ ಕೇಂದ್ರದಲ್ಲಿ ಸೋಂಕು ಪತ್ತೆಯಾದ ಹಿನ್ನೆಲೆ 10 ದಿನಗಳ ಕಾಲ ತೀವ್ರ ನಿಗಾವಹಿಸುವ ಕಾರ್ಯ ಕೈಗೊಳ್ಳಲಾಗಿತ್ತು. ಈ ಅವಧಿಯಲ್ಲಿ ಸೋಂಕಿತ ಪ್ರದೇಶದ ಸುತ್ತಮುತ್ತಲಿನ 22 ಗ್ರಾಮಗಳ 28,172 ಜನರನ್ನು ತಪಾಸಣೆ ಮಾಡಲಾಗಿದ್ದು, ಇದುವರೆಗೆ ಯಾವುದೇ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿಲ್ಲ. ಕ್ವಾರಂಟೈನ್ನಲ್ಲಿದ್ದ ಸಿಬ್ಬಂದಿಗಳ ವರದಿಯೂ ನೆಗೆಟಿವ್ ಬಂದಿರುವುದು ಆತಂಕ ಕಡಿಮೆಯಾಗುವಂತೆ ಮಾಡಿದೆ.

ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಮುಂದಿನ 90 ದಿನಗಳ ಕಾಲ ಈ ಪ್ರದೇಶದಲ್ಲಿ ಕೋಳಿ ಸಾಕಾಣಿಕೆ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ.

ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದರೂ, ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಿದೆ.

ಮುಖ್ಯ ಮುನ್ನೆಚ್ಚರಿಕೆಗಳು:

ಅನಾರೋಗ್ಯ ಅಥವಾ ಸತ್ತ ಪಕ್ಷಿಗಳು ಕಂಡುಬಂದರೆ ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು, ಮಾಂಸ ಮತ್ತು ಮೊಟ್ಟೆಗಳನ್ನು ಚೆನ್ನಾಗಿ ಬೇಯಿಸಿ ಮಾತ್ರ ಸೇವಿಸಬೇಕು,ವದಂತಿಗಳಿಗೆ ಕಿವಿಗೊಡಬಾರದು

ಸರ್ಕಾರವು ಮುಂದಿನ ದಿನಗಳಲ್ಲಿಯೂ ನಿರಂತರ ನಿಗಾವಹಿಸುವ ಕಾರ್ಯವನ್ನು ಮುಂದುವರಿಸಲಿದ್ದು, ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande